ಯುವಕರಿಗೆ ಹೆಚ್ಚು ಅವಕಾಶ ನೀಡಬೇಕು: ವಿರಾಟ್ Young people should be given more: Virat
Lokadrshan Daily
1/5/25, 12:00 PM ಪ್ರಕಟಿಸಲಾಗಿದೆ
ಇಂದೋರ್, ಜ.8 ಯುವ ಆಟಗಾರರು ಸಿಕ್ಕ ಅವಕಾಶವನ್ನು ಬಳಸಿಕೊಂಡು ತಂಡದ ಗೆಲುವಿನಲ್ಲಿ ಮಿಂಚಿದ್ದಾರೆ ಎಂದು ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.
ಗುವಾಹಟಿಯಲ್ಲಿ ನಡೆದಿದ್ದ ಮೊದಲ ಟಿ-20 ಪಂದ್ಯ ಮಳೆಯಿಂದ ರದ್ದಾಗಿದ್ದರಿಂದ, ಎರಡನೇ ಟಿ-20 ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿತ್ತು. ಈ ಪಂದ್ಯವನ್ನು ಗೆದ್ದಿರುವ ಆತಿಥೇತ ತಂಡ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ನಮ್ಮ ಆಲೋಚನೆ ಸರಳವಾಗಿದೆ. ನಮ್ಮ ತಂಡದ ಯುವ ಆಟಗಾರರು ಒತ್ತಡವನ್ನು ಮೆಟ್ಟಿ ಆಡುವುದನ್ನು ಮೈಗೂಡಿಸಿಕೊಳ್ಳಬೇಕಿದೆ. ಯುವ ಆಟಗಾರರಲ್ಲಿನ ಕ್ಷಮತೆಯನ್ನು ಸಾಬೀತು ಪಡೆಸಲು ಅವರಿಗೆ ಅವಕಾಶ ನೀಡುವ ಅವಶ್ಯಕತೆ ಇದೆ. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಆಡಿ ಖುಷಿ ಪಟ್ಟಿದ್ದೇನೆ. ವಿಂಡೀಸ್ ವಿರುದ್ಧದ ಪಂದ್ಯದಲ್ಲೂ ಇದೇ ತಂತ್ರವನ್ನು ನಾವು ಅನುಸರಿದ್ದೇವು. ಅನುಭವಿ ಬುಮ್ರಾ, ಭುವಿ, ಶಾರ್ಧೋಲ್ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದಿದ್ದಾರೆ.
ಬುಮ್ರಾ ತಂಡಕ್ಕೆ ಮರಳಿರುವುದು ಸಂತಸ ತಂದಿದೆ. ಇನ್ನು ಅವರ ವೇಗ ಮೊದಲಿನಂತೆ ಇದೆ. ಉತ್ತಮ ಆಟಗಾರರನ್ನು ನಾವು ಹುಡುಕಿ ಪ್ರೋತ್ಸಾಹಿಸ ಬೇಕಿದೆ. ದೇಶಿಯ ಟೂರ್ನಿಯಲ್ಲಿ ಪ್ರಸಿದ್ಧ ಕೃಷ್ಣ ಸಹ ಉತ್ತಮವಾಗಿ ಆಡಿದ್ದಾರೆ ಎಂದು ವಿರಾಟ್ ಹೇಳಿದ್ದಾರೆ.
ಶ್ರೀಲಂಕಾ ತಂಡ ಎಡಗೈ ಬೌಲರ್ಗಳನ್ನು ಆಡಿದೆ ಅನುಭವ ಹೊಂದಿದೆ. ಹೊಸದನ್ನು ಮಾಡುವುದು ನಮ್ಮ ಯೋಜನೆಯಾಗಿತ್ತು. ನಮಗೆ ತಂಡದಲ್ಲಿ ಸಮತೋಲನ ಬೇಕು. ಟಿ-20 ಕ್ರಿಕೆಟ್ನಲ್ಲಿ ಐದು ಕ್ಕೂ ಹೆಚ್ಚು ಬೌಲರ್ಗಳು ಬೇಕು. ಇದು ಉತ್ತಮ ಪಿಚ್ ಮತ್ತು ನಾವು ಅದರ ಮೇಲೆ ಚೆನ್ನಾಗಿ ಆಡಿದ್ದೇವೆ. ನಾವು ನಿರಂತರವಾಗಿ ವಿಕೆಟ್ ತೆಗೆದುಕೊಳ್ಳುತ್ತಿದ್ದೆವು ಮತ್ತು ನಾವು ಅವರಿಗೆ 170-175ರ ದೊಡ್ಡ ಸ್ಕೋರ್ ಮಾಡಲು ಬಿಡಲಿಲ್ಲ ಮತ್ತು ಗಳಿಸಿದ ಸ್ಕೋರ್ ಅನ್ನು ಸುಲಭವಾಗಿ ಮುಟ್ಟಿದ್ದೇವು ಎಂದು ನಾಯಕ ತಿಳಿಸಿದ್ದಾರೆ.