ಬ್ರಾಹ್ಮಣ ಯುವತಿ ಜೊತೆ ರಾಹುಲ್ ವಿವಾಹ ಮಾಡಿಸುವಂತೆ ಸೋನಿಯಾಗೆ ಹೇಳಿದ್ದೆ - ದಿವಾಕರ್ ರೆಡ್ಡಿ

ಲೋಕದರ್ಶನ ವರದಿ

ನವದೆಹಲಿ, ಜು.06 (ಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಿವಾಹದ ರಾಜಕೀಯ ಪಡಸಾಲೆಯಲ್ಲಿ ಹಲವು ಬಾರಿ ಚಚರ್ೆಯಾಗಿರುವ ವಿಷಯ. ಇದೇ ವಿಷಯದ ಬಗ್ಗೆ ರಾಹುಲ್ ಗಾಂಧಿ ಕುಟುಂಬದ ಹಿತೈಸಿ, ಮಾಜಿ ಕಾಂಗ್ರೆಸ್ಸಿಗ, ಹಾಲಿ ಟಿಡಿಪಿ ಸಂಸದ ಜೆಸಿ ದಿವಾಕರ್ ರೆಡ್ಡಿ ಈಗ ಮತ್ತೊಮ್ಮೆ ಮಾತನಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ರಾಜಕಾರಣದ ಮೇಲೆ ಹಿಡಿತ ಸಾಧಿಸಬೇಕಾದರೆ ಬ್ರಾಹ್ಮಣ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಅಗತ್ಯ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಗೆ ಓರ್ವ ಉತ್ತಮ ಬ್ರಾಹ್ಮಣ ಯುವತಿ ಜೊತೆ ವಿವಾಹ ಮಾಡಿಸುವಂತೆ ಸೋನಿಯಾ ಗಾಂಧಿಗೆ ಹೇಳಿದ್ದೆ. ಆದರೆ ಸೋನಿಯಾ ಗಾಂಧಿ ನನ್ನ ಸಲಹೆಯನ್ನು ಕೇಳಲಿಲ್ಲ ಎಂದು ಜೆಸಿ ದಿವಾಕರ ರೆಡ್ಡಿ ಹೇಳಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಗೆ ಉತ್ತರ ಪ್ರದೇಶದಲ್ಲಿ ಬ್ರಾಹ್ಮಣ ಸಮುದಾಯದ ಬೆಂಬಲ ಅಗತ್ಯವಿದೆ, ಈಹಿನ್ನೆಲೆಯಲ್ಲಿ ರಾಹುಲ್ ಗೆ ಬ್ರಾಹ್ಮಣ ಯುವತಿ ಜೊತೆ ವಿವಾಹ ಮಾಡಿಸುವಂತೆ ಸಲಹೆ ನೀಡಿದ್ದಾಗಿ ರೆಡ್ದಿ ಹೇಳಿದ್ದಾರೆ. ರಾಹುಲ್ ಗಾಂಧಿ ಹಾಗೂ ರಾಯ್ ಬರೇಲಿ ಕ್ಷೇತ್ರದ ಶಾಸಕಿ ಅದಿತಿ ಸಿಂಗ್ ವಿವಾಹದ ಕುರಿತು ಇತ್ತೀಚೆಗೆ ವದಂತಿಗಳು ಹಬ್ಬಿದ್ದವು, ಆದರೆ ಸ್ವತಃ ಅದಿತಿ ಈ ಬಗ್ಗೆ ಸ್ಪಷ್ಟನೆ ನೀಡಿ ರಾಹುಲ್ ತನ್ನ ಸಹೋದರನಿದ್ದಂತೆ ಎಂದು ವದಂತಿಗಳಿಗೆ ತೆರೆ ಎಳೆದಿದ್ದರು.