ಲೋಕದರ್ಶನ ವರದಿ
ಇಂಡಿ 19: ಪಟ್ಟಣದ ಓಂ ನಗರದಲ್ಲಿರುವ 11ನೇ ವಾರ್ಡ ಸಮರ್ಪಕ ಚರಂಡಿ ವ್ಯವಸ್ಥೆ, ರಸ್ತೆ ವ್ಯವಸ್ಥೆ ಇಲ್ಲದೆ ವಾರ್ಡನಲ್ಲಿ ಗಬ್ಬು ವಾಸನೆ ಹರಡುವುದಲ್ಲದೆ ರಸ್ತೆ ಮೇಲೆ ಚರಂಡಿ ನೀರು ಹರಿದಾಡುತ್ತಿರುವುದರಿಂದ ಸೂಳ್ಳೆಗಳ ಕಾಟ ಹೆಚ್ಚಾಗಿದೆ.
ಪುರಸಭೆಗೆ ಕಳೆದ ಮೂರು ನಾಲ್ಕುತಿಂಗಳ ಹಿಂದೆ ಚುನಾವಣೆ ಜರುಗಿದ್ದು, ವಾರ್ಡ ಜನ ಅಭ್ಯಥರ್ಿಯೋರ್ವರನ್ನು ಆಯ್ಕೆ ಮಾಡಿದ್ದಾರೆ. ಆದರೆ ಅಲ್ಲಿನ ನಿವಾಸಿಗಳಿಗೆ ಇನ್ನೂ ಹಳೆಯ ಗೋಳು ತಪ್ಪಿಲ್ಲ. ಸ್ವಲ್ಪ ಮಳೆಯಾದರೆ ಸಾಕು ಪಟ್ಟಣದ 12ನೇ ವಾರ್ಡ್ನಿಂದ ನೀರು ಹರಿದು ಬರುತ್ತದೆ. ಚರಂಡಿ ವ್ಯವಸ್ಥೆ ಇಲ್ಲದ ಕಾರಣ ನೀರು ಕೆಲ ನಿವಾಸಿಗಳ ಮನೆಯಲ್ಲೇ ಹೋಗುತ್ತವೆ.
ಪುರಸಭೆಯವರಿಗೆ ಈ ವಾರ್ಡ್ನ ಅನೇಕ ನಿವಾಸಿಗಳು ಚರಂಡಿ ನಿಮರ್ಾಣ ಮಾಡಲು ಮತ್ತು ಸಿಸಿ ರಸ್ತೆ ನಿರ್ಮಾಣ ಮಾಡಲು ಹತ್ತಾರು ಬಾರಿ ಮನವಿ ಮಾಡಿಕೊಂಡರು ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸುತ್ತಾರೆ.
ಪಟ್ಟಣದಲ್ಲಿ ಮಾತ್ರ ಸ್ವಲ್ಪ ಪ್ರಮಾಣದಲ್ಲಿ ಮಳೆಯಾಗಿದೆ. ಆ ನೀರು ಹಾಗೂ ವಾರ್ಡಗಳಲ್ಲಿನ ಕೊಳಚೆ ನೀರು ಇಡೀ ವಾರ್ಡನಲ್ಲಿ ಹರಿದಾಡಿ ಗಬ್ಬೆದ್ದು ನಾರುತ್ತಿದೆ. ಹೀಗಾಗಿ ಅಲ್ಲಿನ ನಿವಾಸಿಗಳು ಮೂಗು ಮುಚ್ಚಿಕೊಂಡೆ ತಿರುಗಾಡುವ ಪರಿಸ್ಥಿತಿ ಎದುರಾಗಿದೆ.
ಇನ್ನಾದರೂ ಸಂಬಂಧಿಸಿದ ಪುರಸಭೆ ಅಧಿಕಾರಿಗಳು ಹಾಗೂ ಪುರಸಭೆ ಸದಸ್ಯರು ಎಚ್ಚೆತ್ತು ಈ ವಾರ್ಡ್ನ ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಅರವಿಂದ ಪಾಟೀಲ, ಗಣೇಶ ಮಹೇಂದ್ರಕರ, ರಾಜಶೇಖರ ಹದಗಲ್ಲ, ಗಂಗಾಧರ ತೆನ್ನಳ್ಳಿ, ಮಂಜುನಾಥ ತೆನ್ನಳ್ಳಿ, ಅನೀಲಕುಮಾರ ಜಂಪಾ, ಡಾ.ಸೋಮನಾಥ ಮರಗೂರ, ರಮೇಶ ಕಾಸರ, ಸಿ.ಎಸ್.ಝಳಕಿ ಮನವಿ ಮಾಡಿಕೊಂಡರು.