ಹೊಸಪೇಟೆಯ ಪಂಪ ಕಲಾ ಮಂದಿರದಲ್ಲಿ: ಯಕ್ಷಗಾನ ಸಮ್ಮೇಳನದಲ್ಲಿ ಶ್ರೀಕೃಷ್ಣ ಪಾರಿಜಾತ ಪ್ರದರ್ಶನ

ಗೋಕಾಕ 18: ಕನರ್ಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನ ಬೆಂಗಳೂರಿನ ಅಧ್ಯಕ್ಷ ಎಸ್.ಎನ್. ಪಂಜಾಜಿಯವರು ಆಯೋಜಿಸಿದ 14ನೇ ಅಖಿಲ ಭಾರತ ಯಕ್ಷಗಾನ ಸಮ್ಮೇಳನವು ದಿ.16ರಂದು ಹೊಸಪೇಟೆಯ ಪಂಪ ಕಲಾ ಮಂದಿರದಲ್ಲಿ ನೆರವೇರಿತು. 

ಶಿವಪುತ್ರಪ್ಪ ಈರಪ್ಪ ಕಾಲ್ತಿಪ್ಪಿ ಹಾಮರ್ೋನಿಯಂ, ಪುರುಷೋತ್ತಮ ಮಾರತಿ ಚಿತ್ತೂರ ಅವರು ತಬಲಾ, ಡಾ.ಮಹಾದೇವ ಪಾವಾಡೆಪ್ಪ ಹತಪಾಕಿ ಹಾಗೂ ಶಿವನಗೌಡ ಬಾಳಗೌಡ ಪಾಟೀಲರವರ ಭಾಗವತಿಕೆಯಲ್ಲಿ ಶ್ರೀಕೃಷ್ಣನಾಗಿ ಗೋಕಾಕದ ಈಶ್ವರಚಂದ್ರ ಎಸ್. ಬೆಟಗೇರಿ, ಸತ್ಯಭಾಮೆಯಾಗಿ ಕಂಕಣವಾಡಿಯ ಶಾಂತವ್ವಾ ಹನುಮಂತಪ್ಪಾ ಅಂಬಿನಾಯ್ಕ ಅಭಿನಯಿಸಿದರು. ಹಿನ್ನೆಲೆ ಸಂಗೀತದಲ್ಲಿ ಆನಂದ ಸಿದ್ದಗಿರೆಪ್ಪ ಮಗದುಮ್ಮ, ಕಲ್ಲಪ್ಪ ಯಲ್ಲಪ್ಪ ದುರದುಂಡಿ, ಮಹಾಂತೇಶ ಗುರುಸಿದ್ದಪ್ಪ ಕಂಬಾರ, ಶಿವಕುಮಾರ ಅಪ್ಪಯ್ಯಪ್ಪಾ ಕಂಬಾರ ಮಲ್ಲಿಕಾಜರ್ುನ ಬೆಣಚಿನಮರಡಿ ಸೇವೆ ಸಲ್ಲಿಸಿದರು.

ಕನರ್ಾಟಕ ಬಯಲಾಟ ಅಕಾಡೆಮಿಯ ಅಧ್ಯಕ್ಷರ ಮಾರ್ಗದರ್ಶನದಲ್ಲಿ ಶ್ರೀಕೃಷ್ಣ ಪಾರಿಜಾತ ಕಲೆ ಪ್ರದಶರ್ಿಸಿದ ಕಲಾವಿದರನ್ನು ಯಕ್ಷಗಾನ ಸಮಿತಿ ಹಾಗೂ ಕನರ್ಾಟಕ ಬಯಲಾಟ ಅಕಾಡೆಮಿಯ ಸದಸ್ಯರು ಗೌರವಿಸಿ ಸನ್ಮಾನಿಸಿದರು.