ಲೋಕದರ್ಶನ ವರದಿ
ಬೆಳಗಾವಿ : ಕಳೆದ ಜೂ.2ರಂದು ಜಿಲ್ಲೆಯ ತುಕ್ಕಾನಟ್ಟಿ ಗ್ರಾಮದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಆಯ್ಕೆಯಾದ ಆಶ್ರಯ ಮನೆಗಳನ್ನು ತಡೆಹಿಡಿಯುವಂತೆ ಒತ್ತಾಯಿಸಿ ಅಲ್ಲಿನ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಮೂಡಲಗಿಯ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಅವರ ನೇತೃತ್ವದಲ್ಲಿ ಬುಧವಾರ ದಿನದಂದು ಜಿಲ್ಲಾಧಿಕಾರಿಗಳ ಕಚೇರಿಗೆ ಬಂದ ನೂರಾರು ಗ್ರಾಮಸ್ಥರು ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿಯೊಂದನ್ನು ಸಲ್ಲಿಸಿ, ತುಕ್ಕಾನಟ್ಟಿ ಗ್ರಾಮದ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಯವರು ಆಶ್ರಯಮನೆಗಳ ಆಯ್ಕೆಯಲ್ಲಿ ತಮಗೆ ಬೇಕಾದ ವ್ಯಕ್ತಿಗಳಿಗೆ ಮನೆ ಹಂಚಿಕೆ ಮಾಡಿದ್ದಾರೆ. ಬಡತನದ ರೇಖೆಗಿಂತ ಕೆಳಗಿನ ಕುಟುಂಬದವರು ನಾಲ್ಕೈದು ಸಲ ಅಜರ್ಿ ಸಲ್ಲಿಸಿದರೂ ಮನೆ ಹಂಚಿಕೆ ಮಾಡದಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಗ್ರಾಮದಲ್ಲಿ 5ರಿಂದ 10 ಎಕರೆ ಜಮೀನು ಹೊಂದಿದ ಕುಟುಂಬದವರ ಕಡೆಯಿಂದ ಸಾವಿರಾರು ರು. ಹಣ ಪಡೆದು ಆಶ್ರಯ ಮನೆ ಹಂಚಿಕೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಒಂದೇ ಕುಟುಂಬದವರಿಗೆ ಎರಡು ಮನೆಗಳನ್ನು ಹಂಚಿಕೆ ಮಾಡಿದ್ದಲ್ಲದೆ, ಓರ್ವ ವಿದ್ಯಾಥರ್ಿಯ ಹೆಸರಿನಲ್ಲಿ ಮನೆ ಹಂಚಿಕೆ ಮಾಡಿ ಅಕ್ರಮ ಎಸಗಿದ್ದಾರೆ ಎಂದು ಮನವಿಯಲ್ಲಿ ವಿವರಿಸಿದ್ದಾರೆ.
ಹಲವಾರು ವರ್ಷಗಳಿಂದ ಆಶ್ರಯ ಮನೆ ಮಂಜೂರಾತಿಗಾಗಿ ಗ್ರಾಮಸ್ಥರು ಹೋರಾಟ ನಡೆಸಿದ್ದೇವೆ. ನಾವು ಕಡು ಬಡವರು ಹಲವಾರು ಸಲ ಗ್ರಾಪಂನಲ್ಲಿ ಆಶ್ರಯ ಮನೆಗಾಗಿ ಅಜರ್ಿ ಸಲ್ಲಿಸಿದ್ದೇವು. ಅರ್ಹರಿಗೆ ಮನೆ ಹಂಚಿಕೆ ಮಾಡುವ ಬದಲು ಅಕ್ರಮವಾಗಿ ಶ್ರೀಮಂತರಿಗೆ ಮನೆ ಹಂಚಿಕೆ ಮಾಡಿರುತ್ತಾರೆ. ಈ ಕೂಡಲೇ ಹಂಚಿಕೆಯಾಗಿರುವ ಆಶ್ರಯ ಮನೆಗಳ ತಡೆ ಹಿಡಯಬೇಕೆಂದು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ನೀಡಲಾಗಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಇಂದಿನ ಪ್ರತಿಭಟನೆಯಲ್ಲಿ ಭೀಮಪ್ಪ ಗಡಾದ, ಗೌರಿ ಹಮ್ಮನ್ನವರ, ರೂಪಾ ಬಬಲೆನ್ನವರ, ಯಲ್ಲಪ್ಪಾ ಮದರ್ಿ ಸೇರಿದಂತೆ ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು.