ನವದೆಹಲಿ 03: ಕಳೆದ ತಿಂಗಳು ಆಸ್ಟ್ರೇಲಿಯಾ ಕ್ರಿಕೆಟಿಗರ ಚೆಂಡೂ ವಿರೂಪ ಪ್ರಕರಣ ಸಾಕಷ್ಟು ಸುದ್ದಿ ಮಾಡಿತ್ತು. ಇದೀಗ ಚೆಂಡು ವಿರೂಪ ಮಾಡಿ ಸಿಕ್ಕಿಬಿದ್ರೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಯಿಂದ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.
ಚೆಂಡು ವಿರೂಪ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ತಿದ್ದುಪಡಿ ತರಲಾಗಿದ್ದು ಈ ಹೊಸ ನಿಯಮಕ್ಕೆ ಐಸಿಸಿ ಮಂಡಳಿಯ ನಿದರ್ೆಶಕರಿಂದ ಸಂಪೂರ್ಣ ಒಪ್ಪಗೆ ಸಿಕ್ಕಿದೆ.
ನೂತನ ತಿದ್ದುಪಡಿ ಪ್ರಕಾರ ಚೆಂಡು ವಿರೂಪ ಮಾಡಿ ಸಿಕ್ಕಿಬಿದ್ದು ಆರೋಪ ಸಾಬೀತಾದರೆ ಅಂತಹ ಆಟಗಾರನಿಗೆ 6 ಟೆಸ್ಟ್ ಅಥವಾ 12 ಏಕದಿನ ಪಂದ್ಯದಿಂದ ಬ್ಯಾನ್ ಮಾಡಲಾಗುತ್ತದೆ.
ಐಸಿಸಿ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಡೇವಿಡ್ ರಿಚಡರ್್ ಸನ್ ಸಭೆಯ ಬಳಿಕ ಮಾತನಾಡಿ ಈ ತಿದ್ದುಪಡಿ ಜಂಟಲ್ ಮ್ಯಾನ್ ಗೇಮ್ ಅನ್ನು ಮತ್ತಷ್ಟು ಸುಧಾರಿಸಲು ಸಾಧ್ಯವಾಗುತ್ತದೆ ಎಂದು
ಹೇಳಿದ್ದಾರೆ.
ದಕ್ಷಿಣ ಆಫ್ರಿಕಾದ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆಟಗಾರ ಕ್ಯಾಮೆರಾನ್ ಬ್ಯಾನ್ ಕ್ರಾಫ್ ಚೆಂಡೂ ವಿರೂಪಗೊಳಿಸಿದ ಪ್ರಕರಣದಲ್ಲಿ ಸಿಲುಕಿದ್ದರು. ಈ ಪ್ರಕರಣದಲ್ಲಿ ತಂಡದ ನಾಯಕರಾಗಿದ್ದ ಸ್ಟೀವ್ ಸ್ಮಿತ್ ಹಾಗೂ ಉಪನಾಯಕ ಡೇವಿಡ್ ವಾರ್ನರ್ ತಲೆ ದಂಡವಾಗಿತ್ತು. ಅಲ್ಲದೆ ನಿಷೇಧಕ್ಕೂ ಗುರಿಯಾಗಿದ್ದಾರೆ.