ರಾಣೇಬೆನ್ನೂರು 28 : ಇಂದಿನ ದಿನಗಳಲ್ಲಿ ಚುನಾವಣೆಯಲ್ಲಿ ಮತದಾನವು ನಿರೀಕ್ಷಿತ ಪ್ರಮಾಣದಲ್ಲಿ ಮತದಾನ ಅಗುತ್ತಿಲ್ಲ. ಕಾರಣ ಬೇರೆ ಬೇರೆ ಊರುಗಳಿಗೆ ಉದ್ಯೋಗಕ್ಕಾಗಿ ವಲಸೆ ಹೊದವರು ಮತದಾನಕ್ಕೆ ಅಡ್ಡ ಆಗಬಾರದೆಂದು, ಸರಕಾರ, ಸರಕಾರಿ ರಜೆ ಘೋಷಿಸಿ ಮತದಾನ ಪ್ರಭುಗಳಿಗೆ ಮತದಾನಕ್ಕಾಗಿ ಆಸ್ಪದ ವದಗಿಸಿಕೊಟ್ಟರೆ ಪ್ರಜೆಗಳು ಆ ರಜೆ ದಿನವನ್ನು ತಮ್ಮ ಸ್ವಾರ್ಥಕ್ಕಾಗಿ ಉಪಯೋಗಿಸಿಕೊಳ್ಳುತ್ತಾರೆ ಎಂದು ಚಿತ್ರ ಕಲಾವಿದ ಡಾ|| ಜಿ ಜೆ ಮೆಹೆಂದಳೆ ಹೇಳಿದರು.
ತಾಲೂಕಿನ ಕವಲೆತ್ತು ಗ್ರಾಮದ ಪ್ರಾಥಮಿಕ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮತದಾನದಂದು ಊರುಗಳಿಗೆ ಹೋಗಿ ಮತ ಚಲಾಯಿಸುವದನ್ನು ಬಿಟ್ಟು ಹೊಸ ಹೊಸ ತಾಣಗಳಿಗೆ ಪ್ರವಾಸ ಹೋಗುವುದು ಸವರ್ೇ ಸಾಮಾನ್ಯ ವಾದುದು ಕಂಡು ಬರುತ್ತಿದೆ. ಅದಕ್ಕಾಗಿ ಮತದಾನದ ಕಡ್ಡಾಯದ ಅವಶ್ಯಕತೆ ಇದೆ. ಮತದಾನ ಕಡ್ಡಾಯ ಮಾಡಿರಿ, ಮತದಾನ ಮಾಡದವರ ಮತದಾನದ ಗುರುತಿನ ಚೀಟಿ ಆಧಾರ ಕಾರ್ಡನ್ನು ರದ್ದುಪಡಿಸಬೇಕು ಎಂದರು.
ಮೆಹೆಂದಳೆ ರಚಿಸಿದ ಕೊಲಾಜ ಚಿತ್ರವನ್ನು ಶಾಲಾ ಉಪಪ್ರಾಂಶುಪಾಲಿನಿ ಆರ್ ಎ ಪಾಟೀಲರವರು ಬಿಡುಗಡೆ ಮಾಡಿದರು. ಡಿ ಎಚ್ ಎಣ್ಣಿ, ಗ್ರಾಸಿಂ ಕಾಲೋನಿಯ ಆಡಳಿತ ವಿಭಾಗದ ಮಲ್ಲಿಕಾಜರ್ುನ ಶೆಟ್ರ, ಪ್ರಮೋದ ಬಾಪಟರವರು ಸಹ ಶಿಕ್ಷಕೀಯರಾದ ಗೀತಾ ಮರೋಳ, ಆರ್ ಬಿ ಕಂದಾಟಿ, ಎಂ ಸಿ ಆಕರ್ಾಚಾರಿ ಹಾಗೂ ಶಾಲಾ ವಿದ್ಯಾಥರ್ಿಗಳು ಇದ್ದರು.