ಶ್ರೀ ನೀಲಗುಂದ ಗುದ್ನೇಶ್ವರ ಸ್ವಾಮಿ ಮೂರ್ತಿ ಪ್ರತಿಷ್ಠಾಪನೆ ಹಾಗು ವಿವಿಧ ಕಾರ್ಯಕ್ರಮಗಳು

Installation of the idol of Sri Neelgunda Gudneshwara Swamy and various programs

ಶ್ರೀ ನೀಲಗುಂದ ಗುದ್ನೇಶ್ವರ ಸ್ವಾಮಿ ಮೂರ್ತಿ ಪ್ರತಿಷ್ಠಾಪನೆ ಹಾಗು ವಿವಿಧ ಕಾರ್ಯಕ್ರಮಗಳು 

ಕುಕನೂರು 01: ಪಟ್ಟಣದ ಶ್ರೀ ಗುದ್ನೇಶ್ವರ ದೇವಸ್ಥಾನ ಸೇವಾ ಸಮಿತಿಯ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಪ್ರಭುಲಿಂಗ ದೇವರ ಅಪ್ಪಣೆಯ ಮೇರೆಗೆ ಶ್ರೀ ನೀಲಗುಂದ ಗುದ್ನೇಶ್ವರ ಸ್ವಾಮಿಗಳ 19ನೇ ವರ್ಷದ ಮೂರ್ತಿ ಪ್ರತಿಷ್ಠಾಪನೆಯ ವಾರ್ಷಿಕೋತ್ಸವ ಅಂಗವಾಗಿ ಏ.3 ಗುರುವಾರದಂದು ಸಾಮೂಹಿಕ ವಿವಾಹಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. 

ಸೇವಾ ಸಮಿತಿಯ ಹಿರಿಯರಾದ ಚನ್ನಬಸಯ್ಯ ದೂಪದ ಶ್ರೀ ನೀಲಗುಂದೇಶ್ವರ ಮಠದ ಆವರಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ ಸಾಮೂಹಿಕ 11 ನವ ಜೋಡಿಗಳ ಸಾಮೂಹಿಕ ವಿವಾಹಗಳು ನೆರವೇರಿತಿದ್ದು, ವಿವಾಹ ಕಾರ್ಯಕ್ರಮಗಳ ಪೂರ್ವ ಸಿದ್ಧತೆಗಳು ಅತ್ಯಂತ ಬರದಿಂದ ನೆರವೇರುತ್ತಿದ್ದು. ಗ್ರಾಮದ ಎಲ್ಲಾ ಸಮಸ್ತ ಸದ್ಭಕ್ತರ ತನು,ಮನ ,ದನ ಸೇವೆಯಿಂದ ಕಾರ್ಯಕ್ರಮ ಯಶಸ್ವಿಗೆ ಕಾರಣವಾಗಿದೆ. ಸಾನಿಧ್ಯವನ್ನು ಶಿವ ಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಬೆದವಟ್ಟಿ, ಪ್ರಭುಲಿಂಗ ದೇವರು ನೀಲಗುಂದೇಶ್ವರ ಮಠ, ಬಸವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀ ಧರಮುರುಡಿ ಹಿರೇಮಠ ಯಲಬುರ್ಗಾ, ಡಾಕ್ಟರ್ ಮಹದೇವ ಮಹಾಸ್ವಾಮಿಗಳು ಅನ್ನದಾನೇಶ್ವರ ಶಾಖಾಮಠ ಕುಕನೂರು, ವೀರಯ್ಯ ಕೊಂಡದಕಟ್ಟಿಮಠ, ವಹಿಸಿಕೊಳ್ಳುವರು.  

ಪ್ರಸಾದ ವಿತರಣೆಗಾಗಿ ಬಾದುಶ, ಜಿಲೇಬಿ, ಶೇಂಗಾ ಹೋಳಿಗೆ, ಬೂಂದಿ, ಜೋಳದ ರೊಟ್ಟಿ, ಸಜ್ಜಿಯ ರೊಟ್ಟಿ, ಚಪಾತಿ, ವಿವಿಧ ತರಕಾರಿ ಕಾಯಿ ಪಲ್ಯಗಳು ಮತ್ತು ಇನ್ನು ಅನೇಕ ಖಾದ್ಯಗಳನ್ನು ಪ್ರಸಾದ ಸೇವೆಗೆ ಗ್ರಾಮಸ್ಥರು ತನು, ಮನ ದೊಂದಿಗೆ ಸೇವೆಯನ್ನು ಸಲ್ಲಿಸಿದ್ದಾರೆ, ಈ ಒಂದು ಮಂಗಳ ಕಾರ್ಯಕ್ಕೆ ಎಲ್ಲರೂ ಆಗಮಿಸಿ ಶ್ರೀ ನೀಲಗುಂದ  ಗುದ್ನೇಶ್ವರ ಸ್ವಾಮಿಗಳ ಕೃಪಾ ಆಶೀರ್ವಾದಕ್ಕೆ ಪಾತ್ರರಾಗಬೇಕು . ಸಾಯಂಕಾಲ 7 ಗಂಟೆ ಯಿಂದ 8 ಗಂಟೆಯವರೆಗೆ ಸತ್ಸಂಗ ಕಾರ್ಯಕ್ರಮ ನೆರವೇರತ್ತಿದ್ದು ಸಕಲ ಸದ್ಭಕ್ತಾದಿಗಳು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ವೀರಯ್ಯ ಬ್ಯಾಳಿ, ಸಿದ್ದಲಿಂಗಯ್ಯ ಬಂಡಿ, ರುದ್ರಯ್ಯ ವಿರಪಣ್ಣವರ್, ವಿರುಪಾಕ್ಷಯ್ಯ ಬಂಡಿ, ಸಂಗಯ್ಯ ಬಂಡಿ, ಶರಣಯ್ಯ ಹೂನಾಳ, ಚನ್ನಬಸಯ್ಯ ಇನಾಮ್ದಾರ್, ಗುದ್ತೇಶ ದೇವಗಣಮಠ, ವೀರಯ್ಯ ದೇವಗಣಮಠ, ರೇವಣಸಿದ್ದಯ್ಯ ನಾಗಣ್ಣವರ್, ಮಲ್ಲಯ್ಯ ಹುಣಿಸಿಮರದ, ಹಾಗೂ ಗ್ರಾಮದ ಗುರು ಹಿರಿಯರು ಇತರರು ಇದ್ದರು.  

ವರದಿ ಚನ್ನಯ್ಯ ಹಿರೇಮಠ ಕುಕನೂರು