ಹೂವಿನಹಡಗಲಿ: ಪ್ರಶ್ನೆ ಪತ್ರಿಕೆ ಕಾರ್ಯಾಗಾರ

ಲೋಕದರ್ಶನ ವರದಿ

ಹೂವಿನಹಡಗಲಿ 22: ಮಾತೃಭಾಷೆಯ ಕನ್ನಡ ವಿಷಯದಲ್ಲಿ 10ನೇ ತರಗತಿಯಲ್ಲಿ ಅನುತ್ತೀರ್ಣರಾಗದಂತೆ ಕನ್ನಡ ವಿಷಯ ಶಿಕ್ಷಕರು ಎಚ್ಚರವಹಿಸಬೇಕು ಎಂದು ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಪಿ.ಪ್ರಕಾಶ್ ಹೇಳಿದರು.

ಪಟ್ಟಣದ ವಿದ್ಯಾಂಜಲಿ ಪ್ರೌಢಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಕನ್ನಡ ಪ್ರಶ್ನೆ ಪತ್ರಿಕೆ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ಕಳೆದ ಶೈಕ್ಷಣಿಕ ಸಾಲಿನಲ್ಲಿ ಕನ್ನಡ ವಿಷಯದಲ್ಲಿ ಅನುತ್ತೀರ್ಣರಾಗಿದ್ದಾರೆ ಶಿಕ್ಷಕರು ಕನ್ನಡದ ವ್ಯಾಕರಣ, ಪ್ರಬಂಧ, ಪತ್ರಬರಹ ಬಗ್ಗೆ ಪರಿಣಾಮಕಾರಿ ಬೋಧನಾ ಶೈಲಿಯನ್ನು ಅಳವಡಿಸಿಕೊಂಡು ಗುಣಾತ್ಮಕ ಫಲಿತಾಂಶಕ್ಕೆ ಸಹಕರಿಸಬೇಕು ಎಂದರು.

ವಿವೇಕಾನಂದ ವಿದ್ಯಾ ಸಂಸ್ಥೆ ಎಂ.ಎಂ.ಗುರುಬಸವರಾಜ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಇಂತಹ ಕಾರ್ಯಾಗಾರ ಅಗತ್ಯ ಎಂದರು. ಬಸಯ್ಯ ನೆರೆಗಲ್ ಅವರು ಕನ್ನಡ ಮತ್ತು ಗಣಿತ ವಿಷಯ ಬಗ್ಗೆ ಶಿಕ್ಷಕರಿಗೆ ತರಬೇತಿ ನೀಡಿದರು. ಆನಂದ ರೆಡ್ಡಿ, ಹುಸೇನ್ ಪೀರ್, ಬಿ.ಬಸವರಾಜ, ಮಂಜುನಾಥ, ಭೀಮಪ್ಪ ಇದ್ದರು. ತಾಲೂಕಿನ ನಾನಾ ಪ್ರೌಢಶಾಲೆಯ ಶಿಕ್ಷಕರು ಭಾಗವಹಿಸಿದ್ದರು.