ದ್ರಾವಿಡ್ಗೆ 'ಹಾಲ್ ಆಫ್ ಫೇಮ್ ಗೌರವ


ಮುಂಬೈ 03: ದ್ರಾವಿಡ್ಗೆ ಐಸಿಸಿ ಹಾಲ್ ಆಫ್ ಫೇಮ್ ಗೌರವ ನೀಡಿದೆ. ಆದರೆ ಏಕದಿನ ಕ್ರಿಕೆಟ್ ಹಾಗೂ ಏಕದಿನ ಕ್ರಿಕೆಟ್ನ ಬಹುಪಾಲು ಬ್ಯಾಟಿಂಗ್ ದಾಖಲೆಯನ್ನು ತಮ್ಮ ಹೆಸರಿನಲ್ಲಿಟ್ಟುಕೊಂಡಿರುವ ಸಚಿನ್ಗ್ಯಾಕೆ ಈ ಗೌರವ ನೀಡಿಲ್ಲ ಎಂಬುದು ಕ್ರಿಕೆಟ್ ಅಭಿಮಾನಿಗಳನ್ನು ಕಾಡುತ್ತಿರುವ ಯಕ್ಷಪ್ರಶ್ನೆ. 

ಹೌದು,  ದ್ರಾವಿಡ್ಗೆ ಹಾಲ್ ಆಫ್ ಫೇಮ್ ಗೌರವ ನೀಡಿ ಆಧರಿಸಿದೆ.    ಆದರೆ ಇದು ಕೆಲವರಲ್ಲಿ ಗೊಂದಲ ಮೂಡಿಸಿರುವುದು ನಿಜ. ಏಕೆಂದರೆ ದ್ರಾವಿಡ್ಗಿಂತ  ಸಚಿನ್ ಎಲ್ಲ ದಾಖಲೆಗಳಲ್ಲೂ ಮುಂದಿದ್ದಾರೆ. 

ಟೆಸ್ಟ್, ಏಕದಿನ ಕ್ರಿಕೆಟ್ನಲ್ಲಿ  ಅತಿಹೆಚ್ಚು  ರನ್ ಬಾರಿಸಿದ್ದಾರೆ. ಅತಿ ಹೆಚ್ಚು ಶತಕ ಹಾಗೂ ಅತಿ ಹೆಚ್ಚು ಅರ್ಧಶತಕ ಹೀಗೆ  ಎಲ್ಲ ದಾಖಲೆಗಳು ಸಚಿನ್ ಹೆಸರಲ್ಲೇ ಇವೆ.  

ದ್ರಾವಿಡ್ 164 ಟೆಸ್ಟ್  ಹಾಗೂ 344 ಏಕದಿನ ಕ್ರಿಕೆಟ್ ಪಂದ್ಯಗಳನ್ನಾಡಿದ್ದಾರೆ. ಟೆಸ್ಟ್ನಲ್ಲಿ  13, 288 ಹಾಗೂ ಏಕದಿನದಲ್ಲಿ 10, 889 ರನ್ಗಳನ್ನ ಸಿಡಿಸಿದ್ದಾರೆ. 

ಸಚಿನ್ 200 ಟೆಸ್ಟ್ ಪಂದ್ಯಗಳನ್ನಾಡಿದ್ದು 15, 921, 463 ಏಕದಿನ ಪಂದ್ಯಗಳಲ್ಲಿ 18, 426 ರನ್ಗಳ ಬೃಹತ್ ಮೊತ್ತವನ್ನೇ ಪೇರಿಸಿದ್ದಾರೆ.  

ಐಸಿಸಿಯ ಹಾಲ್ ಆಫ್ ಫೇಮ್ಗೆ ಆಯ್ಕೆಯಾಗುವ ಯಾವುದೇ ಆಟಗಾರ ಹಿಂದಿನ 5 ವರ್ಷ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಡಿರಬಾರದು. ಆದರೆ ಸಚಿನ್ ತಮ್ಮ ಕೊನೆಯ ಹಾಗೂ ದಾಖಲೆ 200 ನೇ ಟೆಸ್ಟ್ ಪಂದ್ಯವನ್ನು 2013ರ ನವೆಂಬರ್ ತಿಂಗಳಲ್ಲಿ ವಿಂಡೀಸ್ ವಿರುದ್ಧ ಆಡಿದ್ದರು. ಅದರ ಪ್ರಕಾರ ಸಚಿನ್ಗೆ ಮುಂಬರುವ ನವೆಂಬಗರ್ೆ ನಿವೃತ್ತಿ ಘೋಷಿಸಿ 5 ವರ್ಷ ಪೂರೈಸಿದಂತಾಗುತ್ತದೆ. ಈ ಕಾರಣದಿಂದಲೇ ಸಚಿನ್ಗಿಂತಲೂ ಮೊದಲೇ ದ್ರಾವಿಡ್ಗೆ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾಗಿದ್ದಾರೆ. 

ದ್ರಾವಿಡ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿ 6 ವರ್ಷ ಮುಗಿದಿದೆ.  

ಈ ಹಿನ್ನೆಲೆಯಲ್ಲಿ ಐಸಿಸಿಯ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾಗಿದ್ದಾರೆ. ದ್ರಾವಿಡ್ ತಮ್ಮ ಕೊನೆಯ ಅಂತರಾಷ್ಟ್ರೀಯ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ 2012 ಮಾಚರ್್ 9ರಂದು ಆಡಿದ್ದರು.