ಬೆಳಗಾವಿ04:- ಸ್ಥಳೀಯ ಆಂಜನೇಯ ನಗರದಲ್ಲಿರುವ ಬಾಸ್ ಜಿಮ್ ಕಟ್ಟಡದಲ್ಲಿ ಎಕ್ಷಂಟ್ರಿಕ್ಸ್ ಡ್ಯಾನ್ಸ್ ಸ್ಟೂಡಿಯೋ ಆರಂಭೋತ್ಸವಕ್ಕೆ ದಿ.3ರಂದು ಕನ್ನಡ ಯುವ ಹೋರಾಟಗಾರ ದೀಪಕ ಗುಡಗನಟ್ಟಿ ಚಾಲನೆ ನೀಡಿದರು.
ವಾರದಲ್ಲಿ 3 ದಿನಗಳ ಕಾಲ ಇಲ್ಲಿ ಡ್ಯಾನ್ಸ್ ತರಬೇತಿ ನೀಡಲಾಗುತ್ತದೆ. ಝಿ ಕನ್ನಡ ಚಾನೆಲ್ನ ಕೊರಿಯೋ ಗ್ರಾಫರ್ ವಿನ್ನರ್ ಆಫ್ ಡ್ಯಾನ್ಸ್ ರಿಯಾಲಿಟಿ ಶೋನ ಕಿರಣ ಕಾಂಬಳೆ ಈ ಡ್ಯಾನ್ಸ್ ತರಬೇತಿ ನೀಡುವರು.
ಈ ಸ್ಟೂಡಿಯೋ ಆರಂಭೋತ್ಸವ ಕಾರ್ಯಕ್ರಮದಲ್ಲಿ ಇಂಜಿನೀಯರ್ ಚಂದ್ರಶೇಖರ ಗೌಡರ, ವಿದ್ಯಾ ಗೌಡರ, ಮೀನಾ ಚೌಗುಲೆ, ವಿದ್ಯಾ ಪಾಟೀಲ, ಸುಚಿತ್ರಾ ರಜಪೂತ, ಶಿವಲೀಲಾ ಹೀರೆಮಠ ಸೇರಿದಂತೆ ಅನೇಕರು ಭಾಗವಹಿಸಿದ್ದರು.