ಬೆಳಗಾವಿ 13:
ತಂತ್ರಜ್ಞಾನ ವೇಗವಾಗಿ ಬೆಳೆಯುವದರಿಂದ ಯುವಕರಿಗೆ ನಿರುದ್ಯೋಗದ ಸಮಸ್ಯೆ ಹೆಚ್ಚುತ್ತಿದೆ. ಮಾರುಕಟ್ಟೆಯಲ್ಲಿ ಉದ್ಯೋಗದ
ಅವಕಾಶಗಳು ತೀರಾ ಕಡಿಮೆಯಾಗುತ್ತಿವೆ. ಸರಕಾರವು
ಖಾಲಿ ಇರುವ ಹುದ್ದೆಗಳನ್ನು ಭತರ್ಿ
ಮಾಡಿದೆ ಹಾಗೇ ಬಿಡುತ್ತಿದೆ, ಅದಕ್ಕಾಗಿ
ನಮಗೆ ಉತ್ತಮ ಅವಕಾಶವೆಂದರೆ ಸ್ವಂತ
ಕೈಗಾರಿಕೆಗಳನ್ನು ಪ್ರಾರಂಭಿಸುವದು ಅಗತ್ಯವಿದೆ ಎಂದು ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ
ಪ್ರೋ ಪಿ.ಜಿ ಕೊಣ್ಣುರ
ಹೇಳಿದರು.
ಸ್ಥಳೀಯ
ಮರಾಠಾ ಮಹಾವಿದ್ಯಾಲಯದಲ್ಲಿ ವಾಣಿಜ್ಯಶಾಸ್ತ್ರ ಮತ್ತು ಅರ್ಥಶಾಸ್ತ್ರಸ್ನಾತಕ ಹಾಗೂ ಸ್ನಾತಕೋತ್ತರ ವಿಭಾಗಳ
ವತಿಯಿಂದ ಆಯೋಜಿಸಲಾಗಿದ್ದ ಒಂದು ದಿನದ ವಿಚಾರ
ಸಂಕೀರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯುವಕರು
ಸಣ್ಣ ಕೈಗಾರಿಕೆಗಳನ್ನು ಪ್ರಾರಂಭಿಸಲು ಉತ್ತೇಜಿಸಿದರು. ದೇಶದಲ್ಲಿ ಸಣ್ಣ ಕೈಗಾರಿಕೆಗಳನ್ನು ಪ್ರಾರಂಭಿಸಲು
ವಿಫಲ ಅವಕಾಶಗಳಿವೆ. ಬ್ಯಾಂಕುಗಳು ಸಹ ಹಣಕಾಸಿನ ನೆರವನ್ನು
ನೀಡುತ್ತಿವೆ. ಸರಕಾರವು ಸಣ್ಣ ಕೈಗಾರಿಕೆಗಳನ್ನು ಆರಂಭಿಸಲು
ತರಬೇತಿ ನೀಡುತ್ತಿದೆ. ಈ ಸಂದರ್ಭವನ್ನು ಯುವಕರು
ಸದುಪಯೋಹ ಪಡೆದುಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಪ್ರೋ.ಆರ್.ಎಂ ತೇಲಿ,
ಪ್ರೋ ಜಿ.ವಾಯ್ ಬೆನ್ನಾಳಕರ,
ಪ್ರೋ.ಶಿಲ್ಪಾ ಅವಟೆ, ಪ್ರೋ.ಎಂ ಜಿ.ಪಾಟೀಲ ಹಾಗೂ ಉಪಸ್ಥಿತಿರದ್ದರು. ಪ್ರೋ.ಎಚ್ ಮೋಳೆರಕಿ ನಿರೂಪಿಸಿದರು.
ಪ್ರೋ. ಅರ್ಚನಾ ಭೋಸಲೆ ವಂದಿಸಿದರು.