ಮಕ್ಕಳಲ್ಲಿ ಸೃಜನಶೀಲತೆ ಬೆಳೆಸುವುದು ನಿಜವಾದ ಶಿಕ್ಷಣ.-ರಾಜೇಶ್ವರಿ ಗುದಗನವರ

ತರನೂರ ಜ್ಞಾನಪ್ರಬೋಧಿನಿ ವಿದ್ಯಾಲಯದಲ್ಲಿ ಏರ್ಪಡಿಸಿದ ಅಕ್ಷರಾಭ್ಯಾಸ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಡಾ. ರಾಜೇಶ್ವರಿ ಗುದಗ


ಲೋಕದರ್ಶನ ವರದಿ

ರಾಮದುರ್ಗ: ಶಿಕ್ಷಣವೆಂದರೆ ಸಂಸ್ಕಾರ, ಸಾಧನೆ ಜೊತೆಗೆ ಮಕ್ಕಳಲ್ಲಿ ಸೃಜನಶೀಲತೆಯನ್ನು  ಬೆಳೆಸುವುದು ನಿಜವಾದ ಶಿಕ್ಷಣ. ಕೇವಲ ನಾಲ್ಕು ಗೋಡೆಗಳ ಮಧ್ಯದಲ್ಲಿ ನಡೆಯುವುದಲ್ಲ ಎಂಬ ಸಂಗತಿ ಪ್ರತಿಯೊಬ್ಬರರು ಅರಿತುಕೊಳ್ಳಬೇಕೆಂದು ಬೆಂಬಳಗಿ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ರಾಜಶ್ರೀ ಗುದಗನವರ ಹೇಳಿದರು.

ಸಮೀಪದ ತೂರನೂರ ಗ್ರಾಮದಲ್ಲಿರುವ ರುಕ್ಮಿಣಿಬಾಯಿ ಮಾಳದಕರ ಅವರ ಜ್ಞಾನ ಪ್ರಬೋಧಿನಿ ವಿದ್ಯಾಲಯದಲ್ಲಿ ಏರ್ಪಡಿಸಿದ ಅಕ್ಷರಾಭ್ಯಾಸ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮಕ್ಕಳಲ್ಲಿ ಸಂಸ್ಕಾರ, ಕಾರ್ಯಸಾಧನೆಯ ಚಲ ಸೇರಿದಂತೆ ಸರ್ವತೋಮುಖ ವ್ಯಕ್ತಿತ್ವ ರೂಪಿಸುವ ನಿಟ್ಟಿನಲ್ಲಿ ಶೈಕ್ಷಣಿಕ ಯೋಜನೆಗಳು ಜಾರಿಯಾಗಬೇಕೆಂದು ತಿಳಿಸಿದರು. 

ಬಿಜೆಪಿ ಮುಖಂಡ ಡಾ. ಕೆ. ವ್ಹಿ. ಪಾಟೀಲ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ವಿದ್ಯಾಥರ್ಿಗಳಲ್ಲಿ ವಿಧ್ಯೆಯ ಕುರಿತು ವಿನಯಶೀಲನೆ ಉಂಟಾಗಲು ಗುರುಕುಲ ಮಾದರಿಯ ಶಿಕ್ಷಣದ ಅವಶ್ಯಕತೆ ಇದೆ.  

ರಾಷ್ಟ್ರೀಯ ಜೀವ ವಿಮಾ ವಿಭಾಗಿಯ ವ್ಯವಸ್ಥಾಪಕ ಸುರೇಶ ಕುಲಕಣರ್ಿ ಮಾತನಾಡಿದರು. 

ಶ್ರೀ ಲಡ್ಡು ಮುತ್ಯಾ ಸಾನಿಧ್ಯ ವಹಿಸಿದ್ದರು. ಸಂಸ್ಥೆಯ ಆಡಳಿತಾಧಿಕಾರಿ ನಿವೃತ್ತ ಪ್ರಾಚಾರ್ಯ ವ್ಹಿ.ಎನ್.ಗೋಡಖಿಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಸುರೇಶ ಗುದಗನವರ ಸೇರಿದಂತೆ ಇತರರಿದ್ದರು.

ಮುಖ್ಯೋಧ್ಯಾಪಕಿ ಯಶೋಧಾ ಬಾಕರ್ಿ ಸ್ವಾಗತಿಸಿದರು. ಶಿಕ್ಷಕಿ ಗೀತಾ ಸುಗತೆ ನಿರೂಪಿಸಿದರು. ಸುಧಾ ನಾಡಗೌಡ ವಂದಿಸಿದರು.