ಚರಂಡಿಯ ಕೊಳಚೆ ನೀರು ಶಾಲಾ ಆವರಣಕ್ಕೆ: ಅಧಿಕಾರಿಗಳ ನಿರ್ಲಕ್ಷ್ಯ

ಚರಂಡಿಯ ಕೊಳಚೆ ನೀರು ಕೋಟೆ ಭಾಗದ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲಾ ಆವರಣದಲ್ಲಿ ಹರಿಯುತ್ತಿರುವ ದೃಶ್ಯ ಣಞಞಜಡಿ

ರಾಮಣ್ಣಾ ನಾಯಿಕ

ಹುಕ್ಕೇರಿ :  ಹುಕ್ಕೇರಿ ನಗರ ತಾಲೂಕಿನ ಕೇಂದ್ರವಾದರೂ ಹಲವಾರು ಅಭಿವೃದ್ಧಿ ಕಾಮಗಾರಿಗಳಿಂದ ವಂಚಿತವಾಗಿದೆ. ಇದಕ್ಕೆ ಪುರಸಭೆ ಅಧಿಕಾರಿಗಳೇ ಹೊಣೆಯೆಂದರೆ ತಪ್ಪಾಗಲಾರದು. ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲವೆಂಬಂತಾಗಿದೆ ಇಲ್ಲಿಯ ಪರಿಸ್ಥಿತಿ ಹೀಗಾಗಿ ಮುಖ್ಯಾಧಿಕಾರಿ, ಕಿರಿಯ ಅಭಿಯಂತ ಹಾಗೂ ಸದಸ್ಯರ ಮೇಲೆ ನಾಗರಿಕರು ಕಿಡಿ ಕಾರುತ್ತಿದ್ದಾರೆ. ನಗರದಲ್ಲಿ ಪಂಚಾಯತ ಇದ್ದಾಗ ಇದ್ದ ವ್ಯವಸ್ಥೆ ಚೆನ್ನಾಗಿತ್ತು. ಆದರೆ ಪುರಸಭೆ ಆದ ಬಳಿಕ ವ್ಯವಸ್ಥೆ ಸಂಪೂರ್ಣವಾಗಿ ಕೆಟ್ಟು ಹೋಗಿದ್ದು ಇದಕ್ಕೆ ಯಾರು ಹೊಣೆಯೆಂಬುದು ನಾಗರಿಕರ ಪ್ರಶ್ನೆಯಾಗಿದೆ. ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲವೆಂಬುದು ನಾಗರಿಕರ ಆರೋಪ ಕೇಳಿ ಬರುತ್ತಿದೆ.

             ಇತ್ತೀಚೆಗೆ ಮಳೆ ನೀರು ಮನೆ ಹಾಗೂ ಅಂಗಡಿಗಳಲ್ಲಿ ನುಗ್ಗಿ ಕೋಟ್ಯಾಂತರ ರೂ. ಹಾನಿಯಾಗಿದೆ. ಅದಕ್ಕೆ ಪರಿಹಾರ ಕೂಡ ಇಲ್ಲಿಯ ವರೆಗೆ ಸಿಗದೇ ಇರುವದು ದುರದೃಷ್ಟಕರ. ಅತಿಕ್ರಮಣಗಳು ಅಧಿಕಾರಿಗಳ ನಿರ್ಲಕ್ಷದಿಂದ ತೆರವಾಗದೇ ಇರುವದರಿಂದ ದಿನೇ ದಿನೇ ಅತಿಕ್ರಮಣಗಳು ಹೆಚ್ಚುತ್ತಿವೆ ಇದಕ್ಕೆ ಪುರ ಸಭೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಯಾರ ಹೊಟ್ಟೆ ಕಡಿದರೆ ಯಾರು ಅಜಿವಾನ ತಿನ್ನಬೇಕು ಎಬಂತಾಗಿದೆ. ಇದಕ್ಕೆ ಪರಿಹಾರವೇನು ಎಂಬುದು ಮಾತ್ರ ನಾಗರಿಕರ ಯಕ್ಷ ಪ್ರಶ್ನೆಯಾಗಿದೆ.

             ನಗರದ ಹಲವಾರು ವಾರ್ಡಗಳಲ್ಲಿಯ ಚರಂಡಿಗಳು ಚಿಕ್ಕದಾಗಿದ್ದು ಕೆಲವರು ಮನೆ ಮುಂದೆ ಬೆಡ್ ಹಾಕಿರುವದರಿಂದ ಚರಂಡಿಯಲ್ಲಿ ಪ್ಲಾಸ್ಟಿಕ ಹಾಗೂ ತ್ಯಾಜ್ಯ ವಸ್ತುಗಳು ಸಿಲುಕಿ ಕೊಳಚೆ ನೀರು ರಸ್ತೆ ಮೇಲೆ ಬಂದು ನಾಗರಿಕರು ಮೂಗು ಮುಚ್ಚಿಕೊಂಡು ಕೊಳಚೆ ನೀರಿನಲ್ಲಿಯೇ ರಸ್ತೆ ದಾಟ ಬೇಕಾಗುತ್ತದೆ. ಪುರಸಭೆಯ ಸಫಾಯಿ ಕಾಮಗಾರರಿಗೆ ಚರಂಡಿಗಳನ್ನು ಸ್ವಚ್ಛ ಮಾಡುವದು ತಲೆ ನೋವಾಘಿದೆ. ಪುರಸಭೆ ಕಿರಿಯ ಅಭಿಯಂತರಿಗೆ ಚರಂಡಿಗಳನ್ನು ದೊಡ್ಡದಾಗಿಸಲು ಹಲವಾರು ವೇಳೆ ವಿನಂತಿಸಿಕೊಂಡರೂ ಇಲ್ಲಿಯ ವರೆಗೆ ಯಾವದೇ ರೀತಿಯ ಪ್ರಯೋಜನವಾಗದಿರುವದು ಇವರ ಕರ್ತವ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಸರಕಾರದಿಂದ ಬಂದ ಅನುದಾನ ಯಾವ ಕೆಲಸಕ್ಕೆ ಬಳಸಲಾಗುತ್ತದೆಯೆಂಬುದು ತಿಳಿದು ಬರುತ್ತಿಲ್ಲ. 

             ಗುರುವಾರದಂದು ಸುರಿದ ಮಳೆಯಿಂದಾಗಿ ಚರಂಡಿಗಳು ತುಂಬಿ ಕೊಳಚೆ ನೀರು ರಸ್ತೆ ಮೇಲೆ ಬರುವದರೊಂದಿಗೆ ಕೋಟೆ ಭಾಗದ ಸರಕಾರಿ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ನುಗ್ಗಿ ಹರಿಯುತ್ತಿದ್ದು ಇದು ಮಕ್ಕಳ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ. ಅದೇ ರೀತಿ ನಲ್ಲಿಗಳಿಗೆ ನೀರು ಬಂದಾಗ ಕೂಡ ಇದೇ ಪರಿಸ್ಥಿತಿ. ಅದರಂತೆ ಮಳೆಯಿಂದ ಬಿದ್ದು ಹೋದ ಶಾಲೆಯ ಸುರಕ್ಷಾ ಗೋಡೆ ರಿಪೇರಿ ಆಗದಿರುವದು ವಿಷಾದನೀಯ. ಕಾರಣ ಯಾವದೇ ಅನಾಹುತವಾಗುವ ಮುಂಚೆ ಪುರಸಭೆ ಎಚ್ಚತ್ತು ಕಾರ್ಯ ಪ್ರವೃತ್ತರಾಗಲು ಜನ ಆಗ್ರಹಿಸಿದ್ದಾರೆ.