ಗೋಕಾಕ ಜನಪದ ಗೀತ ಗಾಯನ, ಸತ್ಕಾರ ಮತ್ತು ಉಪನ್ಯಾಸ ಕಾರ್ಯಕ್ರಮ: ಕಲಾವಿದ ಉಳಿದರೆ ಕಲೆ ಉಳಿಯುತ್ತದೆ: ಈಟಿ

ಗೋಕಾಕ 01: ಉತ್ತರ ಕನರ್ಾಟಕದ ಬಹುತೇಕ ಜನಪದ ಕಲಾವಿದರು ಬಡವರು. ಹೊಟ್ಟೆಯ ಹೋರಾಟವೇ ಅವರಿಗೆ ಮುಖ್ಯವಾದಂತಿದೆ. ಅವರು ಉಳಿದು-ಬೆಳೆದರೆ, ಅವರ ಕಲೆಗಳು ಖಂಡಿತ ಉಳಿಯುತ್ತವೆಂದು ಕ.ಜಾ.ಪ. ಗೋಕಾಕ ಘಟಕದ ತಾಲೂಕಾಧ್ಯಕ್ಷ ಮಲ್ಲಿಕಾಜರ್ುನ ಈಟಿ ನುಡಿದರು.

ಅವರು "ಕನರ್ಾಟಕ ಜಾನಪದ ಪರಿಷತ್ತು", ಜಿಲ್ಲಾ ಸಮಿತಿ ಬೆಳಗಾವಿಯವರು, ನಗರದ ವಿದ್ಯಾನಗರದಲ್ಲಿರುವ ಡಾ. ಜಿ.ಎಂ. ಕಾಮೋಜಿಯವರ ಬಿಲ್ಡಿಂಗ್ದಲ್ಲಿ ಹಮ್ಮಿಕೊಂಡ ಜನಪದ ಗೀತ ಗಾಯನ, ಸತ್ಕಾರ ಮತ್ತು ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಹಿರಿಯ ಸಾಹಿತಿ ಪ್ರೊ. ಚಂದ್ರಶೇಖರ ಅಕ್ಕಿ ಮಾತನಾಡುತ್ತ, ಸರಕಾರದ ನಿರ್ಲಕ್ಷ್ಯವೇ ಜಾನಪದದ ಅಳಿವಿಗೆ ಕಾರಣವಾಗುತ್ತಿದೆ. ಸಕರ್ಾರ ಜನಪದ ಕಲಾವಿದರಿಗೆ ಮಾಸಾಶನ - ಪ್ರಶಸ್ತಿ ನೀಡುವುದರೊಂದಿಗೆ ಅವರ ಉಪಜೀವನಕ್ಕೆ ಸಂಬಳ ನಿಗದಿಪಡಿಸಬೇಕೆಂದು ಮತ್ತು ಚಂದ್ರಶೇಖರ ಕಂಬಾರರಂತಹ ಕಲಾವಿದ  ಜಾನಪದ ವಿದ್ವಾಂಸರು, ಆಧುನಿಕ ಜೀವನಶೈಲಿಗೆ ಒಗ್ಗುವಂತೆ ಕಲೆಗಳನ್ನು ಪರಿಷ್ಕರಿಸಿ, ಕಲಾವಿದರಿಗೆ ತರಬೇತಿ ನೀಡುವ ವ್ಯವಸ್ಥೆಯಾಗಬೇಕೆಂದು ಕಳಕಳಿಯನ್ನಿತ್ತರು. 

ಸಂದರ್ಭ, ಕ್ರಿಯೆಯ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಗೀತೆಯಂಥ ಹಲವಾರು ಕಲೆಗಳು ಕ್ರಿಯೆ ನಿಂತುಹೋಗಿದ್ದರೂ ಅವನ್ನು ಹಾಡುವ ಕಲಾವಿದರು ಇನ್ನೂ ಜೀವಂತವಾಗಿದ್ದಾರೆ. ಅವರಿರುವಾಗಲೇ ಅವರಲ್ಲಿರುವ ಕಲೆಗಳನ್ನು ದಾಖಲೀಕರಣ ರೂಪದಲ್ಲಿಯಾದರೂ ಹಿಡಿದಿಡುವ ಅಗತ್ಯವಿದೆಯೆಂದು ಕಲ್ಲೋಳಿಯ ಎಸ್.ಆರ್.ಇ. ಡಿಗ್ರಿ ಕಾಲೇಜಿನ ಪ್ರಾಚಾರ್ಯ ಡಾ.ಸುರೇಶ ಹನಗಂಡಿಯವರು ತಮ್ಮ ಉಪನ್ಯಾಸದಲ್ಲಿ ತಿಳಿಸಿದರು. 

ಕ.ಜಾ.ಪ. ಜಿಲ್ಲಾ ಸಮಿತಿ ಅಧ್ಯಕ್ಷ ಡಾ. ಸಿ.ಕೆ. ನಾವಲಗಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದಶರ್ಿ ಈಶ್ವರಚಂದ್ರ ಬೆಟಗೇರಿ ಸ್ವಾಗತಿಸಿದರು. ಪ್ರೊ. ಮಹಾನಂದಾ ಪಾಟೀಲ ಪರಿಚಯಿಸಿದರು. ಪ್ರಾಚಾರ್ಯ ಜಯಾನಂದ ಮಾದರ ನಿರೂಪಿಸಿದರು. ಜ್ಯೋತಿ ಮಾಸ್ತಿಹೊಳಿ ವಂದಿಸಿದರು. ಭಾರತಿ ಮದಭಾವಿ, ವಿನೂತಾ ಕಾಮೋಜಿ ವೇದಿಕೆ ಮೇಲಿದ್ದರು.

ಡಾ. ಕೆ.ಎಸ್. ಪರವಗೋಳ, ಡಾ. ರಾಜು ಕಂಬಾರ, ಹಸನಸಾಬ ನದಾಫ, ಬಸವಣ್ಣೆಪ್ಪ ಕುಂಬಾರ, ಭೀಮವ್ವ ಹರಿಜನ, ಸತ್ಯವ್ವ ಕಂಬಾರ, ಬಸವಾಜ ಖೇಮಲಾಪುರೆ, ಮಹಾದೇವ ಹತಪಾಕಿ, ಬಸವರಾಜ ಹಿರೇಮಠ, ಈಶ್ವರಚಂದ್ರ ಬೆಟಗೇರಿ, ಭೀಮಪ್ಪ ಹುದ್ದಾರ ಮೊದಲಾದವರನ್ನು ಕ.ಜಾ.ಪ. ಪರವಾಗಿ ಸತ್ಕರಿಸಲಾಯಿತು. ನಂತರದಲ್ಲಿ ಇದೇ ಕಲಾವಿದರು ಜಾನಪದ ಗೀತ ಗಾಯನ ಪ್ರಸ್ತುತ ಪಡಿಸಿದರು. 

ಪ್ರೊ. ಜಿ.ವ್ಹಿ.ಮಳಗಿ, ವಸಂತರಾವ್ ಕುಲಕಣರ್ಿ, ಟಿ.ಸಿ.ಮೊಹರೆ, ಜಿ.ಕೆ. ಕಾಡೇಶಕುಮಾರ, ಲಕ್ಷ್ಮಣ ಚೌರಿ, ಶಿವಜಾತ ಕಾಮೋಜಿ, ಬಸವರಾಜ ಹಣಮಂತಗೋಳ, ಆರತಿ, ದ್ರಾಕ್ಷಾಯಣಿ ಕಾಮೋಜಿ, ವಿ.ಬಿ.ಕಾಳೆ, ಬಿ.ಬಿ. ಪಟಗುಂದಿ ಮುಂತಾದವರು ಉಪಸ್ಥಿತರಿದ್ದರು.