ಹೊಸಪೇಟೆ: ಬಿಎಂಎಂ ಕಂಪನಿಯಿಂದ ಅಧಿಕ ಯೋಜನೆಗಳು ಜಾರಿ: ಗಣೇಶ್

ಲೋಕದರ್ಶನ ವರದಿ

ಹೊಸಪೇಟೆ 21: ಶೈಕ್ಷಣಿಕ ಅಭಿವೃದ್ಧಿಗಾಗಿ ಬಿಎಂಎಂ ಕಂಪನಿಯಿಂದ ಇನ್ನಷ್ಟು ಅಧಿಕ ಯೋಜನೆಗಳನ್ನು ಜಾರಿಗೊಳಿಸಲು ಆಡಳಿತ ಮಂಡಳಿ ಜತೆಯಲ್ಲಿ ಚರ್ಚಿಸಲಾಗಿದೆ  ಎಂದು ಬಿಎಂಎಂ ಕಂಪನಿಯ ಆಡಳಿತ ಅಧಿಕಾರಿ ಗಣೇಶ್ ಹೆಗಡೆ ಹೇಳಿದರು. 

ಸಮೀಪದ 114 ಡಣಾಪುರ ಗ್ರಾಮದಸರ್ಕಾರಿ  ಪ್ರೌಢಶಾಲೆಯಲ್ಲಿ ಬಿಎಂಎಂ ಕಂಪನಿಯಿಂದ ಬುಧವಾರ ಹಮ್ಮಿಕೊಂಡಿದ್ದ ನೋಟ್ ಪುಸ್ತಕ ವಿತರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿವರ್ಷದಂತೆ ಈ ವರ್ಷವೂ ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗುವಂತ ಯೋಜನೆಗಳನ್ನು ಕಂಪನಿಯಿಂದ ಮಾಡಲಾಗಿದೆ. ಗ್ರಾಮೀಣ ಪ್ರದೇಶದ ವಿದ್ಯಾಥರ್ಿಗಳು ಜಾಗತೀಕ ಜೀವನ ಶೈಲಿಗೆ ಹೊಂದಿಕೊಳ್ಳುವಂತ ಟಿಕ್ನಾಲಜಿ ಬರಿತ ಶಿಕ್ಷಣ ನೀಡಬೇಕೆನ್ನುವ ಚಿಂತನೆ ನಡೆಸಲಾಗಿದ್ದು, ಕಂಪನಿ ಆಡಳಿತದ ಒಪ್ಪಿಗೆ ಸಿಕ್ಕ ಬಳಿಕ ಒಂದೊಂದಾಗಿ ಪೂರೈಸಲಾಗುವುದು ಎಂದರು. 

ಗ್ರಾಪಂ ಅಧ್ಯಕ್ಷ ಸಿ.ಎ.ಗಾಳೆಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಗರಗ ಪ್ರಕಾಶ್, ಹಳ್ಳಿ ನಿಂಗಪ್ಪ, ವಿ.ಯಮನೂರ, ಹೊಸಪನಿ ಗಾಳೆಪ್ಪ, ಮಜ್ಗಿ ನಾಗರಾಜ್, ಈ.ಪಕ್ಕೀರಪ್ಪ, ಅಂಜಿನಪ್ಪ, ಗ್ರಾಪಂ ಕಾರ್ಯದಶರ್ಿ ನೀರಳ್ಳಿ ಮಂಜುನಾಥ, ಮುಖ್ಯ ಶಿಕ್ಷಕ ಪದ್ಮನಾಭ ಕ್ಪರಣಂ ಇತರರಿದ್ದರು.