ಬೈಲಹೊಂಗಲ : ಉಚಿತ ಪಠ್ಯ ಪುಸ್ತಕಗಳ ವಿತರಣೆಗೆ ಚಾಲನೆ

ಬೈಲಹೊಂಗಲ 20: ತಾಲೂಕಿನ ಪ್ರತಿ ಪ್ರಾಥಮಿಕ/ಪ್ರೌಢ/ಅನುದಾನಿತ /ಅನುದಾನರಹಿತ ಶಾಲೆಗಳಿಗೆ ಉಚಿತ ಹಾಗೂ ಮುಖಬೆಲೆ ಹೊಂದಿರುವ ಪಠ್ಯ ಪುಸ್ತಕಗಳನ್ನು ವಿತರಿಸುವ ಕಾರ್ಯಕ್ಕೆ ಅಂಬೇಡ್ಕರ ಉದ್ಯಾನವನದ ಪಕ್ಕದ ಶತಮಾನದ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ನಂ 1 ಹತ್ತಿರ ನಡೆದ ಕಾರ್ಯಕ್ರಮಕ್ಕೆ ಶಿಕ್ಷಣ ಸಂಯೋಜಕ ಸಿ.ವಾಯ್.ತುಬಾಕಿ ಸೋಮವಾರ ಚಾಲನೆ ನೀಡಿದರು.

     ಅವರು ಮಾತನಾಡಿ ಪ್ರತಿ ವರ್ಷ ಪಠ್ಯ ಪುಸ್ತಕಗಳ ಕೊರತೆಯಿಂದ ಓದುವ ಬಡ ಮಕ್ಕಳ ಮೇಲೆ ತೀವ್ರ ಪರಿಣಾಮ ಬೀಳುತ್ತಿತ್ತು. ಇದನ್ನು ಮನಗಂಡ ರಾಜ್ಯ ಸಕರ್ಾರ ಪ್ರಸ್ತುತ ಶೈಕ್ಷಣಿಕ ವರ್ಷದ ಪ್ರಾರಂಭಕ್ಕಿಂತ ಪೂರ್ವದಲ್ಲೇ ಪಠ್ಯ ಪುಸ್ತಕಗಳನ್ನು ಪ್ರತಿ ಶಾಲೆಗಳಿಗೆ ವಿತರಣೆ ಮಾಡಿ ಮಕ್ಕಳ ಭವಿಷ್ಯಕ್ಕೆ ಅನುಕೂಲ ಮಾಡಿಕೊಡಲಾಗುತ್ತಿದೆ. ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಜವಾಬ್ದಾರಿಯಿಂದಲೇ ನೇರವಾಗಿ ಶಾಲೆಗಳಿಗೆ ತಲುಪಿಸುತ್ತಿದ್ದು ಇದರಿಂದ ಅಲ್ಲಿನ ಶಿಕ್ಷಕರಿಗೆ ಕೆಲಸದ ಒತ್ತಡ ಮತ್ತಷ್ಟು ಕಡಿಮೆಯಾದಂತಾಗಿದೆ. ಯಾವದೇ ವಿದ್ಯಾಥರ್ಿಗೆ ಪಠ್ಯ ಪುಸ್ತಕದ ಕೊರತೆಯಾಗದಂತೆ ಪ್ರತಿ ವಿದ್ಯಾಥರ್ಿಗೂ ಮುಟ್ಟುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

    ಅಹಿಂದ ನೌಕರರ ಸಂಘದ ಜಿಲ್ಲಾಧ್ಯಕ್ಷ ಹಾಗೂ ನಂ 1 ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯ ಬಿ.ಡಿ.ತಮ್ಮಣ್ಣವರ, ಶಿಕ್ಷಣ ಸಂಯೋಜಕ ಎಸ್.ಎಚ್.ಚಳಕೊಪ್ಪ, ಶಿಕ್ಷಕ ಬಿ.ವಾಯ್.ಬಾಳಿಕಾಯಿ, ಜಿ.ಕೆ.ಸುಲ್ತಾನಬಾಯಿ, ರಮೇಶ ತಿಗಡಿ, ಪಿ.ಸಿ.ಸೊಂಟಕ್ಕಿ, ಅಜ್ಜಪ್ಪ ಅಂಗಡಿ, ಬಿ.ವಿ.ಗೌಡಪ್ಪನವರ, ಎನ್.ಬಿ.ಬಾಗೇವಾಡಿ, ಎಂ.ಜಿ.ನದಾಫ, ವಿಜಯ ಯರಗಟ್ಟಿ, ಶ್ರೀಶೈಲ ಹಿರೇಮಠ, ವಿರುಪಾಕ್ಷ ಮುಂತಾದವರು ಉಪಸ್ಥಿತರಿದ್ದರು.