ಲೋಕದರ್ಶನ ವರದಿ
ಗೋಕಾಕ 25: ಪ್ರಸಕ್ತ ವರ್ಷದ ಬೇಸಿಗೆಯ ಬಿಸಿಲಿನ ತಾಪ ಈಗಲೇ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಪಕ್ಷಿ ಸಂಕುಲದ ಬಾಯಾರಿಕೆ ತಣಿಸಿ, ಕಣ್ಮರೆಯಾಗುತ್ತಿರುವ ಗುಬ್ಬಚ್ಚಿಗಳ ಉಳುವಿಗಾಗಿ ಇಂದು ಪ್ರತಿಯೊಬ್ಬರೂ ಪರಿಸರ ಹಾಗೂ ಪಕ್ಷಿ ಸಂಕುಲ ಸಂರಕ್ಷಣೆಗೆ ಮುಂದಾಗಬೇಕು ಎಂದು ಗುಜನಾಳ ವಲಯದ ಅರಣ್ಯ ಇಲಾಖೆಯ ವಲಯಾಧಿಕಾರಿ ಸಂಗಮೇಶ ಎನ್ ಪ್ರಭಾಕರ ಹೇಳಿದರು.
ತಾಲೂಕಿನ ಗುಜನಾಳ ಗ್ರಾಮದಲ್ಲಿ ವಿಶ್ವ ಗುಬ್ಬಚ್ಚಿ ದಿನಾಚರಣೆ ಪ್ರಯುಕ್ತ ಇತ್ತೀಚಿಗೆ ಗುಜನಾಳ ಹಾಗೂ ಸುತ್ತಲಿನ ಗ್ರಾಮಗಳ ಸಾರ್ವಜನಿಕರಿಗೆ ಪಕ್ಷಿ ಸಂಕುಲದ ಜಲದಾಹ ತಣಿಸಲು ಮಣ್ಣಿನಪಾತ್ರೆ ಹಾಗೂ ನೆಲವುಗಳನ್ನು ವಿತರಿಸಿ ಮಾತನಾಡಿದರು.
ಪ್ರತಿಯೊಬ್ಬರೂ ತಮ್ಮ ಮನೆಯ ಮೇಲ್ಛಾವಣೆ, ಮನೆಯ ಮುಂದೆ, ಅಕ್ಕ-ಪಕ್ಕದ ಕೈತೋಟ, ಉದ್ಯಾನ ಹಾಗೂ ಸುತ್ತಲಿನ ಗಿಡಗಂಟಿಗಳಿರುವ ಪ್ರದೇಶದಲ್ಲಿ ಅಗಲವಾದ ಪಾತ್ರೆಗಳಲ್ಲಿ ನೀರು, ಅನ್ನ ಹಾಕಿ ಪಕ್ಷಿ ಸಂಕುಲಕ್ಕೆ ಜಲದಾಹ ತಣಿಸುವ ಮೂಲಕ ಗುಬ್ಬಚ್ಚಿಗಳ ಸಂರಕ್ಷಣೆಗೆ ಮುಂದಾಗಬೇಕೆಂದು ವಲಯಾಧಿಕಾರಿ ಸಂಗಮೇಶ ಎನ್ ಪ್ರಭಾಕರ ಸಾರ್ವಜನಿಕರಿಗೆ ಸಲಹೆ ನೀಡಿದರು.
ವಲಯಾಧಿಕಾರಿ ಸಂಗಮೇಶ ಅವರ ಮಕ್ಕಳಾದ ಪ್ರೇರಣಾ, ಪ್ರತೀಕ್ಷಾ ಹಾಗೂ ಪತ್ನಿ ಗೀತಾ ಪ್ರಭಾಕರ ಹಾಗೂ ವಲಯದ ಅರಣ್ಯ ಇಲಾಖೆಯ ಸಿಬ್ಬಂದಿ ಗುಜನಾಳ ಗ್ರಾಮದ ವಿವಿಧಡೆಯ ಸಾರ್ವಜನಿಕರಿಗೆ ಪಕ್ಷಿ ಸಂಕುಲದ ಜಲದಾಹ ತಣಿಸಲು ಮಣ್ಣಿನಪಾತ್ರೆ ಹಾಗೂ ನೆಲವುಗಳನ್ನು ವಿತರಿಸಿದರು.
ಉಪ ವಲಯ ಅರಣ್ಯಾಧಿಕಾರಿಗಳಾದ ಮಾರುತಿ ಪೂಜಾರಿ, ಸಾಗರ ಪಣಗುತ್ತಿ, ಗಾಡರ್್ಗಳಾದ ಮಾರುತಿ ಭಜಂತ್ರಿ, ಲೊಕೇಶ ಕುಲಕಣರ್ಿ, ಮರಕುಂಬಿ, ಮಾಹಾಂತೇಶ ಡೊಂಬರ, ಬಸವರಾಜ ಬಡಿಗೇರ, ಆರ್.ಎಚ್.ಪೂಜಾರಿ, ಬಸವರಾಜ ಮುಸ್ಟಗಿ ಸೇರಿದಂತೆ ವಲಯದ ಅರಣ್ಯ ಇಲಾಖೆಯ ಸಿಬ್ಬಂದಿ, ಗ್ರಾಮಸ್ಥರು, ಪಕ್ಷಿ ಪ್ರೇಮಿಗಳು, ಇತರರು ಇದ್ದರು.