ಶಿಕ್ಷಣ ಕ್ಷೇತ್ರಕ್ಕೆ ಅನ್ಯಾಯ, ಎಸ್ಎಪ್ಐನಿಂದ ಪ್ರತಿಭಟನೆ


ಲೋಕದರ್ಶನ ವರದಿ

ಯಲಬುಗರ್ಾ 06: ಕನರ್ಾಟಕ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಸಮ್ಮಿಶ್ರ ಸರಕಾರದಿಂದ ರಾಜ್ಯದ ಶಿಕ್ಷಣ ಕ್ಷೇತ್ರಕ್ಕೆ ಬಹುದೊಡ್ಡ ಅನ್ಯಾಯವಾಗಿದೆ ಎಂದು ಎಸ್ಎಪ್ಆಯ್ ಸಂಘಟನೆಯ ತಾಲೂಕ ಸಂಚಾಲಕ ಎಮ್ ಸಿದ್ದಪ್ಪ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ತಹಶೀಲ್ದಾರ ರಮೇಶ ಅಳವಂಡಿಕರ್ ಅವರ ಮುಖಾಂತರ ಮುಖ್ಯ ಮಂತ್ರಿಯವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು. ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಂಡಿಸಿರುವ ರಾಜ್ಯ ಬಜೆಟ್ನಲ್ಲಿ ಶಿಕ್ಷಣ ಕ್ಷೇತ್ರದ ಬಗ್ಗೆ ಅತ್ಯಂತ ನಿರ್ಲಕ್ಷ ವಹಿಸಲಾಗಿದೆ ಕಳೆದ ಬಾರಿ 11;78 ರಷ್ಟು ಹಣ ಮೀಸಲಿಡಲಾಗಿತ್ತು ಈ ಬಾರಿ 0.78% ರಷ್ಟು ಹಣವನ್ನು ಕಡಿತಗೊಳಿಸಲಾಗಿದೆ ಕೇವಲ 11% ರಷ್ಟು ಹಣವನ್ನು ಮೀಸಲಿರಿಸಿರುವದನ್ನು ನೋಡಿದರೆ ಗೊತ್ತಾಗುತ್ತದೆ ಇವರಿಗೆ ಶಿಕ್ಷಣಕ್ಕೆ ಇರುವ ಕಾಳಜಿ ಇದೆ ಎನ್ನುವದು ಹಾಗೂ ರಾಜ್ಯದ ಶಾಲಾ ಕಾಲೇಜುಗಳ ಕಟ್ಟಡ ದುರಸ್ಥಿಗಾಗಿ ಕೇವಲ 150 ಕೋಟಿ ಮೀಸಲಿಡಲಾಗಿದೆ  ರಾಜ್ಯದಲ್ಲಿ ಸಾವಿರಕ್ಕೂ ಹೆಚ್ಚು ಶಾಲೆ ಕಾಲೇಜುಗಳು ಶೀಥಲಾವಸ್ಥೆಯಲ್ಲಿವೆ ಈ ಹಣ ಯಾವುದಕ್ಕೂ ಸಾಕಾಗುವದಿಲ್ಲಾ ಶಾಲೆಗಳ ವಿಲೀನ ಹೆಸರಲ್ಲಿ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆದಿದೆ ದಾಖಲಾತಿ ಹೆಚ್ಚಿಸುವ ಬದಲು ಶಾಲೆ ಮುಚ್ಚಿಸುವದು ಯಾವ ನ್ಯಾಯ? ವಿದ್ಯಾಥರ್ಿಗಳಿಗೆ ಉಚಿತ ಬಸ್ ಪಾಸ್ ನಿಡದೆ ದ್ರೊಹ ಮಾಡಿದೆ ಇವೆಲ್ಲಾ ಕಾರಣಗಳಿಗೆ ಮುಂಬರುವ ದಿನಗಳಲ್ಲಿ ಪರಿಹಾರ ದೊರೆಯದೆ ಇದ್ದಲ್ಲಿ ಉಗ್ರ್ರ ಹೋರಾಟ ಮಾಡಲಾಗುವದು ಎಂದು ತಿಳಿಸಿದರು. ಸಂಘದ ಸದಸ್ಯರಾದ ಅಲ್ಲಾಭಕ್ಷೀ, ಹೊನ್ನೂರಪ್ಪ, ಹನುಮಂತಪ್ಪ.ನಾಗರಾಜ ಸೇರಿದಂತೆ ಶಾಲಾ ಕಾಲೇಜು ವಿದ್ಯಾಥರ್ಿಗಳು ಹಾಜರಿದ್ದರು.