ನಿಗದಿತ ಸ್ಥಳಗಳಲ್ಲಿ ಮಾತ್ರ ಗಣೇಶ ವಿಗ್ರಹಗಳ ವಿಸರ್ಜನೆ: ಜಿಲ್ಲಾಧಿಕಾರಿ ಡಾ. ಬೊಮ್ಮನಹಳ್ಳಿ
ಧಾರವಾಡ 05: ಬರುವ ಸೆಪ್ಟಂಬರ್ನಲ್ಲಿ ಗಣೇಶ ಹಬ್ಬವನ್ನು ಪರಿಸರಸ್ನೇಹಿಯಾಗಿ ಆಚರಿಸಲು ಒತ್ತು ನೀಡಲಾಗಿದೆ.ಸಾರ್ವಜನಿಕರು ಮತ್ತು ಪರಿಸರದ ಹಿತದೃಷ್ಟಿಯಿಂದ ಪ್ಲಾಸ್ಟರ್ ಆಫ್ ಪ್ಯಾರಿಸ್(ಪಿಒಪಿ)ನಿಂದ ನಿಮರ್ಿಸಿದ ಮತ್ತು ರಸಾಯನಿಕ ಬಣ್ಣ ಲೇಪಿತ ವಿಗ್ರಹಗಳ ಬಳಕೆ, ಮಾರಾಟವನ್ನು ಜಿಲ್ಲೆಯಾದ್ಯಂತ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹೊರ ರಾಜ್ಯಗಳಿಂದ ತರಿಸಲ್ಪಡುವ ಪಿಒಪಿ ವಿಗ್ರಹಗಳನ್ನು ಜಿಲ್ಲೆಯ ಗಡಿ ಭಾಗದ ಚೆಕ್ಪೋಸ್ಟ್ಗಳಲ್ಲಿಯೇ ನಿರ್ಬಂಧಿಸಲಾಗುವದು. ಈ ಬಾರಿ ಅವಳಿನಗರದ ವಿವಿಧ ಪ್ರದೇಶಗಳ ಜನರರು ಯಾವ ಯಾವ ಜಲಮೂಲಗಳಲ್ಲಿ ಗಣೇಶ ವಿಸರ್ಜನೆ ಮಾಡಬಹುದು ಎಂಬ ಸ್ಥಳಗಳ ಪಟ್ಟಿ ಮಾಡಿ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುವುದು.ಆ ಸ್ಥಳಗಳಲ್ಲಿ ಮಾತ್ರ ವಿಗ್ರಹಗಳನ್ನು ವಿಸಜರ್ಿಸಬೇಕು ಶಬ್ದ ಮಾಲಿನ್ಯ ನಿಯಂತ್ರಿಸಲು ಬೃಹತ್ ಧ್ವನಿವರ್ಧಕ (ಡಿಜೆ)ಗಳನ್ನೂ ಕೂಡ ಬಳಸಬಾರದು. ಜಿಲ್ಲೆಯ ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ಸಹಕರಿಸಿ,ಶಾಂತಿಯುತ ಹಾಗೂ ಪರಿಸರಸ್ನೇಹಿ ಹಬ್ಬ ಆಚರಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ನಡೆದ ಪಿಓಪಿ,ರಸಾಯನಿಕ ಬಣ್ಣಲೇಪಿತ ವಿಗ್ರಹಗಳು ಹಾಗೂ ಜಲಮೂಲಗಳಲ್ಲಿ ವಿಗ್ರಹಗಳ ವಿಸರ್ಜನೆಯ ನಿಷೇಧದ ಕುರಿತು, ಗಣೇಶೋತ್ಸವ ಸಮಿತಿಗಳು,ಗಣೇಶ ವಿಗ್ರಹಗಳ ತಯಾರಕರು ಹಾಗೂ ಮಾರಾಟಗಾರರ ಜಾಗೃತಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಶಬ್ದ, ವಾಯು ಹಾಗೂ ಜಲ ಮಾಲಿನ್ಯದಿಂದ ಆಗುತ್ತಿರುವ ಅಪಾಯಗಳ ಬಗ್ಗೆ ಎಲ್ಲರಿಗೂ ತಿಳುವಳಿಕೆ ಇದೆ.ಗೊತ್ತಿದ್ದರೂ ಸಹ ದುಷ್ಪರಿಣಾಮ ಉಂಟುಮಾಡುವ ಮಾರಕ ವಸ್ತುಗಳನ್ನು ಬಳಸಬಾರದು. ಈ ಕುರಿತು ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಸಭೆ ನಡೆಸಿ, ತಿಳುವಳಿಕೆ ನೀಡಲಾಗುತ್ತಿದೆ. ಪರಿಣಾಮವಾಗಿ ಕಳೆದ ವರ್ಷ ಪಿಒಪಿ ವಿಗ್ರಹಗಳ ಬಳಕೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಜಿಲ್ಲೆಯಲ್ಲಿ ಈ ಬಾರಿ ಪಿಒಪಿ ವಿಗ್ರಹಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯಿಂದ ಈಗಾಗಲೇ ವ್ಯಾಪಾರದ ಪರವಾನಗಿ ಪಡೆದಿರುವ ಗಣೇಶ ವಿಗ್ರಹಗಳ ತಯಾರಕರಿಗೆ ಕೂಡಲೇ ನೊಟೀಸ್ ನೀಡಿ, ಪಿಒಪಿ ವಿಗ್ರಹಗಳ ನಿಮರ್ಾಣ ಕೈಬಿಡಲು ಸೂಚಿಸಬೇಕು. ಉಲ್ಲಂಘನೆ ಮಾಡುವವರ ವಿರುದ್ಧ ಮುನಿಸಿಪಲ್ ಕಾಯ್ದೆಯ ಪ್ರಕಾರ ಕಠಿಣ ಕ್ರಮ ಜರುಗಿಸಬೇಕು. ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು, ಗಣೇಶ ವಿಗ್ರಹಗಳ ತಯಾರಕರ ಅನುಕೂಲಕ್ಕಾಗಿ ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯು ಅವಳಿ ನಗರಗಳಲ್ಲಿ ಪ್ರತ್ಯೇಕವಾಗಿ ಕೋಶ (ವಿಭಾಗ) ತೆರೆಯಬೇಕು. ಪರಿಸರಸ್ನೇಹಿ ಗಣಪತಿ ಮೂತರ್ಿಗಳನ್ನು ತಯಾರಿಸುವ ಕಲಾವಿದರಿಗೆ ಕಾಯರ್ಾಗಾರ ಏರ್ಪಡಿಸಬೇಕು. ಅಂತಹ ಕಲಾವಿದರನ್ನು ಗುರುತಿಸಿ ಮಾನ್ಯತಾ ಪ್ರಮಾಣ ಪತ್ರ ವಿತರಿಸಲಾಗುವುದು . ಸೂಕ್ತ ಸಾರ್ವಜನಿಕ ಸ್ಥಳಗಳಲ್ಲಿ ವಿಗ್ರಹಗಳ ತಯಾರಿಕೆ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುವದು.ವಿದ್ಯಾಥರ್ಿಗಳಲ್ಲಿ ಈ ಕುರಿತು ಜಾಗೃತಿ ಮೂಡಿಸಲು ಶಾಲಾ ಕಾಲೇಜುಗಳಲ್ಲಿ ಪ್ರಬಂಧ,ಚಿತ್ರಕಲೆ ಹಾಗೂ ಭಿತ್ತಿಚಿತ್ರ ತಯಾರಿಕೆ ಸ್ಪಧರ್ೆ ಏರ್ಪಡಿಸಲಾಗುವದು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಹೇಳಿದರು.
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ನ ಕಾನೂನು ವಿಭಾಗದ ಡಿಸಿಪಿ ರೇಣುಕಾ ಸುಕುಮಾರ್ ಮಾತನಾಡಿ, ಮಾಲಿನ್ಯದ ದುಷ್ಪರಿಣಾಮಗಳ ಅರಿವಿದ್ದರೂ ನಿಯಂತ್ರಣದ ಸಮಯ ಬಂದಾಗ ಕೈ ಚೆಲ್ಲಿ ಕುಳಿತುಕೊಳ್ಳಬಾರದು.ಪ್ರತಿಯೊಬ್ಬ ನಾಗರಿಕನೂ ಮಾಲಿನ್ಯ ನಿಯಂತ್ರಣ ಕಾರ್ಯಕ್ಕೆ ಕೈ ಜೋಡಿಸಬೇಕು. ಕಳೆದ ಬಾರಿ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಕೋರಿಕೆಯ ಮೇರೆಗೆ ಕೆಲವು ವಿನಾಯಿತಿಗಳನ್ನು ನೀಡಲಾಗಿತ್ತು. ಈ ಬಾರಿ ಯಾವುದೇ ಕಾರಣಕ್ಕೂ ಪಿಒಪಿ ವಿಗ್ರಹಗಳಿಗೆ ಅನುಮತಿ ನೀಡುವುದಿಲ್ಲ. ಡಿಜೆಗಳ ಬಳಕೆಯಿಂದ ಮಕ್ಕಳ,ವೃದ್ಧರ ಮೇಲೆ ಆಗುತ್ತಿರುವ ಪರಿಣಾಮಗಳನ್ನು ಅರಿಯಬೇಕು .ಎಲ್ಲ ಸಮುದಾಯಗಳು ಒಗ್ಗಟ್ಟಿನಿಂದ ಪರಿಸರಸ್ನೇಹಿ ಗಣೇಶ ಹಬ್ಬ ಆಚರಿಸಿ ಧಾರವಾಡ ಜಿಲ್ಲೆಯನ್ನು ರಾಜ್ಯಕ್ಕೆ ಮಾದರಿಯಾಗಿಸಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ ಮಾತನಾಡಿ, ಜಿಲ್ಲಾಡಳಿತ ನಿರಂತರವಾಗಿ ಮುನ್ಸೂಚನೆ ನೀಡುತ್ತಿದೆ. ಹೊರರಾಜ್ಯಗಳಿಂದ ಪಿಒಪಿ ಗಣೀಶ ವಿಗ್ರಹಗಳನ್ನು ತರಿಸುವ ಪ್ರಯತ್ನಗಳನ್ನು ಯಾರೂ ಮಾಡಬಾರದು.ಜಿಲ್ಲೆಯ ಗಡಿಭಾಗದ ಚೆಕ್ಪೋಸ್ಟ್ಗಳಲ್ಲಿ ಅವುಗಳನ್ನು ನಿರ್ಬಂಧಿಸಲಾಗುವದು ಎಂದರು.
ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಮಹಾಮಂಡಳದ ಕಾರ್ಯದಶರ್ಿ ಅಮರೇಶ ಹಿಪ್ಪರಗಿ ಮಾತನಾಡಿ, ಈ ಬಾರಿ ಹುಬ್ಬಳ್ಳಿಯಲ್ಲಿ ಪರಿಸರಸ್ನೇಹಿ ಗನೇಶೋತ್ಸವ ಆಚರಿಸಲು ಎಲ್ಲ ಸಮಿತಿಗಳು ಸಹಕರಿಸಲಿವೆ.ಕಳೆದ ವರ್ಷ 23 ಪಿಒಪಿ ವಿಗ್ರಹಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಜಿಲ್ಲಾಡಳಿತ ಕಟ್ಟುನಿಟ್ಟಾಗಿ ಕಾಯ್ದೆ ಜಾರಿಗೊಳಿಸಲು ಸಾರ್ವಜನಿಕರು ಸಹಕರಿಸುತ್ತಾರೆ ಎಂದರು.
ಹುಬ್ಬಳ್ಳಿ ಧಾರವಾಡ ನಾಗರಿಕ ಪರಿಸರ ಸಮಿತಿ ಅಧ್ಯಕ್ಷ ಶಂಕರ ಕುಂಬಿ ಮಾತನಾಡಿ, ಜಿಲ್ಲಾಡಳಿತವು ಮಾಲಿನ್ಯ ನಿಯಂತ್ರಣ ಕಾಯ್ದೆ ಅನುಷ್ಠಾನಕ್ಕೆ ಮುಂದಾಗಿದೆ, ಪ್ರಭಾವಿಗಳು ,ಚುನಾಯಿತ ಪ್ರತಿನಿಧಿಗಳು ಈ ಕಾರ್ಯಕ್ಕೆ ಒತ್ತಾಸೆಯಾಗಿ ನಿಲ್ಲಬೇಕು ಎಂದರು. ಪರಿಸರ ಸ್ನೇಹಿ ಗಣೇಶ ವಿಗ್ರಹ ತಯಾರಕ,ಕಲಾವಿದ ಮಂಜುನಾಥ ಹಿರೇಮಠ ಮಾತನಾಡಿ, ಸಾರ್ವಜನಿಕ ಸ್ಥಳಗಳಲ್ಲಿ ಪರಿಸರಸ್ನೇಹಿ ಕಲಾವಿದರಿಗೆ ತಯಾರಿಕೆ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಬೇಕು. ಇಂತಹ ಕಲಾವಿದರ ಶೆಡ್ಗಳಿಗೆ ಒದಗಿಸುವ ವಿದ್ಯಚ್ಛಕ್ತಿಗೆ ವಾಣಿಜ್ಯ ದರ ವಿಧಿಸಬಾರದು. ರಿಯಾಯಿತಿ ನೀಡಿ ಪ್ರೋತ್ಸಾಹಿಸಬೇಕು ಎಂದರು.
ಪರಿಸರ ಪ್ರೇಮಿ ಪ್ರಕಾಶ ಗೌಡರ್ ಮಾತನಾಡಿ, ನದಿ-ಕೆರೆ ಮತ್ತಿತರ ಜಲಮೂಲಗಳಲ್ಲಿ ವಿಗ್ರಹಗಳ ವಿಸರ್ಜನೆ ನಿಷೇಧಿಸಲ್ಪಟ್ಟಿದ್ದರೂ ಕೂಡ ಕೆರೆಗಳನ್ನು ವಿಗ್ರಹಗಳೊಂದಿಗೆ, ಪ್ಲಾಸ್ಟಿಕ್ ಮತ್ತಿತರ ವಸುಗಳಿಂದ ಕಲುಷಿತಗೊಳಿಸುವ ಕಾರ್ಯ ಹಬ್ಬಗಳ ಸಂದರ್ಭದಲ್ಲಿ ನಡೆಯುತ್ತಿದೆ. ಇದರಿಂದ ಜಲಚರಗಳ ಜೀವಕ್ಕೆ ಧಕ್ಕೆಯಾಗುತ್ತಿದೆ ಇದನ್ನು ನಿಯಂತ್ರಿಸಬೇಕು.ನಿಗದಿತ ಜಲಮೂಲಗಳಲ್ಲಿ ಮಾತ್ರ ವಿಗ್ರಹ ವಿಸರ್ಜನೆಯಾಗಬೇಕು ಎಂದು ಸಲಹೆ ನೀಡಿದರು.
ಕಳೆದ ವರ್ಷದ ಗಣೇಶೋತ್ಸವ ಸಂದರ್ಭದಲ್ಲಿ ಶಾಂತಿಯುತ ಪ್ರತಿಷ್ಠಾಪನೆ ಮತ್ತು ವಿಸರ್ಜನೆಗೆ ಎಲ್ಲ ಅಗತ್ಯ ಏಪರ್ಾಟುಗಳನ್ನು ಮಾಡಲು ಶ್ರಮಿಸಿದ ಮಹಾನಗರಪಾಲಿಕೆಯ ಉಪ ಆಯುಕ್ತ ಅಜೀಜ್ ದೇಸಾಯಿ, ಸೂಪರಿಂಟೆಂಡೆಂಟ್ ಇಂಜಿನಿಯರ್ ಡಿ.ಎಸ್.ಮಡಬಿ ಅವರನ್ನು ಗಣೇಶೋತ್ಸವ ಮಹಾಮಂಡಳದ ಪದಾಧಿಕಾರಿಗಳು ಸನ್ಮಾನಿಸಿ, ಗೌರವಿಸಿದರು.
ಕನರ್ಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಅಧಿಕಾರಿ ವಿಜಯಕುಮಾರ್ ಕಡಕ್ಬಾವಿ, ಎಸಿಪಿ ರುದ್ರಪ್ಪ, ಹುಬ್ಬಳ್ಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಮಹಾಮಂಡಳದ ಶ್ರೀಶೈಲಪ್ಪ ಶೆಟ್ಟರ್, ,ಸಾಯಿನಾಥ ಹಿತ್ತಾಳಿ, ಎಸ್.ಎಸ್.ಕಮಡೊಳ್ಳಿಶೆಟ್ರು, ವಿಶ್ವನಾಥ ಹಿತ್ತಾಳಿ, ಮಹಾನಗರಪಾಲಿಕೆ ಸದಸ್ಯ ಅಲ್ತಾಫ್ ಕಿತ್ತೂರ,ಪಿ.ಎಂ.ಹೂಲಿ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.