ಲೋಕದರ್ಶನವರದಿ
ರಾಣೇಬೆನ್ನೂರು: ಭಾರತೀಯ ಸಂಸ್ಕೃತಿಯ ಪರಂಪರೆಯಲ್ಲಿ ವೇದ-ಇತಿಹಾಸ ಕಾಲಗಳಿಂದಲೂ ಈ ನಾಡಿನ ದೇಶದ ಸ್ತ್ರೀ ಕುಲಕ್ಕೆ ಅತ್ಯಂತ ಗೌರವ ಅಭಿಮಾನ ಮತ್ತು ಸನ್ಮಾನ ಸದಾ ಕಾಲ ಇದ್ದೇ ಇದೆ. ಎಲ್ಲಿ ಸ್ತ್ರೀ ಕುಲಕ್ಕೆ ಪೂಜ್ಯನೀಯ ಭಾವನೆ ಇಲ್ಲವೂ ಅಲ್ಲಿ ಯಾವುದೇ ಸಂಸ್ಕೃತಿ ಮತ್ತು ಸಂಸ್ಕಾರ ಇಲ್ಲವೆಂದು ಭಾವಿಸಬೇಕಾಗುತ್ತದೆ. ಸಮಸ್ತ ಸ್ರೀ ಸಮೂಹಕ್ಕೆ ಗೌರವ ಮತ್ತು ಅಭಿಮಾನ ತರುವಂತಹ ಕೆಲಸ ರಾಷ್ಟ್ರೀಯ ಕೃಷಿ ಮಹಿಳಾ ಪ್ರಶಸ್ತಿ ಪುರಸ್ಕೃತರಾಗಿರುವ ಕವಿತಾ ಮಿಶ್ರಾ ಅವರು ತಮ್ಮ ಕೃಷಿ ಸಾಧನೆ ಮೂಲಕ ಮಾಡಿತೋರಿಸಿದ್ದಾರೆ ಎಂದು ನಿಶಾಡರ್್ ಸೇವಾ ಸಂಸ್ಥೆಯ ಅಧ್ಯಕ್ಷೆ ರುಕ್ಷ್ಮೀಣಿ ಪಿ. ಸಾಹುಕಾರ ಹೇಳಿದರು.
ತಾಲೂಕಿನ ಮೈದೂರು ಗ್ರಾಮದ ನೈಸರ್ಗಿಕ ಕೃಷಿ ತೋಟದಲ್ಲಿ ಬಸವಜ್ಯೋತಿ ಮಹಿಳಾ ಮಂಡಳ, ಓಂ ಶಿಕ್ಷಣ ಸಮೂಹ ಸಂಸ್ಥೆಗಳು, ಓಂ ಮಲ್ಟಸ್ಪೆಶಾಲಿಟಿ ಆಸ್ಪತ್ರೆ, ಆಯೋಜಿಸಿದ್ದ, ವಚನ ಶ್ರಾವಣ ಅನುಭಾವ ಜ್ಯೋತಿ ಕಾರ್ಯಕ್ರಮದಲ್ಲಿ ಕೃಷಿ ಪ್ರಶಸ್ತಿ ಪುರಸ್ಕೃತೆ ಕವಿತಾ ಮಿಶ್ರಾ ಅವರ ಅಭಿನಂದನಾ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯಾವುದೇ ಹಬ್ಬ ಹರಿದಿನಗಳು, ಜಾತ್ರೆ-ಉತ್ಸವಗಳು, ಧಾರ್ಮಿಕ ಕಾರ್ಯಕ್ರಮಗಳು ಅವೆಲ್ಲವೂ ಪರಿಪೂರ್ಣಗೊಳ್ಳಬೇಕಾದರೆ, ಈದೇಶದ ಮಹಿಳೆ ಪ್ರಮುಖ ಪಾತ್ರ ವಹಿಸುವಂತವಳಾಗಿದ್ದಾಳೆ. ಸಮಾಜಮುಖಿ ಕಾರ್ಯದಲ್ಲಿ ತನ್ನನ್ನೇ ತಾನು ತೊಡಗಿಸಿಕೊಳ್ಳುವ ಮಹಿಳೆ ತವರು ಮನೆಯಿಂದ ಗಂಡನಮನೆಗೆ ಬಂದರೆ ಅವಳ ಪಾಲಿಗೆ ಗಂಡನಮನೆಯೇ ಶ್ರೇಯಸ್ಸೆಂದು ಮನೆಯ ಏಳ್ಗೆಗಾಗಿ ಸದಾ ಶ್ರಮಿಸುವಂತವಳಾಗಿದ್ದಾಳೆ. ಅಂತಹ ಮಹಿಳೆ ಈ ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಮುಂದಾಗಿದ್ದಾಳೆ ಎಂದರು.
ಸಂಸ್ಥೆ ಅಡಿಯಲ್ಲಿ ಅನಾಥಮಕ್ಕಳ, ವಯೋವೃದ್ಧರ, ಆದಿವಾಸಿ ಜನಾಂಗೀಯ ಶಿಕ್ಷಣ ಪ್ರಗತಿಯ ಜೋತೆಗೆ ಅವರ ಲಾಲನೆ-ಪಾಲನೆ ಮತ್ತು ಅವರ ಭವಿಷ್ಯವನ್ನು ರೂಪಿಸುವ ಹೊಣೆ ಹೊತ್ತು ತನ್ನ ಕರ್ತವ್ಯವನ್ನು ಮಾಡುತ್ತಿದೆ. ಅಂತಹ ಸಾಮಾಜಿಕ ಮತ್ತು ಜನಪರ ಕೆಲಸ ಕಾರ್ಯಗಳು ಮಾಡುವಾಗ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಉದ್ದೇಶಿತ ಯೋಜನೆ ಪ್ರಭಲವಾಗಿದ್ದರೆ, ಎಲ್ಲವೂ ಯಶಸ್ವಿ ಸಾಧ್ಯವಾಗಲಿದೆ ಎಂದರು.
ಸಮಾರಂಭದ ಭಾಗವಹಿಸಿದ್ದ, ಸ್ಥಳೀಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಪ್ರಕಾಶಾನಂದಜೀ ಮಹಾರಜ್ ಅವರು ಧರ್ಮ ಸಂಸ್ಕೃತಿ ಮಹಿಳೆಯರ ಬದುಕಿನಲ್ಲಿ ಹಾಸು ಹೊಕ್ಕಾಗಿ ಸಾಗಿ ಬಂದಿದೆ. ಧರ್ಮವಿಲ್ಲದ ಬದುಕು ಸಕಾರವಾಗಲಾರದು. ಅಂತಹ ಧರ್ಮ ಸಂಸ್ಕೃತಿಯಲ್ಲಿ ಮಹಿಳೆಯರು ತಮ್ಮ ಬದುಕನ್ನು ನಡೆಸುತ್ತಿರುವುದರಿಂದಲೇ ಭಾರತೀಯ ಕುಟುಂಬಗಳು ಸದಾ ಶಾಂತಿ, ನೆಮ್ಮದಿ, ಪ್ರೀತಿ-ವಿಶ್ವಾಸ ಮತ್ತು ಭಾವೈಕ್ಯತೆಯಿಂದ ಬದುಕಲು ಸಾಧ್ಯವಾಗಿದೆ ಎಂದರು.
ಕೃಷಿ ಮಹಿಳೆ ಕವಿತಾ ಮಿಶ್ರಾ ಮತ್ತು ತಾಲೂಕಿನ ಜಿಲ್ಲೆಯ ಸಾವಯವ ಕೃಷಿ ಸಾಧಕ ಗಣ್ಯರನ್ನು ನಾಗರೀಕ ಸನ್ಮಾನ ನೀಡಿ ಗೌರವಿಸಲಾಯಿತು. ಮಹಿಳಾ ಮಂಡಳದ ಸದಸ್ಯರು ವಚನ ಸಂಗೀತ ಸಾದರಪಡಿಸಿದರು, ವೇದಿಕೆಯಲ್ಲಿ ಆರ್.ಜಿ.ಹಿರೇಗೌಡ್ರ, ಚನ್ನಬಸಪ್ಪ ಗುದ್ದಿ, ಎ.ಡಿ.ಸಾಹುಕಾರ, ಸುವರ್ಣಮ್ಮ ಪಾಟೀಲ, ಗಿರಿಜಾದೇವಿ ದುರ್ಗದಮಠ, ವ್ಹಿ.ಎಂ.ಕರ್ಜಗಿ, ಡಾ|| ಮನೋಜ ಸಾಹುಕಾರ, ಉಮಾಶಂಕರ ುಶ್ರಾ, ವ್ಹಿ.ಆರ್.ತೊಟದ ಸೇರಿದಂತೆ ನೂರಾರು ಸಾವಯವ ಕೃಷಿಕ ರೈತರು -ರೈತಮಹಿಳೆಯರು ಪಾಲ್ಗೊಂಡಿದ್ದರು.