ಅನಿಲಕುಮಾರ ಬೇಗಾರಗೆ ಕರುನಾಡ ಭೂಷಣ ಪ್ರಶಸ್ತಿ ಪ್ರದಾನ

ಲೋಕದರ್ಶನ ವರದಿ

ಕೊಪ್ಪಳ: ಪಕ್ಕದ ಗೋವಾ ರಾಜ್ಯದ ಸಾಕಳಿ ನಗರದಲ್ಲಿ ರವಿವಾರ ಜರುಗಿದ ಗೋವಾ ಕನ್ನಡಿಗರ ಸಾಂಸ್ಕೃತಿಕ ಸಂಭ್ರಮ ಹಾಗೂ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕೊಡಮಾಡಿದ ಕರುನಾಡ ಭೂಷಣ ಪ್ರಶಸ್ತಿಯನ್ನು ಕೊಪ್ಪಳದ ಸಮಾಜ ಸೇವಕ ಹಾಗೂ ನಾಗರತ್ನ ಶಿಕ್ಷಣ ಮತ್ತು ಕಲ್ಯಾಣ ಸೇವೆ ಸಂಸ್ಥೆಯ ಕಾರ್ಯದರ್ಶಿ ಅನಿಲಕುಮಾರ ಆರ್. ಬೇಗಾರ ರವರಿಗೆ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಗೋವಾ ರಾಜ್ಯದ ಮುಖ್ಯಮಂತ್ರಿ ಪ್ರಮೋದ ಸಾವಂತ್ ನೆರವೇರಿಸಿ ವಿವಿಧ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಿದ ಈ ಸಂದರ್ಭದಲ್ಲಿ  ಕೊಪ್ಪಳದ ಅನಿಲಕುಮಾರ ರವರ ಸಕ್ರೀಯವಾಗಿ ಸಾಮಾಜಿಕ ಚಟುವಟಿಕೆಯಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡು ಜನಸಾಮಾನ್ಯರಿಗೆ ಸರಕಾರದ ವಿವಿಧ ಯೋಜನೆಗಳ ಮಾಹಿತಿ ನೀಡುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಅವರ ಕಾರ್ಯವನ್ನು ಪರಿಗಣಿಸಿ ಸದರಿ ಪ್ರಶಸ್ತಿಯನ್ನು ಗೋವಾ ಕನ್ನಡಿಗಿರ ಸಂಘದ ಪರವಾಗಿ ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಸಭಾ ಸದಸ್ಯ ಬೆಳಗಾವಿಯ ಡಾ. ಪ್ರಭಾಕರ ಕೋರೆ ಸೇರಿದಂತೆ ಗೋವಾ ರಾಜ್ಯದ ಜನಪ್ರತಿನಿಧಿಗಳು ಅಧಿಕಾರಿಗಳು, ಗೋವಾ ಕನ್ನಡಿಗರ ವಿವಿಧ ಸಂಘಗಳ ಪದದಾದಿಕಾರಿಗಳು ಮಠಾಧೀಶರು ಅಲ್ಲದೇ ಸಮ್ಮೇಳನದ ಅಧ್ಯಕ್ಷ ಪ್ರಭು ರತ್ನಾಕರ, ಸಂಘಟಕ ಮಹೇಶಬಾಬು  ಸುವರ್ೆ, ಗೋವಾ ಕನ್ನಡಿಗರ ರಾಜ್ಯಾಧ್ಯಕ್ಷ ಹನುಮಂತರಡ್ಡಿ ಶಿರೂರು, ಎಸ್.ಹೆಚ್.ಪಾಟೀಲ್ ಅನೇಕರು ಭಾಗವಹಿಸಿದ್ದರು.

ಗೋವಾದಲ್ಲಿ ಕನ್ನಡ ರಾಜ್ಯೋತ್ಸವದಲ್ಲಿ ನವ್ಹಂಬರ್: 03ರಂದು ಜರುಗಿದ ಸಾಂಸ್ಕೃತಿಕ ಸಂಭ್ರಮಾಚರಣೆಯಲ್ಲಿ ಕೊಪ್ಪಳದ ಅನಿಲಕುಮಾರ ಬೇಗಾರರವರಿಗೆ ಕರುನಾಡ ಭೂಷಣ ಪ್ರಶಸ್ತಿ ಲಭಿಸಿರುವದಕ್ಕೆ ಜಿಲ್ಲೆಯ ವಿವಿಧ ಸಂಘಟನೆಗಳು ಹರ್ಷವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.