ಲೋಕದರ್ಶನ ವರದಿ
ಶಿಗ್ಗಾವಿ03: ತಾಲೂಕಿನ ಬಿಸನಳ್ಳಿ ಗ್ರಾಮದ ಕಾಶಿ ಪೀಠದ ವೇದ ಆಗಮ ಸಂಸ್ಕೃತ ಯೋಗ ಪಾಠ ಶಾಲೆಯ ವಿದ್ಯಾಥರ್ಿಗಳಿಗೆ ಹೈದರಾಬಾದ ಬಲಕಂಪೇಟೆಯ ವೀರಶೈವ ಸೇವಾ ಸಮಾಜದವರಿಂದ ಉಚಿತ ಕಲಿಕಾ ಸಾಮಗ್ರಿಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಪಾಠ ಶಾಲೆಯ ಮುಖ್ಯೋಪಾದ್ಯಾಯರಾದ ಶ್ರೀ ವಿಶ್ವೇಶ್ವರಯ್ಯ ಶಾಸ್ತ್ರೀಗಳು ಮಾತನಾಡಿ ಶ್ರೀ ಕಾಶಿ ಪೀಠದ ವೇದ ಪಾಠಶಾಲೆಯಲ್ಲಿ ವಿದ್ಯಾಥರ್ಿಗಳಿಗೆ ಊಟ, ವಸತಿ, ಶಿಕ್ಷಣವನ್ನು ಉಚಿತವಾಗಿ ನೀಡಲಾಗುತ್ತಿದೆ. ಕೇವಲ ನಾಲ್ಕು ವರ್ಷಗಳ ಹಿಂದೆ ಬೆರಳೆಣಿಕೆಯ ವಿದ್ಯಾಥರ್ಿಗಳೊಂದಿಗೆ ಪ್ರಾರಂಭವಾದ ಈ ಪಾಠಶಾಲೆ ಇಗ 150 ವಿದ್ಯಾಥರ್ಿಗಳನ್ನೊಳಗೊಂಡಿದೆ ಎಂದು ಹೇಳಿದರು.
ಪ್ರತಿವರ್ಷ ಲೋಕ ಕಲ್ಯಾಣಾರ್ಥವಾಗಿ ಈ ಬಿಸನಳ್ಳಿ ಗ್ರಾಮದಲ್ಲಿ ನಡೆಯಲಿರುವ ಇಷ್ಟಲಿಂಗ ಮಹಾ ಪೂಜೆ, ಶಿದ್ಧಾಂತ ಶಿಖಾಮಣಿ ಪಾರಾಯಣ, ಆಧ್ಯಾತ್ಮೀಕ ಧರ್ಮ ಭೋದನೆ ಅಂಗವಾಗಿ ನಡೆಯಲಿರುವ ಸಾಮೂಹಿಕ ವಿವಾಹ, ಜಂಗಮವಟುಗಳ ಅಯ್ಯಾಚಾರ, ವೃದ್ದ ದಂಪತಿಗಳ ಜಂಗಮಾರಾಧನೆ ಕಾರ್ಯಕ್ರಮವನ್ನು ಹೈದರಾಬಾದ ಬಲಕಂಪೇಟೆಯ ವೀರಶೈವ ಸೇವಾ ಸಮಾಜದವರು ಬಂದು ಪ್ರತಿವರ್ಷ ನಡೆಸಿಕೊಡುತ್ತಿರುವ ಕಾರ್ಯ ಅತ್ಯಂತ ಮಹತ್ವಪೂರ್ಣ ಕಾರ್ಯವಾಗಿದೆ ಎಂದು ಹೇಳಿದರು.
ವೇದ ಪಾಠಶಾಲೆಯ ವ್ಯವಸ್ಥಾಪಕರಾದ ಗುರುಶಾಂತಪ್ಪ ನರೇಗಲ್ ಮಾತನಾಡಿ ಶ್ರೀ ಕಾಶಿ ಜ. ಡಾ.ಚಂದ್ರಶೇಖರ ಶಿವಾಚಾರ್ಯ ಮಹಾ ಸ್ವಾಮಿಗಳವರ ಪಾದ ಸ್ಪರ್ಶದಿಂದ ಈ ಬಿಸನಳ್ಳಿ ಗ್ರಾಮ ಸುಕ್ಷೇತ್ರವಾಗಿ ಹೊರಹೊಮ್ಮಿದೆ. ಅವರು ತೆರೆದ ವೇದ ಸಂಸ್ಕೃತ ಪಾಠಶಾಲೆಯಲ್ಲಿ ವಿದ್ಯಾಥರ್ಿಗಳು ಉಚಿತವಾಗಿ ಶಿಕ್ಷಣ ಪಡೆಯುವದರಮೂಲಕ ಈ ನಾಡಿನಾದ್ಯಾಂತ ಧರ್ಮ ಭೋದನೆಯನ್ನು ಬಿತ್ತಿ ಬೆಳೆಯಲು ಸಜ್ಜಾಗುತ್ತಿದ್ದಾರೆ. ಬರುವ ದಿನಗಳಲ್ಲಿ ಜಂಜಾಟದ ಬದುಕಿನಲ್ಲಿ ಬಸವಳಿದ ಮನುಷ್ಯನಿಗೆ ನೆಮ್ಮದಿ ನೀಡುವ ಬಹುದೊಡ್ಡ ಆಧ್ಯಾತ್ಮೀಕ ತಾಣವಾಗಿ ಹೊರಹೊಮ್ಮಲಿದೆ ಎಂದು ಹೇಳಿದರು.