ಹೂವಿನಹಡಗಲಿ: ಪಾತಾಳಕ್ಕೆ ಕುಸಿದ ಟೊಮೋಟೊ ಬೆಲೆ ಕಂಗಾಲಾದ ರೈತರು

ಲೋಕದರ್ಶನ ವರದಿ

ಹೂವಿನಹಡಗಲಿ 16: ಕಳೆದ ಒಂದೂವರೆ ತಿಂಗಳಿನಿಂದ ಏರುಗತಿಯಲ್ಲಿದ್ದ ಸಾಗಿದ್ದ ಟೊಮೋಟೊ ಬೆಲೆ ದಿಢೀರ ಕುಸಿತ ಕಂಡಿದ್ದು,ತಾಲೂಕಿನಲ್ಲಿ ಟೊಮೇಟೊ ಬೆಳೆಯುವ ರೈತರ ಕಂಗಾಲಾಗಿದ್ದಾರೆ. ಉತ್ತಮ ಬೆಲೆ ನಿರೀಕ್ಷಿಸಿ ಮಾರುಕಟ್ಟೆ ಟೊಮೆಟೋ ತರುವ ರೈತರಿಗೆ ಬೆಲೆ ಕುಸಿತದಿಂದ ಇದೀಗ ಹಾಕಿದ್ದ ಬಂಡವಾಳವೂ ಕೈಗೆ ಎಟುಕುತ್ತಿಲ್ಲ.ಪರಿಣಾಮ ಬೆಳೆಗಾರರು ಬೇಸತ್ತಿದ್ದಾರೆ.

ಜುಲೈನಲ್ಲಿ ಟೊಮೇಟೊ ಕೆಜಿಗೆ 40ರಿಂದ 50ರೂ. ವರೆಗೂ ಮಾರಾಟವಾಗುತ್ತಿತ್ತು. ರೈತರಿಗೆ ಒಳ್ಳೆಯ ಧಾರಣೆ ಸಿಕ್ಕಿತ್ತು. ಆದರೆ ಆಗಸ್ಟ್ನಲ್ಲಿ ಟೊಮೇಟೊ ಧಾರಣೆ 20ರೂ.ಮೇಲೆ ಏರಿಕೆಯೇ  ಆಗಿಲ್ಲ ಸದ್ಯ ಇದೀಗ ಸಂತೆಯಲ್ಲಿ 5 ರೂ.ತರಕಾರಿ ಮಾರುಕಟ್ಟೆಯಲ್ಲಿ 8ರಿಂದ 10 ರೂ. ಇದೆ ಆದರೆ ರೈತರಿಗೆ ಸಿಗುವುದು ಬಿಡಿಗಾಸು.

ಸೆಪ್ಟೆಂಬರ್ ತಿಂಗಳಲ್ಲಿ ಹೆಚ್ಚು ಟೊಮೆಟೊ ಮಾರುಕಟ್ಟೆಗೆ ಬರುತ್ತಿದೆ.ದಿನದಿಂದ ದಿನಕ್ಕೆ ಟೊಮೇಟೊ ಅವಕ ಹೆಚ್ಚುತ್ತಿರುವುದರಿಂದ ಸಗಟು ದರ ಇಳಿಕೆಯಾಗುತ್ತಿದ್ದು,ಚಿಲ್ಲರೆ ಮಾರಾಟ ದರ ಕೆಜಿಗೆ 5ಕ್ಕೆ ಬಂದು ನಿಂತಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಉತ್ತಮ ಮಳೆಯಾಗಲಿಲ್ಲ ಮತ್ತೊಂದೆಡೆ ಬಿಸಿಲಿನ ಪ್ರಮಾಣ ಅಧಿಕವಾಗಿದ್ದರಿಂದ ಟೊಮೇಟೊ ಬೆಳೆಗೆ ಕೀಟ ಬಾಧೆ ಹೆಚ್ಚಿತ್ತು. ಇದರಿಂದ ಸಾಕಷ್ಟು ಟೊಮೇಟೊ ಬೆಳೆ ನಾಶವಾಗಿ ನಿರೀಕ್ಷಿತ ಪ್ರಮಾಣದ ಫಸಲು ಬಾರದ ಕಾರಣ ಜುಲೈ ತಿಂಗಳಲ್ಲಿ ಬೆಲೆ ಹೆಚ್ಚಿತ್ತು.

ಟೊಮೇಟೊ ಬೆಳೆ ಮೂರು ತಿಂಗಳ ಅವಧಿಗೆ ಬರಲಿದೆ.ನಮ್ಮ ರೈತರು ಹೆಚ್ಚು ಮಳೆ ಬಿದ್ದರೆ ಟೊಮೇಟೋ ಬೆಳೆ ನಾಟಿ ಮಾಡುತ್ತಾರೆ. ಕೆಲವೊಮ್ಮೆ ರೈತರು ಹಾಕಿದ ಬಂಡವಾಳವೂ ಕೈ ಸೇರದೆ ಹೋದರೆ ಕಷ್ಟವಾಗುತ್ತದೆ ಎನ್ನುತ್ತಾರೆ ರೈತರು.ಇದೀಗ ಬೆಲೆ ಕುಸಿದಿರುವುದರಿಂದ ಕೊಯ್ಯಲು ಮತ್ತು ಸಾಗಣೆಗೆ ಮಾಡಿದ ವೆಚ್ಚ ಕೂಡ ರೈತರಿಗೆ ಸಿಗುತ್ತಿಲ್ಲ.ಹೀಗಾಗಿ ಹಲವು ರೈತರು ಟೊಮೇಟೊ ಕೊಯ್ಯದೆ ಗಿಡದಲ್ಲೇ ಬಿಟ್ಟಿದ್ದಾರೆ. ಮತ್ತೆ ಕೆಲವರು ಟೊಮೇಟೊ ನಾಶಪಡಿಸುತ್ತಿದ್ದಾರೆ. 

ಇಂದು ಟೊಮೆಟೊ ಬೆಳೆಯಲು ರೈತರು ನಾನಾ ಬಗೆಯ ಖಚರ್ು ಹೆಚ್ಚು. ಟೊಮೇಟೊ ಕೀಳುವ ಕಾರ್ಮಿಕರಿಗೆ ದಿನದ ಕೂಲಿಯೂ ಹೆಚ್ಚು ಇದೀಗ ಟೊಮೇಟೊ ಧಾರಣೆ ಹಾಖಿದ್ದ ಬಂಡವಾಳಕ್ಕೂ ಸಾಕಾಗುತ್ತಿಲ್ಲ. ಈ ರೀತಿಯಾದರೆ ನಾವು ಬದುಕು ದುಸ್ತರವಾಗುತ್ತಿದೆ ಎನ್ನುತ್ತಾರೆ ರೈತರು.