ಬೈಲಹೊಂಗಲ: ಕೂಲಿ ಕಾರ್ಮಿಕರಿಗೆ ಉಚಿತ ತಪಾಸಣಾ ಶಿಬಿರ

ಲೋಕದರ್ಶನ ವರದಿ

ಬೈಲಹೊಂಗಲ 13:  ತಾಲೂಕಿನ ಬೈಲವಾಡ ಗ್ರಾ.ಪಂ. ವ್ಯಾಪ್ತಿಯ ಯರಡಾಲ ಗ್ರಾಮದಲ್ಲಿ ಮಹಾತ್ಮಾ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ವಿಶ್ವಪರಿಸರ ದಿನಾಚರಣೆ ಪ್ರಯುಕ್ತ ಜಾಥಾ ಕಾರ್ಯಕ್ರಮ ಬುಧವಾರ  ಏರ್ಪಡಿಸಲಾಗಿತ್ತು. 

   ತಾಲೂಕಾ ಉದ್ಯೋಗ ಖಾತರಿ ಸಹಾಯಕ ನಿದರ್ೇಶಕ ಸುಭಾಶ ಸಂಪಗಾಂವಿ ಮಾತನಾಡಿ, ಯಾರೂ ಗುಳೆ ಹೋಗದಂತೆ ಗ್ರಾಮೀಣ ಬಡ ಕೂಲಿ ಜನರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಸಕರ್ಾರ ಈ ಉದ್ಯೋಗ ಖಾತ್ರಿ ಯೋಜನೆ ರೂಪಿಸಿದ್ದು ಇದನ್ನು ಸದ್ಭಳಕೆ ಮಾಡಿಕೊಂಡು ಸವಲತ್ತುಗಳನ್ನು ಪಡೆಯಬೇಕೆಂದರು.

   ಪಂಚಾಯತ ಅಭಿವೃದ್ದಿ ಅಧಿಕಾರಿ ಬಿ.ಎಲ್.ಬೆಳವಲ್ ಮಾತನಾಡಿ, ಉದ್ಯೋಗ ಖಾತ್ರಿ ಕಾರ್ಯದಲ್ಲಿ ನಿರತರಾಗಿರುವ ಕಾಮರ್ಿಕರಿಗೆ ಉಚಿತ ಆರೋಗ್ಯ ಕಲ್ಪಿಸಲಾಗಿದ್ದು ಪ್ರತಿಯೊಬ್ಬರು ಪ್ರಯೋಜನ ಪಡೆಯಬೇಕೆಂದರು. 

    ಗ್ರಾಪಂ. ಅಧ್ಯಕ್ಷೆ ಡಿ.ವಿ.ಗಿರೆಪ್ಪಗೌಡ್ರ,  ಉಪಾಧ್ಯಕ್ಷ ಭೀಮಪ್ಪ ಕಮತಗಿ, ಪಿ.ಡಿ.ಓ ಸಿದ್ದಪ್ಪ ಮಳಗಲಿ, ಡಾ. ದೀಪಾ ಹಿರೇಮಠ, ಡಾ. ಆನಂದ ಕನ್ನಿನಾಯ್ಕರ, ಡಾ.ನಾಗರಾಜ ಕಡೆ, ಗ್ರಾ.ಪಂ ಸದಸ್ಯ ನಿಂಗಪ್ಪ ರಾಜಗೋಳಿ, ನಭೀನಾ ನದಾಪ್, ಕಾಶವ್ವಾ ಬೈಲಪ್ಪನವರ, ಸಂಜೀವ ಗಿರೆಪ್ಪಗೌಡರ ಹಾಗೂ ಗ್ರಾ.ಪಂನ ಸಿಬ್ಬಂದಿ ವರ್ಗ, ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.