ಅಜರ್ುನವಾಡ ಸಕರ್ಾರಿ ಪ್ರೌಢ ಶಾಲೆಯಲ್ಲಿ-ವಚನ ವೈಭವ

ಲೋಕದರ್ಶನ ವರದಿ

 ಹುಕ್ಕೇರಿ 04:  ತಾಲೂಕಿನ  ಖಾತೇದಾರ ಬಾಲಚಂದ್ರರಾವ್ ಇನಾಮದಾರ ಸಕರ್ಾರಿ ಪ್ರೌಢ ಶಾಲೆ ಅಜರ್ುನವಾಡನಲ್ಲಿ  ಇತ್ತೀಚಿಗೆ ಶಾಲಾ ವಿದ್ಯಾಥಿಗಳಿಂದ ಪಠ್ಯ ಆಧಾರಿತ  ಬಸವ ವಚನ ಗಾಯನ ಕಾರ್ಯಕ್ರಮ ನಡೆಯಿತು. ಬಸವ ಟಿವಿ ಚಾನಲ್ನಿಂದ ಆಯೋಜಿತ ಕಾರ್ಯಕ್ರಮದಲ್ಲಿ  ಶಾಲಾ ವಿದ್ಯಾಥರ್ಿಗಳು ಸಂಗೀತ ಶಿಕ್ಷಕರಾದ ನಿರಂಜನ ಬಡಿಗೇರ ಅವರ ಮಾರ್ಗದರ್ಶನದಲ್ಲಿ  12 ನೇ ಶತಮಾನದ ಬಸವಾದಿ ಶರಣರ ವಚನಗಳನ್ನು ತಮ್ಮ ಅಧ್ಭುತ ಕಂಠದಿಂದ ಸಾದರಪಡಿಸಿದರು.

           ಶಾಲೆಯ 8 ನೇ ತರಗತಿ  ವಿದ್ಯಾಥರ್ಿ ಶ್ರವನಕುಮಾರ ಚೌಗಲಾ, ಬಸವಣ್ಣನವರ ಆಯ್ದ ವಚನಗಳನ್ನು ನೋಡದೇ ನಿರರ್ಗಳವಾಗಿ ಪಠಿಸಿ ಎಲ್ಲರ ಗಮನ ಸೆಳೆದ. 10 ನೇ ವರ್ಗದ ವಿದ್ಯಾಥರ್ಿನಿಯರಾದ  ಕಮಲಾಕ್ಷಿ .ಶೆಂಡೂರಿ, ಲಕ್ಷ್ಮೀ ಶೆಂಡೂರಿ. ಲಕ್ಷ್ಮೀ ದಡ್ಡಿ ರವರು  ಬಸವ ಜೀವನ ಚರಿತ್ರೆ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡರು. 

           ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಶಾಲಾ ಎಸ್.ಡಿ.ಎಮ್ಸಿ ಅಧ್ಯಕ್ಷ ಸುರೇಶ ಹುದ್ದಾರರವರು  12 ನೇ ಶತಮಾನದ  ಬಸವಣ್ಣನವರ ಕುರಿತು ಅಧಿಕೃತ ಮಾಹಿತಿ ನೀಡಬಲ್ಲ ಕನರ್ಾಟಕದ ಏಕೈಕ ಶಾಸನ ಅದು ಅಜರ್ುನವಾಡ ಶಾಸನವಾಗಿದ್ದು. ಇಂತಹ ಪುಣ್ಯಭೂಮಿಯಲ್ಲಿ ಇಂತಹ ಕಾರ್ಯಕ್ರಮವನ್ನು ಆಯೋಜನೆ ಮಾಡಿದ ಬಸವ ಟಿ.ವಿ ಯವರ ಕಾರ್ಯ ಅಭಿನಂದನಾರ್ಹ ಎಂದರು. 

           ಕಾರ್ಯಕ್ರಮದ ಅಧ್ಯಕ್ಷೀಯ ಭಾಷಣ ಮಾಡಿದ ಶಾಲಾ ಮುಖ್ಯೋಪಾಧ್ಯಾಯ  ಎಸ್.ವಿ.ಖಡಕಭಾವಿ ಅವರು,  ಅಜರ್ುನವಾಡ ಗ್ರಾಮಕ್ಕೆ ತನ್ನದೇ ಆದ ಇತಿಹಾಸವಿದ್ದು, ಇನ್ನಷ್ಟು  ಸಂಶೋಧನೆ  ಮತ್ತು ಉತ್ಖನನದ ಅವಶ್ಯಕತೆಯಿದೆ. ಬಸವಣ್ಣನವರ ತತ್ವಗಳು ವಿಶ್ವಕ್ಕೆ ಮಾದರಿಯಾಗಿದ್ದು, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನದಲ್ಲಿ ನೆಮ್ಮದಿ ಸಾಧ್ಯವಿದೆ ಎಂದರು. 

          ಶಾಲಾ ಭೂದಾನಿಗಳಾದ ಹನುಮಂತರಾವ ಇನಾಮದಾರ, ನಿವೃತ್ತ ಶಿಕ್ಷಕ ಅಪ್ಪಣ್ಣಾ ಮರಡಿ, ಎಸ್ಡಿಎಮ್ಸಿ ಸದಸ್ಯರಾದ ಅಣ್ಣಾಗೌಡ ಪಾಟೀಲ, ಮಾರುತಿ ದಡ್ಡಿ, ಇಲಾಯಿ ನದಾಪ್, ಸುರೇಶ ಕುಡಚಿ, ಸುರೇಖಾ ರವದಿ. ಶಕುಂತಲಾ ಘಸ್ತಿ. ಸಂಗೀತಾ ಪವಾರ. ಲಕ್ಷ್ಮೀ ಕೋಳಿ. ಹಾಗೂ ಶಾಲೆಯ ಸರ್ವಶಿಕ್ಷಕ ಸಿಬ್ಬಂದಿ ಉಪಸ್ಥಿತರಿದ್ದರು. ಶಿಕ್ಷಕ ಎಸ್. ಆಯ್.ಖೋತ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.