ಹೂವಿನಹಡಗಲಿ: ತಾಲೂಕಿನ ಸುಕ್ಷೇತ್ರ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ ಇಂದಿನಿಂದ

ಲೋಕದರ್ಶನ ವರದಿ

ಹೂವಿನಹಡಗಲಿ 31: ತಾಲೂಕಿನ ಸುಕ್ಷೇತ್ರ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ ಹಿನ್ನೆಲೆಯಲ್ಲಿ ಸಿದ್ಧತಾ ಕಾರ್ಯ ಭರದಿಂದ ನಡೆದಿದೆ. ಮೈಲಾರ ಗ್ರಾಮದಲ್ಲಿ ಈಗಾಗಲೇ ಚರಂಡಿ ಸ್ವಚ್ಛತೆ, ಬೀದಿ ದೀಪಗಳ ವ್ಯವಸ್ಥೆ, ರಸ್ತೆ ದುರಸ್ತಿ ಕಾಮಗಾರಿ ಆರಂಭವಾಗಿದೆ. ಭಕ್ತರಿಗಾಗಿ ಗ್ರಾಪಂನಿಂದ 7 ಕೈ ಪಂಪ್, 13 ಬೋರ್ವೆಲ್, 23 ಸಿಸ್ಟನ್, 10 ಕುಡಿವ ನೀರಿನ ತೊಟ್ಟಿ, 10 ಸ್ಟ್ಯಾಂಡ್ ಪೋಸ್ಟ್ ಹಾಗೂ 200 ತಾತ್ಕಾಲಿಕ ಶೌಚಗೃಹಗಳ ವ್ಯವಸ್ಥೆ ಮಾಡಲಾಗುತ್ತಿದೆ. ಜನರ ಆರೋಗ್ಯ ದೃಷ್ಟಿಯಿಂದ ಗ್ರಾಮದಲ್ಲಿ ಸೊಳ್ಳೆಗಳ ಉಪಟಳ ನಿಯಂತ್ರಣಕ್ಕೆ ಎರಡು ಸಾವಿರ ಕೆಜಿ ಬ್ಲೀಚಿಂಗ್ ಪೌಡರ್, 500 ಕೆಜಿ ಸುಣ್ಣದ ಪುಡಿ ತರಿಸಲಾಗಿದೆ. ಅಲ್ಲದೆ 4 ಫಾಗಿಂಗ್ ಮಿಷನ್ಗಳನ್ನು ಸುಸ್ಸಜ್ಜಿತ ಸ್ಥಿತಿಯಲ್ಲಿಡಲಾಗಿದೆ. ಜಾತ್ರೆಗೆ ರಾಜ್ಯ ಹಾಗೂ ಹೊರರಾಜ್ಯದಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಬರುವ ಹಿನ್ನೆಲೆಯಲ್ಲಿ ಕುಡಿವ ನೀರಿನ ಸಮಸ್ಯೆ ಆಗದಂತೆ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. ಸಾರಿಗೆ ವ್ಯವಸ್ಥೆ, ಭದ್ರತೆಗಾಗಿ ಜಿಲ್ಲಾಡಳಿತ, ತಾಲೂಕು ಆಡಳಿತ ಪೊಲೀಸ್ ಸಿಬ್ಬಂದಿ ನೇಮಿಸಲಿದೆ. 

ಅನಧಿಕೃತ ಅಂಗಡಿಗಳ ತೆರವು: 

ಮೈಲಾರ ಲಿಂಗೇಶ್ವರ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಅಕ್ರಮವಾಗಿ ಹಾಕಿಕೊಂಡಿದ್ದ ಅಂಗಡಿಗಳನ್ನು ಗ್ರಾಪಂ ಸಿಬ್ಬಂದಿ ಗುರುವಾರ ತೆರವುಗೊಳಿಸಿದರು. ಹಲವು ವರ್ಷಗಳಿಂದ ಅಂಗಡಿ ನಡೆಸುತ್ತಿದ್ದ ಮಾಲೀಕರು ಹಾಗೂ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯಿತು. ಭಕ್ತರ ಹಿತದೃಷ್ಟಿಯಿಂದ ಸಕರ್ಾರ ಆದೇಶ ಹೊರಡಿಸಿದ್ದರಿಂದ ವ್ಯಾಪಾರಿಗಳೇ ಅಂಗಡಿಗಳನ್ನು ತೆಗೆದರು. 

ನಾಳೆಯಿಂದ ವಿವಿಧ ಕಾರ್ಯಕ್ರಮ: 

ಫೆ.1ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿವೆ. ಫೆ.1ರಂದು ರಥ ಸಪ್ತಮಿ, ಮಾರ್ತಂಡಾ ಭೈರವನ ಡೆಂಕನಮರಡಿಯ ಆರೋಹಣ, ಕಡುಬಿನ ಕಾಳಗ ನಡೆಯಲಿದೆ. ಫೆ.9 ರಂದು ಭರತ ಹುಣ್ಣಿಮೆ, ಧ್ವಜಾರೋಹಣ, ಫೆ.10ರಂದು ತ್ರಿಶೂಲ ಪೂಜೆ, ಫೆ.11ರಂದು ಬೆಳಗ್ಗೆ 5 ಗಂಟೆಗೆ ಶ್ರೀ ಸ್ವಾಮಿಯು ಮಲ್ಲಾಸುರ ಸಂಹಾರಕ್ಕೆ ಡೆಂಕನ ಮರಡಿಗೆ ಗುಪ್ತಮೌನ ಸವಾರಿ, ಸಂಜೆ 5.30 ಕ್ಕೆ ಶ್ರೀ ಮೈಲಾರ ಲಿಂಗೇಶ್ವರ ಸ್ವಾಮಿಯ ದೇವಸ್ಥಾನದ ಧರ್ಮಕರ್ತರಿಂದ ಭಂಟಾರ ಆಶೀವರ್ಾದ ನಂತರ ಗೊರವಯ್ಯ ಕಾಣರ್ಿಕ ನುಡಿಯಲಿದ್ದಾನೆ. 

ಮೈಲಾರ ಲಿಂಗೇಶ್ವರ ಜಾತ್ರೆಯಲ್ಲಿ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಗ್ರಾಪಂನಿಂದ ಅಗತ್ಯ ಸೌಕರ್ಯ ಕಲ್ಪಿಸಲಾಗುತ್ತಿದೆ. 

-ಯು.ಎಚ್.ಸೋಮಶೇಖರ್ ತಾಪಂ ಇಒ, ಹೂವಿನಹಡಗಲಿ 

ಮೈಲಾರ ಜಾತ್ರೆಗೆ ಬರುವ ಭಕ್ತರಿಗೆ ನೀರಿನ ಸಮಸ್ಯೆ ಆಗದಂತೆ ಶುದ್ಧ ಕುಡಿವ ನೀರಿನ ಘಟಕಗಳನ್ನು ನಿಮರ್ಾಣ ಮಾಡಲಾಗುತ್ತದೆ. ಜಾತ್ರೆಯಲ್ಲಿ ಭಕ್ತರಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ಎಲ್ಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. 

-ಕೆ.ರಾಘವೇಂದ್ರರಾವ್ ತಹಸೀಲ್ದಾರ್, ಹೂವಿನಹಡಗಲಿ