ಮಕ್ಕಳಿಗೆ ವೈಜ್ಞಾನಿಕ ಮನೋಭಾವ ಬೆಳಸಬೇಕು: ಡಾ. ಶಿವಪ್ರಸಾದ

ಧಾರವಾಡ 04: ನಾವು ವಿದ್ಯಾಥರ್ಿಗಳನ್ನು ವಿಚಾರವಂತರನ್ನಾಗಿಸುತ್ತಿಲ್ಲ. ಮಕ್ಕಳಿಗೆ ಎಷ್ಟು ಸಾಧ್ಯವೋ ಅಷ್ಟು ಬೇಗ ವೈಜ್ಞಾನಿಕ ಮನೋಭಾವ ತುಂಬಲು ಪ್ರಯತ್ನಿಸಬೇಕು. ಪ್ರಶ್ನಿಸುವುದು ಅತ್ಯಂತ ಮಹತ್ವದ ಗುಣ. ಮಕ್ಕಳಲ್ಲಿ ಸ್ವಾಭಾವಿಕವಾಗಿರುವ ಚಿಕಿತ್ಸಕ  ಪ್ರಶ್ನೆಗಳಿಗೆ ನಾವು ಉತ್ತರಿಸಲಾಗದೇ ಆ ಗುಣವನ್ನೇ ಹತ್ತಿಕುತ್ತಿದ್ದೇವೆ. ಹೀಗೆ ಮಾಡದೆ ಪ್ರಶ್ನಿಸುವದನ್ನು ಪ್ರೋತ್ಸಾಹಿಸಬೇಕು. ಆದರೆ ಹಾಗಾಗುತ್ತಿಲ್ಲ. ಮಕ್ಕಳನ್ನು ಯಾಂತ್ರಿಕವಾಗಿ ಶಾಲೆಗೆ ಕಳಿಸುವ ಮೂಲಕ, ಸಿದ್ದಪಠ್ಯಕ್ರಮದ ಕಾರಣದಿಂದಾಗಿ ಮಕ್ಕಳಲ್ಲಿರುವ ಕ್ರಿಯಾಶೀಲತೆಯನ್ನು ಕೊಲ್ಲುತ್ತಿದ್ದೇವೆ ಇದು ವಿಪಯರ್ಾಸ ಎಂದು ಕನರ್ಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿಯ ನಿದರ್ೇಶಕರಾದ ಡಾ. ಎಸ್. ಎಮ್. ಶಿವಪ್ರಸಾದ ಅಭಿಪ್ರಾಯಪಟ್ಟರು. ಅವರು ಇಲ್ಲಿಯ ಕನರ್ಾಟಕ ವಿದ್ಯಾವರ್ಧಕ ಸಂಘವು ಡಾ. ಶರಣಪ್ಪ ತೋಟಪ್ಪ ನಂದಿಬೇವೂರ ದತ್ತಿ ಅಂಗವಾಗಿ ಆಯೋಜಿಸಿದ್ದ ಯುವ ವಿಜ್ಞಾನಿ ಪ್ರಶಸ್ತಿ ಪ್ರದಾನ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.

ಸಮಾರಂಭದಲ್ಲಿ ಯುವ ವಿಜ್ಞಾನಿ ಪ್ರಶಸ್ತಿ ಸ್ವೀಕರಿಸಿದ ಕನರ್ಾಟಕ ವಿಶ್ವವಿದ್ಯಾಲಯದ, ರಸಾಯನ ಶಾಸ್ತ್ರ ವಿಭಾಗದ ವಿನಾಯಕ ಕಾಮತ ಮಾತನಾಡಿ, ನನ್ನ ಪ್ರತಿಭೆಯನ್ನು ಗುರುತಿಸಿ ಗೌರವಿಸುತ್ತಿರುವುದಕ್ಕೆ ಹೆಮ್ಮೆ ಹಾಗೂ ಸಂತೋಷ ಎನಿಸಿದೆ, ಇದರಿಂದ ನನಗೆ ಮತ್ತಷ್ಟು ಪ್ರೋತ್ಸಾಹ ದೊರೆತಂತಾಗಿದೆ ಎಂದರು. 

ಅಧ್ಯಕ್ಷತೆ ವಹಿಸಿದ್ದ ನಾಡೋಜ ಡಾ. ಪಾಟೀಲ ಪುಟ್ಟಪ್ಪನವರು ಮಾತನಾಡಿ, ಮನುಷ್ಯ ಎಷ್ಟು ವರ್ಷ ಬದುಕಿದ ಎನ್ನುವುದು ಮುಖ್ಯವಲ್ಲ, ಆದರೆ ಹೇಗೆ ಬದುಕಿದ ಎನ್ನುವುದು ಮುಖ್ಯ ಎಂದ ಅವರು, ವಿಜ್ಞಾನದ ಸಾಧನೆಗಳು ಒಮ್ಮಿಂದೊಮ್ಮೆಲೆ ಘಟಿಸಿದವುಗಳಲ್ಲ. ಸಾಕಷ್ಟು ಸಮಯ, ಶ್ರಮ, ಪ್ರಯೋಗಗಳ ನಂತರ ಸಿದ್ದಿಸಿದವುಗಳು. ಹಿಂದಿನವರ ಪ್ರಯತ್ನಗಳನ್ನು ಸ್ಮರಿಸುವ ಸೌಜನ್ಯ ನಮಗಿರಬೇಕಿದೆ ಆದರೆ ಇಂದು ಹಾಗಾಗುತ್ತಿಲ್ಲ ಎಂದು ವಿಷಾದಿಸಿದರು. 

ಪ್ರಾರಂಭದಲ್ಲಿ ಶೃದ್ಧಾ ಮೂರಶಿಳ್ಳಿ ಪ್ರಾಥರ್ಿಸಿದರು. ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳನ್ನು ದತ್ತಿ ದಾನಿಗಳಾದ ಶ್ರೀಮತಿ ಅರುಣಾ ನಂದಿಬೇವೂರ ಹೇಳಿದರು. ಡಾ. ಎಸ್. ಎಂ. ತುವಾರ ಮತ್ತು ಡಾ. ನಾಗರಾಜ ಶೆಟ್ಟಿ ಅವರುಗಳು ಅತಿಥಿ, ಅಧ್ಯಕ್ಷರನ್ನು  ಪರಿಚಯಿಸಿದರು. ಡಾ. ಎಸ್. ಟಿ. ನಂದಿಬೇವೂರ ಈ ಸಂದರ್ಭದಲ್ಲಿ ಮಾತನಾಡಿದರು. ಡಾ. ಶಿವಕುಮಾರ ಪಾಟೀಲ ವಂದಿಸಿದರು.  ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಬಸವಪ್ರಭು ಹೊಸಕೇರಿ ಕಾರ್ಯಕ್ರಮ ನಿರೂಪಿಸಿದರು. 

ಕಾರ್ಯಕ್ರಮದಲ್ಲಿ ಸಂಘದ ಕೋಶಾಧ್ಯಕ್ಷರಾದ ಕೃಷ್ಣ ಜೋಶಿ, ಪ್ರಧಾನ ಕಾರ್ಯದಶರ್ಿ ಪ್ರಕಾಶ ಎಸ್. ಉಡಿಕೇರಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಶಿವಾನಂದ ಭಾವಿಕಟ್ಟಿ, ಎಸ್. ಬಿ. ಗಾಮನಗಟ್ಟಿ ಹಾಗೂ ಪ್ರೊ. ಬಿ. ಆರ್. ಹಾವಿನಾಳೆ, ಪ್ರೊ. ಎಂ. ಸಿ. ಕೊಡ್ಲಿ, ಪ್ರೊ. ರಮೇಶ ಸಿದ್ದಾಂತಿ, ಪ್ರಭಾ ಮೂರಶಿಳ್ಳಿ, ಪ್ರೇಮಾ ನಡಕಟ್ಟಿ, ಶ್ರೀಮತಿ ಬಳ್ಳಾರಿ, ಡಾ. ಸಾಂಬ್ರಾಣಿ,  ತೋಟಗಿ, ಪಟ್ಟಣಶೆಟ್ಟಿ, ಕಾಮೋಜಿ, ಭರತ ಜಾಧವ ಮತ್ತು ಪ್ರಾಧ್ಯಾಪಕರು, ವಿದ್ಯಾಥರ್ಿಗಳು ನಂದಿಬೇವೂರ ಪರಿವಾರದವರು ಸೇರಿದಂತೆ ಅನೇಕರು ಭಾಗವಹಿಸಿದ್ದರು.