ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಕೊರತೆಯಾಗದಿರಲಿ: ಮರಿಬಸಪ್ಪನವರ್


ಯಲಬುಗರ್ಾ: ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬಗಳು ಯಾವೂದೇ ಕೊರತೆಯಾಗದಂತೆ ಕೃಷಿ ಇಲಾಖೆ ಅಧಿಕಾರಿಗಳ ಅಗತ್ಯ  ಮುಂಜಾಗ್ರತಾ ಕ್ರಮ ಕೈಗೂಳ್ಳಬೇಕು ಹಾಗೂ ನಮ್ಮ ತಾಲೂಕಿನಲ್ಲಿ ನಡೆಯುತ್ತಿರುವ ವಿವಿಧ ಇಲಾಖೆಗಳ ಕಾಮಗಾರಿಗಳ ಬಗ್ಗೆ ತಾಲೂಕಿನ ಅಧಿಕಾರಿಗಳು ಸಂಪೂರ್ಣ ಮಾಹಿತಿಯ ಜೊತೆಗೆ ಉತ್ತಮ ಹಾಗೂ ಗುಣಮಟ್ಟದ ಕೆಲಸ ಮಾಡಲು ಮುಂದಾಗಬೇಕು ಹಾಗೂ ಎಂದು ತಾಪಂ ಉಪಾದ್ಯಕ್ಷ ವಿಶ್ವನಾಥ ಮರಿಬಸಪ್ಪನವರ್ ಹೇಳಿದರು. 

ಪಟ್ಟಣದ  ತಾಪಂ ಸಭಾಂಗಣದಲ್ಲಿ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ನಂತರ ಮಾತನಾಡಿದ ಕೃಷಿ ಅಧಿಕಾರಿಗಳು  ನಮ್ಮ ತಾಲೂಕಿಗೆ ಇಗಾಗಲೆ ಬೆಳೆ ವಿಮೆಯ ಹಣ ಬಿಡುಗಡೆಯಾಗಿದ್ದು ಶೀಘ್ರದಲ್ಲಿ ರೈತರ ಖಾತೆಗಳಿಗೆ ಜಮಾ ಮಾಡಲಾಗುವದು, ಹಾಗೂ ನಮ್ಮ ಇಲಾಖೆಯಿಂದ ನಿಮರ್ಿಸಿದ್ದ ಕೃಷಿ ಹೊಂಡಗಳು ಸಂಪೂರ್ಣವಾಗಿ ಭತರ್ಿಯಾಗಿದ್ದು ಯೋಜನೆಯಿಂದ ರೈತರಿಗೆ ತುಂಬಾ ಉಪಯೋಗವಾಗುವದರ ಜೋತೆಗೆ ಅಂತರ್ಜಲ ಹೆಚ್ಚಾಗಲು ಸಹಕಾರಿಯಾಗುವದು ಎಂದು ಹೇಳಿದರು. 

ತಾಲೂಕಿನಲ್ಲಿ ವಯೋವೃದ್ಧರಿಗಾಗಿ ಇರುವ ಅನೇಕ ಸೌಲಭ್ಯಗಳನ್ನು ನಮ್ಮ ಕಂದಾಯ ಇಲಾಖೆಯಿಂದ ಸಮರೋಪಾದಿಯಲ್ಲಿ ಯಾರಿಗೂ  ತೊಂದರೆಯಾಗದಂತೆ ವಿತರಿಸಲಾಗುತ್ತಿದ್ದು ಯೋಜನೆಗೆ ಅಜರ್ಿ ಸಲ್ಲಿಸಿರುವ ಪ್ರತಿಯೊಬ್ಬರನ್ನೂ ಪರಿಸಿಲಿಸಿ ಸರಿಯಾದ ಫಲಾನುಭವಿಗೆ ಸರಕಾರದ ಯೋಜನೆಯನ್ನು ಮುಟ್ಟಿಸಲಾಗುತ್ತಿದೆ. ಮೊದಲಿಗಿಂತ ಇತ್ತಿಚೀಗೆ ನಮ್ಮ ಇಲಾಖೆಯಿಂದ ಯಾವೂದೇ ಕೆಲಸಗಳನ್ನ ತಡ ಮಾಡದೆ ಅತ್ಯಂತ ತ್ವರಿತವಾಗಿ ನಿರ್ವಹಿಸಲಾಗುತ್ತಿದೆ ಎಲ್ಲವೂ ಗಣಕೀಕೃತವಾಗಿದ್ದರಿಂದ ಕೆಲವು ಬಾರಿ ನೆಟ್ವರ್ಕ ನಿಂತಾಗ ಮಾತ್ರ ಸಾರ್ವಜನಿಕರಿಗೆ ತೊಂದರೆಯಾಗಬಹುದು ಅದನ್ನು ಬಿಟ್ಟರೆ ಉಳಿದ ಸಮಯದಲ್ಲಿ ಉತ್ತಮ ಸೇವೆಯನ್ನು ಒದಗಿಸಲಾಗುತ್ತಿದೆ.

ತಾಪಂ ಅದ್ಯಕ್ಷೇ ಲಕ್ಷ್ಮೀ ದ್ಯಾಮನಗೌಡ್ರ ಅಧ್ಯಕ್ಷತೆಯನ್ನು ವಹಿಸಿದ್ದರು, ತಾಪಂ,ಸ್ಥಾಯಿ ಸಮಿತಿ ಅದ್ಯಕ್ಷ ಸುಭಾಸ್ ಮಾದಿನೂರು, ತಾಪಂ ಇಓ, ಕೆ, ತಿಮ್ಮಪ್ಪ, ತಾಲೂಕ ಅಧಿಕಾರಿಗಳಾದ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ವಟಗಲ್, ಬಿಸಿಎಮ್ ಅಧಿಕಾರಿ, ಎಸ್ ವಿ ಭಜಂತ್ರಿ, ಸಮಾಜ ಕಲ್ಯಾಣ ಅಧಿಕಾರಿ ಸುರೇಖಾ ಕುರಟ್ಟಿ, ಪಶು ಪಾಲನಾ ಇಲಾಖೆ ಅಧಿಕಾರಿ, ಡಾ,ಬಸಯ್ಯ ಸಾಲಿ, ಜೆಷ್ಕಾಂ, ರೇಷ್ಮೆ,  ಅರಣ್ಯ ಇಲಾಖೆ, ಆರೋಗ್ಯ ಇಲಾಖೆ, ಸೇರಿದಂತೆ ಇನ್ನೀತರ ಇಲಾಖೆಯ ತಾಲೂಕ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.