ವೈದ್ಯಕೀಯ ವಿದ್ಯಾರ್ಥಿಗಳಿಗೆ ವಿವಿ ಪ್ಯಾಟ ಪ್ರಾತ್ಯಕ್ಷಿಕೆ

ಲೋಕದರ್ಶನವರದಿ

ಹಾವೇರಿ೧೦: ಮತದಾನ ಅತ್ಯಂತ ಪವಿತ್ರ ಹಕ್ಕು, ಪ್ರಜಾಪಭುತ್ವದ ಬಲವರ್ದನೆಗಾಗಿ ಎಲ್ಲಾರು ಕಡ್ಡಾಯವಾಗಿ ಮತದಾನವನ್ನು ಮಾಡಬೇಕು ಹಾಗೂ ಮತದಾನದಲ್ಲಿ ಭಾಗವಹಿಸುವದು ಎಲ್ಲರ ಕರ್ತವ್ಯವಾಗಿದೆೆ ಎಂದು ತಾಲೂಕ ಪಂಚಾಯತಿ ವತಿಯಿಂದ ಹಾವೇರಿ ಸಿಂದಗಿ ಶಾಂತವೀರೇಶ್ವರ ಆಯರ್ುವೇದಿಕ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವಿದ್ಯಾಥರ್ಿಗಳಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ ವಿವಿ ಪ್ಯಾಟ ಪ್ರಾತ್ಯಕ್ಷಿಕೆ ಮತ್ತು ಪ್ರತಿಜ್ಞಾ ವಿಧಿಯನ್ನು ಬೋಧಿಸಿ ತಾವೇ ಸ್ವತಃ ವಿವಿಪ್ಯಾಟ್ ಮೂಲಕ ಮತದಾನ ಮಾಡಿ ಪ್ರತಿಯೊಬ್ಬ ವಿದ್ಯಾಥರ್ಿಗಳು ಮತದಾನದ ಹಕ್ಕನ್ನು ಚಲಾಯಿಸಬೇಕೆಂದು ಮಾತನಾಡಿದ ತಾಲೂಕ ಪಂಚಾಯತಿ ಕಾರ್ಯನಿವರ್ಾಹಕ ಅಧಿಕಾರಿಯಾದ ಅನ್ನಪೂರ್ಣ ಮುದುಕಮ್ಮನವರ ತಿಳಿಸಿದರು.

 ಮುಂದುವರೆದು ಪ್ರಜ್ಞಾವಂತ ಮತದಾರರು ಪ್ರಜಾ ಪ್ರಭುತ್ವದ ಮೂಲಭೂತ ಹಕ್ಕಾದ  ಮತದಾನದಲ್ಲಿ ಕಡ್ಡಾಯವಾಗಿ ಪಾಲ್ಗೊಂಡು ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕಿದೆ ನಾವು ಮತದಾನ ಮಾಡುವುದಲ್ಲದೆ ನಮ್ಮ ಸುತ್ತಮುತ್ತಲಿನವರು ಮತದಾನ ಮಾಡಿದ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. 

          ಮತದಾನದಿಂದ ದೂರ ಉಳಿದವರಿಗೆ ಮತದಾನದ ಮಹತ್ವ  ಕುರಿತು, ತಿಳಿಹೇಳುವ ಮೂಲಕ ಮತದಾನ ಮಾಡುವಂತೆ ಪ್ರೇರೆಪಿಸಬೇಕು ಮತ್ತು  ತಾಲೂಕಾ ವ್ಯಾಪ್ತಿಯಲ್ಲಿ ಮತದಾನ ಶೇಕಡಾ ಪ್ರಮಾಣ ಹೆಚ್ಚಿಸುವಲ್ಲಿ ಕಾಳಜಿವಹಿಸಬೇಕಿದೆ ಎಂದರು.  

 ತಾಲೂಕ ಅಕ್ಷರ ದಾಸೋಹ ಸಹಾಯಕ ನಿದರ್ೇಶಕರಾದ ಪುಷ್ಪಲತಾ ಬಿದರಿ, ಆಯುವರ್ೆದ ವೈದ್ಯಕೀಯ ಪ್ರಾಚಾರ್ಯರು, ಸಿಬ್ಬಂದಿ ವರ್ಗದವರು,  ತಾಲೂಕ ಪಂಚಾಯತಿ ಸಿಬ್ಬಂದಿ ವರ್ಗದವರು, ಸೆಕ್ಟರ್ ಅಧಿಕಾರಿಗಳು, ಹಾಜರಿದ್ದರು.