ಜಿಂಬಾಬ್ವೆ ವಿರುದ್ಧ ಆಸ್ಟ್ರೇಲಿಯಾದ ಫಿಂಚ್ ಹೊಸ ವಿಶ್ವದಾಖಲೆ


ಹರಾರೆ (ಜಿಂಬಾಂಬ್ವೆ) 03: ಆಸ್ಟ್ರೇಲಿಯಾದ ಅಗ್ರ ಶ್ರೇಯಾಂಕದ ಬ್ಯಾಟ್ಸ್ ಮನ್ ಆರೋನ್ ಫಿಂಚ್ ಟಿ-20  ಕ್ರಿಕೆಟ್ ನಲ್ಲಿ ನೂತನ ವಿಶ್ವದಾಖಲೆ ನಿಮರ್ಿಸಿದ್ದಾರೆ. ಜಿಂಬಾಬ್ವೆ ವಿರುದ್ಧ ನಡೆಯುತ್ತಿರುವ  ಹರಾರೆ ಸ್ಪೋಟ್ರ್ಸ ಕ್ಲಬ್ ತ್ರಿಕೋಣ ಸರಣಿಯಲ್ಲಿ 76 ಬಾಲ್ ಗಳಲ್ಲಿ 172 ರನ್ ಗಳಿಸುವುದರೊಡನೆ ಫಿಂಚ್ ದಾಖಲೆ ಬರೆದಿದ್ದಾರೆ. 

31 ರ ಹರೆಯದ ಫಿಂಚ್ 6 ಬೌಂಡರಿ ಮತ್ತು 10 ಸಿಕ್ಸರ್ ಗಳೊಡನೆ 226.31 ಸ್ಟ್ರೈಕ್ ರೇಟ್ ಗಳಲ್ಲಿ ಈ ಅದ್ಭುತ ಸಾಧನೆ ಮಾಡಿದ್ದಾರೆ. 

ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಆಸ್ಟ್ರೇಲಿಯಾ ಪರ ಆರಂಭಿಕ ಆಟಗಾರರಾಗಿ ಕ್ರೀಸ್ ಗಿಳಿದ ಫಿಂಚ್ ರೋಚಕ ಆಟ ಎದುರಾಳಿಗಳನ್ನು ದಂಗುಬಡಿಸಿತ್ತು. ಪಂದ್ಯದಲ್ಲಿ ಆಸ್ಟ್ರೇಲಿಯಾ 229/2 ರನ್ ಗಳಿಸಿದೆ. 

2013ರಲ್ಲಿ ಬೆಂಗಳೂರಿನಲ್ಲಿ ನಡೆದ ಐಪಿಎಲ್ ಸರಣಿಯಲ್ಲಿ ಪುಣೆ ವಾರಿಯಸರ್್ ವಿರುದ್ಧ  ಕ್ರಿಸ್ ಗೇಲ್ 175 ರನ್ ಗಳಿಸಿ ಐಪಿಎಲ್ ಕ್ರಿಕೆಟ್ ದಾಖಲೆ ನಿಮರ್ಾಣ ಮಾಡಿದ್ದರು. ಇದೀಗ ಫಿಂಚ್  ಅಂತಾರಾಷ್ಟ್ರೀಯ ಟಿ-20  ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿಅವರಾಗಿ ಗುರುತಿಸಿಕೊಂಡಿದ್ದಾರೆ.