ಲೋಕದರ್ಶನ ವರದಿ
ಇಂಡಿ 06: ಇಂಡಿ ಪ್ರತ್ಯೇಕ ಜಿಲ್ಲೆಯಾದರೆ ಎಲ್ಲ ವಿಧದಲ್ಲಿಯೂ ಅನುಕೂಲವಾಗಲಿದೆ. ಈಗಾಗಲೆ ಹಲವಾರು ಜಿಲ್ಲಾ ಮಟ್ಟಕ್ಕೆ ಅವಶ್ಯವಿರುವ ಇಲಾಖೆಗಳು ನಗರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಜಿಲ್ಲೆ ರಚನೆಗೆ ಯಾವುದೇ ತೊಂದರೆಯಿಲ್ಲ. ಸರ್ಕಾರ ಜಿಲ್ಲೆಗಳ ವಿಂಗಡಣೆ ಮಾಡುವಾಗ ಇಂಡಿ ಪಟ್ಟಣಕ್ಕೆ ಮೊದಲು ಆಧ್ಯತೆ ನೀಡಿ ಇಂಡಿಯನ್ನು ಜಿಲ್ಲಾ ಕೆಂದ್ರವನ್ನಾಗಿ ಮಾಡಬೇಕು ಎಂದು ಪ್ರತ್ಯೇಕ ಜಿಲ್ಲಾ ಹೋರಾಟ ಸಮೀತಿ ಅಧ್ಯಕ್ಷ, ನ್ಯಾಯವಾದಿ ಸಿದ್ದಣ್ಣ ಬೂದಿಹಾಳ ಹೇಳಿದರು.
ರವಿವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಜಿಲ್ಲಾ ನ್ಯಾಯಾಲಯಕ್ಕಾಗಿ ಈಗಾಗಲೆ ವಕೀಲರ ಸಂಘದಿಂದ ಉಚ್ಛ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿದೆ. ಇಂಡಿಯಿಂದ ರಾಜಧಾನಿಗೆ ಹೋಗಲು ರೈಲು ಹಾಗೂ ಬಸ್ಸುಗಳ ಸೌಲಭ್ಯವಿದೆ. ಭೌಗೋಳಿಕವಾಗಿ ಇಂಡಿ ವಿಸ್ತಾರ ಹೊಂದಿದ್ದು ಸುತ್ತಲಿನ ತಾಲ್ಲೂಕುಗಳಿಗೆ ಕೇಂದ್ರ ಸ್ಥಾನವಾಗಿದೆ. ಸ್ಪಂದಿಸಿ ಹೋರಾಟಕ್ಕಿಳಿಯಬೇಕಿದೆ ಎಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಬಿರಾದಾರ, ಜಂಗಮ ಸಮಾಜದ ಅಧ್ಯಕ್ಷ ನಿಂಬರಗಿಮಠ, ಜೈನ ಸಮಾಜದ ಅಧ್ಯಕ್ಷ ಅಜೀತ್ ಧನಶೆಟ್ಟಿ, ಗಜಾಕೋಶ, ಪ್ರಭು ಹೊಸಮನಿ, ರಾಜು ಕುಲಕಣರ್ಿ ಮತ್ತಿತರರು ಇದ್ದರು. ಇಂಡಿ ಪ್ರತ್ಯೇಕ ಜಿಲ್ಲಾ ಹೋರಾಟ ಸಮೀತಿ ರಚಿಸಲಾಯಿತು.
ಗೌರವಾಧ್ಯಕ್ಷರನ್ನಾಗಿ ಶಾಸಕ ಯಶವಂತ್ರಾಯಗೌಡ ಪಾಟೀಲ, ಅಧ್ಯಕ್ಷರಾಗಿ ನ್ಯಾಯವಾದಿ ಎಸ್.ಬಿ. ಬೂದಿಹಾಳ, ಉಪಾಧ್ಯಕ್ಷರಾಗಿ ಶಾಂತೇಶ ನಿಂಬರಗಿಮಠ, ಪ್ರಭು ಹೊಸಮನಿ, ಪ್ರ. ಕಾರ್ಯದಶರ್ಿ ಅಜೀತ ಧನಶೆಟ್ಟಿ, ಸಂಘಟನಾ ಕಾರ್ಯದರ್ಶಿಯಾಗಿ ಬಿ.ಬಿ. ಬಿರಾದಾರ, ಸಹ ಕಾರ್ಯದಶರ್ಿಯಾಗಿ ಭಾರತಿ ವಾಲಿ, ಖಜಾಂಚಿಯಾಗಿ ಅಶೋಕ ಗಜಾಕೋಶ, ನಿದರ್ೇಶಕರಾಗಿ ಭೀಮನಗೌಡ ಪಾಟೀಲ ಅವರನ್ನು ನೇಮಕ ಮಾಡಲಾಯಿತು.