ಲೋಕದರ್ಶನವರದಿ
ರಾಣೇಬೆನ್ನೂರ 05: ಸಮಾಜದಲ್ಲಿ ವೈದ್ಯರಿಗೆ ದೇವರ ಸ್ಥಾನ-ಮಾನವನ್ನು ಕಲ್ಪಿತವಾಗಿದೆ. ವೈದ್ಯಕೀಯ ಕ್ಷೇತ್ರ ಅತ್ಯಂತ ಪವಿತ್ರವಾಗಿದ್ದು, ಅಂತಹ ಪವಿತ್ರವಾದ ಕೆಲಸವನ್ನು ಪ್ರತಿಯೊಬ್ಬ ವೈದ್ಯರು ನಿಷ್ಠೆಯಿಂದ ಮಾಡಲು ಮುಂದಾಗಬೇಕು ಎಂದು ಚೌಡಯ್ಯದಾನಪುರ ಚಿತ್ರಶೇಖರ ಶಿವಾಚಾರ್ಯರು ಹೇಳಿದರು.
ನಗರದಲ್ಲಿ ಡಾ. ಆನಂದ ದುರ್ಗದಸೀಮಿ ಕುಟುಂಬಸ್ಥರು ನೂತನವಾಗಿ ನಿಮರ್ಿಸಿದ ಆನಂದ್ ಕ್ಲಿನಿಕ್ ಉದ್ಘಾಟನೆ ಮತ್ತು ಜಿಲ್ಲಾಮಟ್ಟದ ಕವಿಗೊಷ್ಠಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ರವಿ ಕಾಣದ್ದನ್ನು ಕವಿ ಕಾಣುತ್ತಾನೆ ಎನ್ನುವ ನಾಣ್ನುಡಿ ಅದು ವಾಸ್ತವಿಕ ಸತ್ಯವಾಗಿದೆ. ಕವಿಗಳು ಮತ್ತು ಕಲಾವಿದರು ಈ ದೇಶದ ಸಾಹಿತ್ಯ-ಸಂಸ್ಕೃತಿ ಪರಂಪರೆಯ ಹರಿಕಾರರಾಗಿದ್ದಾರೆ. ಸಮಾಜದಲ್ಲಿ ಅವರ ಸಾಹಿತ್ಯ ಕ್ಷೇತ್ರವನ್ನು ಮತ್ತು ಅವರಲ್ಲಿರುವ ಕವಿತ್ವವನ್ನು ಗುರುತಿಸಿ ಪ್ರೊತ್ಸಾಹಿಸಲು ವೇದಿಕೆಗಳ ಅವಶ್ಯಕತೆ ಇದೆ ಅಂತಹ ವೇದಿಕೆಯನ್ನು ಕಲ್ಪಿಸಿರುವ ಡಾ. ಆನಂದ ಅವರು ತಮ್ಮ ಕುಟುಂಬ ಪರಂಪರೆಯ ಕಾವ್ಯ ಮತ್ತು ಸಾಹಿತ್ಯ ಪ್ರೇಮವನ್ನು ಹರಿಸಿದ್ದಾರೆ.
ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಡಾ. ಎಚ್.ಕೆ. ಕದರಮಂಡಲಗಿ ವಹಿಸಿದ್ದರು. ಮಕ್ಕಳ ಸಾಹಿತ್ಯ ವೇದಿಕೆ ಅಧ್ಯಕ್ಷ ಜೆ.ಎಂ. ಮಠದರವರು ಕವಿಗೋಷ್ಠಿ ಉದ್ಘಾಟಿಸಿ ಚಾಲನೆ ನೀಡಿದರು. ಕವಿಗೊಷ್ಠಿಯಲ್ಲಿ ಜಿಲ್ಲೆಯ 30ಕ್ಕೂ ಹೆಚ್ಚು ಕವಿಗಳು ಪಾಲ್ಗೊಂಡು ತಮ್ಮ ಕವನ ವಾಚಿಸಿದರು.
ಡಾ. ಶೈಲಜಾ ದುರ್ಗದಸೀಮಿ, ಬಸವರಾಜಪ್ಪ ಮೆಣಸಿನಕಾಯಿ, ಸಾಹಿತಿ ಎಸ್.ಕೆ. ದುರ್ಗದಶೀಮಿ, ನಿಂಗಪ್ಪ ವಿಭೂತಿ ವಿ.ವೀ. ಹರಪನಹಳ್ಳಿ, ಕೆ.ಸಿ. ಕೋಮಲಾಚಾರ, ಪ್ರಭಾಕರ ಶಿಗ್ಲಿ, ಆರ್.ಎಮ್. ಕಮ್ಮಾರ, ಸೀತಾರಾಮ ಕಣೇಕಲ್, ಶಶಿಧರ ಮಠದ, ರೇಣುಕಾ ಕುರುವತ್ತಿ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.