ಲೋಕದರ್ಶನ ವರದಿ
ಹೂವಿನಹಡಗಲಿ 05: ತಾಲೂಕಿನ ಮಾನಿಹಳ್ಳಿ ಪುರವರ್ಗಮಠದ ಆವರಣದಲ್ಲಿ ಮಠದ ಶ್ರೀಗಳು ರಚಿಸಿದ ' ನೂರೊಂದು ನುಡಿಯ ಎಡೆ' ಕೃತಿಯ 2ನೇ ಹಂತದ ವಚನಗಳ ಕಂಠಪಾಠ ಸ್ಪಧರ್ೆ ಜರುಗಿತು.
ಜಿಲ್ಲೆಯ ವಿವಿಧ ಗ್ರಾಮಗಳಿಂದ ವಿದ್ಯಾಥರ್ಿಗಳು, ಮಹಿಳೆಯರು ಸೇರಿದಂತೆ 22 ಜನ ವಚನಗಳ ಕಂಠಪಾಠ ಸ್ಪರ್ಧೆಗಳು ಭಾಗವಹಿಸಿದ್ದರು. ಸ್ಪಧರ್ೆ ಮೂರು ಸುತ್ತುಗಳಲ್ಲಿ ಜರುಗಿದ್ದು, ಕೊನೆಯ ಸುತ್ತಿನಲ್ಲಿ ಶಿವಲೀಲಾ ಹಂಪಿ, ಎಂ.ಪಿ.ಎಂ.ವೀರಯ್ಯ, ಅನು ಲಕ್ಕಪ್ಪನವರ್ ಪ್ರಥಮ ಸ್ಥಾನ. ಪುಷ್ಪಾ ಓದಿಸೋಮಠ, ಗೀತಾ ಸಿಂಕ್ಲಿ, ಜಿ.ಸಂಗೀತಾ, ಎಂ.ಎಂ.ಕೊಟ್ರಯ್ಯ, ದ್ವ್ವಿತೀಯ ಸ್ಥಾನ. ಶಶಿಧರ ಬೊಮ್ಮಣ್ಣಿ, ಮಲ್ಲಾಡದ ನೇತ್ರಾ ತೃತೀಯ ಸ್ಥಾನ ಪಡೆದು ಜಯ ಗಳಿಸಿದರು.
ಮಳೆಯೋಗೀಶ್ವರ ಸ್ವಾಮೀಜಿ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಪ್ರಸ್ತುತ ದಿನಗಳಲ್ಲಿ ಮೊಬೈಲ್, ಟಿವಿಯ ಹಾವಳಿಗೆ ಮಾರುಹೋದ ವಿದ್ಯಾಥರ್ಿಗಳಲ್ಲಿ ಪುಸ್ತಕವನ್ನು ಓದುವ ಹವ್ಯಾಸವನ್ನು ಬೆಳೆಸಬೇಕಾಗಿದೆ ಎಂದರು. ಮುಂದಿನ ಜಾತ್ರಾ ಸಮಯದಲ್ಲಿ ವಿಜೇತರಿಗೆ ನಗದು ಹಣ ಹಾಗೂ ಪ್ರಮಾಣಪತ್ರವನ್ನು ನೀಡಿ ಗೌರವಿಸಲಾಗುವುದು.
ನಿರ್ಣಯಕರಾಗಿ ಕಾರ್ಯ ನಿರ್ವಹಿಸಿದ ಹೆಚ್.ಎಂ.ಗುರುಬಸವರಾಜಯ್ಯ ಮಾತನಾಡಿ, ಮಠಗಳು ಧಾಮರ್ಿಕ ಕಾರ್ಯಕ್ರಮಗಳಿಗಷ್ಟೇ ಸೀಮಿತವಾಗದೆ ವಿದ್ಯಾಥರ್ಿಗಳಲ್ಲಿ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಸ್ಪಧರ್ಾ ಮನೋಭಾವನೆಯನ್ನು ಮೂಡಿಸುವ ಕಾರ್ಯ ನಿರ್ವಹಿಸುತ್ತಿರುವುದು ನಿಜಕ್ಕೂ ಸಂತಸದ ವಿಷಯವಾಗಿದೆ ಎಂದು ಹೇಳಿದರು.
ಆರೋಗ್ಯ ಸಲಹೆಗಾರ ಎಲ್.ಜಗದೀಶ್ ದೈನಂದಿನ ಉತ್ತಮ ಆರೋಗ್ಯ ಕುರಿತು ಮಾತನಾಡಿದರು. ಮಾಗಳದ ಹಾಸ್ಯ ಕಲಾವಿದ ಕುರಿ ರೇವಣಸಿದ್ದಪ್ಪ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಶಿಕ್ಷಕಿ ಎಲ್.ದಾಕ್ಷಾಯಿಣಿ, ಶ್ರೀಧರಗೌಡ ಪಾಟೀಲ್ ಮೊದಲ ಹಾಗೂ ಎರಡನೆ ಸುತ್ತಿನ ತೀಪರ್ುಗಾರರಾಗಿ ಕಾರ್ಯ ನಿರ್ವಹಿಸಿದರು. ಕನ್ನಡ ಉಪನ್ಯಾಸಕ ಹೆಚ್.ಎಂ.ಗುರುಬಸವರಾಜಯ್ಯ ಹಾಗೂ ಕೃತಿಯ ಲೇಖಕರಾದ ಶ್ರೀಮಠದ ಮಳೆಯೋಗೀಶ್ವರ ಸ್ವಾಮೀಜಿ ಅಂತಿಮ ಸುತ್ತಿನ ನಿಣರ್ಾಯಕರಾಗಿದ್ದರು. ಆರಂಭದಲ್ಲಿ ಎಂ.ಪಿ.ಎಂ.ವಿರೂಪಾಕ್ಷಯ್ಯ ಪ್ರಾಥರ್ಿಸಿದರು. ಶ್ರೀಧರಗೌಡ ಪಾಟೀಲ್ ನಿರ್ವಹಿಸಿದರು.