ಹೂವಿನಹಡಗಲಿ: ಇವಿಎಂ ಬದಲು ಮತಪತ್ರ ಬಳಸಿ

ಲೋಕದರ್ಶನ ವರದಿ

ಹೂವಿನಹಡಗಲಿ 20: ರಾಜ್ಯದ 15 ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉಪಚುನಾವಣೆಗಳಲ್ಲಿ ಇವಿಎಂ ಬದಲು ಮತಪತ್ರ ಬಳಸಿ ಚುನಾವಣೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗವನ್ನು ಒತ್ತಾಯಿಸಿ  ಕನರ್ಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾಂಗ್ರೆಸ್ ಮಾಧ್ಯಮ ವಕ್ತಾರ ಪತ್ರೇಶ್ ಹಿರೇಮಠ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

     ಉಪಚುನಾವಣೆಗಳಲ್ಲಿ ಜನತೆ ಕಾಂಗ್ರೆಸ್ ಬೆಂಬಲಿಸಲು ತೀರ್ಮಾನಿಸಿದ್ದು ಕೇಂದ್ರ ಸರ್ಕಾರ ಚುನಾವಣಾ ಆಯೋಗ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.

ಬಿಜೆಪಿ ಸಚಿವರುಗಳಾದ ಈಶ್ವರಪ್ಪ ಮುಸ್ಲಿಂ ಮತಗಳ ಅವಶ್ಯಕತೆ ಇಲ್ಲವೆನ್ನುತ್ತಾರೆ, ಮಾಧುಸ್ವಾಮಿ ಕುರುಬರ ವಿರುದ್ಧ ಮಾತಾಡುತ್ತಾರೆ, ಅನಂತಕುಮಾರ ಹೆಗಡೆ ದಲಿತರು ಬೇಕಿಲ್ಲವೆನ್ನುತ್ತಾರೆ ಇನ್ನೂ ಯಡಿಯೂರಪ್ಪ ಒಕ್ಕಲಿಗರನ್ನು ಸೇರುತ್ತಿಲ್ಲ ಹೀಗಿರುವಾಗ ಇವರು ಹೇಗೆ ಗೆಲ್ಲಲು ಸಾಧ್ಯ? ಮತಯಂತ್ರ ನಂಬಿ ಚುನಾವಣೆಗೆ ಹೋಗಿರುವ ಅನುಮಾನ ನಮಗಿದೆ.

ಚುನಾವಣಾ ಆಯೋಗವು ಇತ್ತೀಚೆಗೆ ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವತರ್ಿಸುತ್ತಿದ್ದು ನೀತಿ ಸಂಹಿತೆ ಜಾರಿಯಿಂದ ಹಿಡಿದು, ಅನರ್ಹರ ಪ್ರಕರಣದಲ್ಲಿ ಉಚ್ಚನ್ಯಾಯಾಲಯ ಕರೆಯದಿದ್ದರೂ ಮಧ್ಯಪ್ರವೇಶಿಸಿ ಒಂದು ಪಕ್ಷದ ಪರ ವರ್ತಿಸಿ ನಗೆಪಾಟಿಲಿಗೀಡಾಗಿದೆ.

ಅಮೇರಿಕಾ ಸೇರಿದಂತೆ ಅನೇಕ ಮುಂದುವರಿದ ದೇಶಗಳಲ್ಲಿ ಮತಪತ್ರ ಬಳಸಿ ಚುನಾವಣೆ ನಡೆಸುತ್ತಿದ್ದು ಸ್ವಾಯತ್ತ ಸಾಂವಿಧಾನಿಕ ಸಂಸ್ಥೆಯಾದ ನಮ್ಮ ಚುನಾವಣಾ ಆಯೋಗ ಜನರಿಗೆ ಒಂದು ಬಾರಿ ಅನುಮಾನ ಮೂಡಿದಲ್ಲಿ ಗೊಂದಲ ನಿವಾರಿಸಿ ತನ್ನ ಸಾಂವಿಧಾನಿಕ ಕರ್ತವ್ಯ ನಿರ್ವಹಿಸಿ ಪಾರದರ್ಶಕತೆಯಿಂದ ಜನರ ವಿಶ್ವಾಸಗಳಿಸಿಕೊಳ್ಳಲು ಈ ಬಾರಿ ಮತಪತ್ರ ಬಳಸಲು ಒತ್ತಾಯಿಸುತ್ತೇನೆ ಎಂದು ತಿಳಿಸಿದರು.