ಹೂವಿನಹಡಗಲಿ: ನಟ ಯಶ್ ಜನ್ಮದಿನ: ಸಸಿಗಳ ವಿತರಣೆ

ಲೋಕದರ್ಶನ ವರದಿ

ಹೂವಿನಹಡಗಲಿ 19: ರಾಂಕಿಂಗ್ ಸ್ಟಾರ್ ನಟ ಯಶ್ ಹುಟ್ಟುಹಬ್ಬದ ನಿಮಿತ್ತ ಪಟ್ಟಣದ ಅಖಿಲ ಕರ್ನಾಟಕ ಯಶ್ ಅಭಿಮಾನ ಬಳಗದಿಂದ ಇಲ್ಲಿನ ನಾನಾ ಕಚೇರಿಗಳಿಗೆ ಹೋಗಿ ಸಸಿಗಳನ್ನು ವಿತರಿಸುವ ಮೂಲಕ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಮಂಗಳವಾರ ಆಚರಿಸಲಾಯಿತು.

ಪಟ್ಟಣದ ಶಾಸಕ ನಿವಾಸ, ಪತ್ರಿಕಾ ಭವನ,ಪೊಲೀಸ್ ಠಾಣೆ, ತುಂಗಭದ್ರಾಪೌಢ ಶಾಲೆ, ಸೇರಿದಂತೆ ನಾನಾ ಕಡೆಗಳಿಗೆ ತೆರಳಿ ಸಸಿಗಳನ್ನು ವಿತರಿಸಲಾಯಿತು. ತುಂಗಭದ್ರಾ ಪ್ರೌಢಶಾಲೆಯ ಆವರಣದಲ್ಲಿ ಶಾಲೆಯ ಮುಖ್ಯಗುರುಗಳಾದ ಸುರೇಶ ಅಂಗಡಿ ಅವರ ಸಮ್ಮುಖದಲ್ಲಿ ಎಸ್ ಅಭಿಮಾನಿಗಳು ಸಸಿಗಳನ್ನು ನಡೆವು ಮೂಲಕ ಹುಟ್ಟು ಹಬ್ಬವನ್ನು ಯಶ್ ಅಭಿಮಾನಿಬಳಗದ ಶಿವಕುಮಾರ ಗಡಿಗಿ ನೇತೃತ್ವದಲ್ಲಿ ವಿಶೇಷವಾಗಿ ಆಚರಿಸಲಾಯಿತು.