ಲೋಕದರ್ಶನವರದಿ
ರಾಣೇಬೆನ್ನೂರು 08: ನಮ್ಮ ತಾಲೂಕಿನಲ್ಲಿ 2193 ವಿಶೇಷಚೇತನ ಮತದಾರರಲ್ಲಿ 45 ತೀವ್ರತರ ವಿಕಲತೆಯುಳ್ಳ ಮತದಾರರು ಇದ್ದಾರೆ, ಸುಗಮವಾಗಿ ಮತಗಟ್ಟೆಗೆ ಬಂದು ಮತದಾನ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್ ಶ್ರೀಧರ್ ಹೇಳಿದರು.
ತಾಲೂಕಿನ ಮುದೇನೂರ ಗ್ರಾಮದಲ್ಲಿ ಮತದಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮತದಾನದಿಂದ ವಂಚಿತರಾಗಬಾರದು, ಕಳೆದ ಬಾರಿಗಿಂತ ಈ ಬಾರಿ ನೂರಕ್ಕೆ ನೂರರಷ್ಟು ಮತದಾನ ಪ್ರಮಾಣ ನಡೆಯುವಂತೆ ಮತಗಟ್ಟೆ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ ಎಂದರು.
ವಿಶೇಷಚೇತನ ಮತಗಟ್ಟೆ ಅಧಿಕಾರಿ ಜಗದೀಶ ಕೆ ಮಾತನಾಡಿ, ಮತದಾನ ಮಾಡಲು ಸಮಸ್ತ ನಾಗರಿಕರು ಸಹಕಾರ ನೀಡಬೇಕು, ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಳದಲ್ಲಿ ವಿ ಆರ್ ಡಬ್ಲೂ ಎಂದು ಕಾರ್ಯನಿರ್ವಹಿಸುತ್ತಿದ್ದು ಅವರ ಮಾರ್ಗದರ್ಶನ ಪಡೆದು ವಿಶೇಷಚೇತನರು ತಪ್ಪದೇ ಮತದಾನ ಮಾಡಬೇಕು ಎಂದರು.
ಮುಖ್ಯಶಿಕ್ಷಕಿ ಅನ್ನಪೂರ್ಣ ಪಾಟೀಲ, ಸಹಶಿಕ್ಷಕ ಸುರೇಶ ಕರೂರ, ಪಿಡಿಒ ಗಣೇಶ ಬಾನಿ, ಎಚ್.ಆರ್. ಎಲಿವಾಳ, ಅಂಗನಾಡಿ ಮತ್ತು ಆಶಾ ಕಾರ್ಯಕತರ್ೆಯರು, ವಿದ್ಯಾಥರ್ಿಗಳು ಇದ್ದರು.