ಅಮೃತಸರ 11: ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳಿಗೆ ಈಗ ನಿದ್ದೆ ಬರುತ್ತಿಲ್ಲ, ಕಾರಣ ದೇಶದ ರೈತರು ನೆಮ್ಮದಿಯ ನಿದ್ದೆ ಮಾಡುವಂತಾಗಿದೆ. ಕಾಂಗ್ರೆಸ್ ಪಕ್ಷ 70 ವರ್ಷಗಳ ಕಾಲ ರೈತರಿಗೆ ಪೊಳ್ಳು ಭರವಸೆಗಳನ್ನು ನೀಡಿ ವೋಟ್ ಬ್ಯಾಂಕ್ ಮಾಡಿಕೊಂಡಿತ್ತು, ಆದರೆ ಈಗ ಕಾಲ ಬದಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪಂಜಾಬ್ನ ಮುಕ್ಅಸಾರ್ ನಲ್ಲಿ ಎನ್ಡಿಎ ಅಂಗಪಕ್ಷ ಶಿರೋಮಣಿ ಆಕಾಲಿ ದಳ ಬುಧವಾರ ಆಯೋಜಿಸಿದ್ದ ಕಿಸಾನ್ ಕಲ್ಯಾಣ್ ಬೃಹತ್ ಸಮಾವೇಶದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದರು.
ಕೇಂದ್ರ ಸಕರ್ಾರ 14 ಮಂಗಾರು ಬೆಳೆಗಳಿ ಕನಿಷ್ಠ ಬೆಂಬಲ ಬೆಲೆ ಘೋಷಿಸಿದ್ದುದಕ್ಕಾಗಿ ಪ್ರಧಾನಿ ಅವರನ್ನು ಸಮಾರಂಭದಲ್ಲಿ ಅಭಿನಂದಿಸಲಾಯಿತು.
ಕೃಷಿ ಉತ್ಪನ್ನಗಳನ್ನು ದಾಖಲೆ ಸಂಖ್ಯೆಯಲ್ಲಿ ಉತ್ಪಾದಿಸಿ ನೀಡಿದ ರೈತರಿಗೆ ನಾನು ಶಿರಬಾಗಿ ನಮಿಸುತ್ತೇನೆ. ಅವರ ಕಠಿಣ ಶ್ರಮಕ್ಕೆ ನಾನು ಗೌರವ ನೀಡುತ್ತೇನೆ. ಕೊಟ್ಟ ಮಾತಿನಂತೆ 2020 ರ ವೇಳೆಗೆ ರೈತರ ಆದಾಯವನ್ನು ದುಪ್ಪಟ್ಟು ಮಾಡುತ್ತೇನೆ ಎಂದರು.
ರೈತರು ಕಾಂಗ್ರೆಸ್ ಮೇಲೆ ವಿಶ್ವಾಸವಿರಿಸಿದ್ದರು ಆದರೆ ಅವರ ಶ್ರಮಕ್ಕೆ ಕಾಂಗ್ರೆಸ್ ಬೆಲೆ ಕೊಟ್ಟಿಲ್ಲ. ರೈತರನ್ನು ವೋಟ್ ಬ್ಯಾಂಕ್ ಆಗಿ ಮಾತ್ರ ನೋಡಿ ಕೊಂಡಿತ್ತು, ಆದರೆ ಈಗಿನ ಕೇಂದ್ರ ಸಕರ್ಾರ ರೈತರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದೆ ಎಂದರು.
ರಾಜ್ಯದ ರೈತರು ಪಂಜಾಬನ್ನು ಭಾರತದ ಕೃಷಿ ಶಕ್ತಿಯನ್ನಾಗಿ ರೂಪಿಸಿದ್ದಾರೆ ಇದಕ್ಕಾಗಿ ಅಭಿನಂದನೆಗಳು ಎಂದರು.