ಯುವಕರು ಮಾನಸಿಕ, ದೈಹಿಕ ಸದೃಢತೆಯನ್ನು ಹೊಂದಬೇಕು: ಅಂಗಡಿ

ಲೋಕದರ್ಶನ ವರದಿ

ಗದಗ: ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,   (ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ), ಗದಗ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯ, ಜಿಲ್ಲಾ ಪೊಲೀಸ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ವಾತರ್ಾ ಮತ್ತು ಪ್ರಚಾರ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಅಬಕಾರಿ ಇಲಾಖೆ, ಜಿಲ್ಲಾ ಕಾರಾಗೃಹ, ಸರ್ ಸಿದ್ದಪ್ಪ ಕಂಬಳಿ ಕೈಗಾರಿಕಾ ತರಬೇತಿ ಕೇಂದ್ರ ಹಾಗೂ ತಾಲೂಕಾ ಆರೋಗ್ಯಾಧಿಕಾರಿಗಳು, ಗದಗ ಇವರುಗಳು ಸಂಯುಕ್ತ ಆಶ್ರಯದಲ್ಲಿ ಸರ್ ಸಿದ್ದಪ್ಪ ಕಂಬಳಿ ಕೈಗಾರಿಕಾ ತರಬೇತಿ ಕೇಂದ್ರ ಗದಗದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಜರುಗಿತು.     

                ಬೆಳೆಯುವ ಸಿರಿಯನ್ನು ಮೊಳಕೆಯಲ್ಲಿ ನೋಡು ಎಂಬಂತೆ ಬಾಲ್ಯದಲ್ಲಿಯೆ ಪ್ರತಿಭೆಯನ್ನು ಗುರುತಿಸಬಹುದು ಇಂದಿನ ದಿನದಲ್ಲಿ ಯುವಕರಿಗೆ ಮಾನಸಿಕ ಆರೋಗ್ಯದ ಅರಿವು ಹೆಚ್ಚು ಅವಶ್ಯಕತೆಯಿದ್ದು ಯುವಕರು ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡು ದೇಶದ ಸಂಪತ್ತಾಗಿ ರೂಪಗೊಳ್ಳಬೇಕು ಆದ್ದರಿಂದ ಯುವಕರು ಮಾನಸಿಕ ಹಾಗೂ ದೈಹಿಕ ಸದೃಢತೆಯನ್ನು ಹೊಂದಿ ಸಮಾಜಕ್ಕೆ ಹಾಗೂ ದೇಶಕ್ಕೆ ಉತ್ತಮ ಕೊಡುಗೆಯನ್ನು ನೀಡಿ ಎಂದು ರೂಪಾ ಅಂಗಡಿ, ಯುವಕರಿಗೆ ಕರೆ ನೀಡಿದರು.

                ಪ್ರಭಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ವಾಯ್ ಕೆ. ಭಜಂತ್ರಿ ಇವರು ಪ್ರಾಸ್ತಾವಿಕ ನುಡಿಯಲ್ಲಿ ಬದಲಾಗುತ್ತಿರುವ ಜಗತ್ತಿನಲ್ಲಿ ಯುವಜನತೆಯ ಮಾನಸಿಕ ಆರೋಗ್ಯವು ತುಂಬಾ ಅವಶ್ಯಕವಾಗಿದ್ದು, ಖಿನ್ನತೆ ಆತಂತದಂತಹ ತೊಂದರೆಗಳನ್ನು ಅನುಭವಿಸುತಿದ್ದಾರೆ ಹಾಗೂ ಮಧ್ಯ ಹಾಗೂ ಮಾದಕ ವಸ್ತುಗಳಿಂದ ದೂರವಿದ್ದು ಯೋಗ ಧ್ಯಾನಗಳಂತಹ ಹವ್ಯಾಸಗಳನ್ನು ರೂಡಿಸಿಕೊಂಡು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ವಿದ್ಯಾಥರ್ಿಗಳಿಗೆ ಕರೆ ನೀಡಿದರು.

      ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದಶರ್ಿಗಳಾದ ರೇಣುಕಾ ಜಿ, ಕುಲಕಣರ್ಿ ಅವರು ಮಾತನಾಡಿ "ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ", ನಿಮಗೆ ನೀವೇ ನಾಯಕರಾಗಿ, ನೂರು ಜನರಿಗೆ ಮಾದರಿಯಾಗಿ ಬದಕನ್ನು ರೂಪಿಸಿಕೊಳ್ಳಿ ಎಂದು ಯುವಕರಿಗೆ ಕರೆ ನೀಡಿದರು.

      ಡಾ. ಸೋಮಶೇಖರ ಬಿಜ್ಜಳ ಇವರು ತಮ್ಮ ಉಪನ್ಯಾಸದಲ್ಲಿ ಹದಿಹರೆಯದಲ್ಲಿ ಉಂಟಾಗುವ ಮಾನಸಿಕ ಹಾಗೂ ದೈಹಿಕ ಬದಲಾವಣೆಗಳ ಕುರಿತು ಮಾತನಾಡಿ ವಿದ್ಯಾಥರ್ಿಗಳು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಹೇಗೆ ಕಾಯ್ದುಕೊಳ್ಳ ಬೇಕೆಂದು ವಿದ್ಯಾಥರ್ಿಗಳಿಗೆ ಮನ ಮುಟ್ಟುವಂತೆ ಉಪನ್ಯಾಸ ನೀಡಿದರು.

                ಸರ್ ಸಿದ್ದಪ್ಪ ಕಂಬಳಿ ಕೈಗಾರಿಕಾ ತರಬೇತಿ ಕೇಂದ್ರ ಗದಗದ ಪ್ರಾಚಾರ್ಯರಾದ ಶ್ರೀಧರ ಪಾಟೀಲ ಇವರು ಅಧ್ಯಕ್ಷಿಯ ನುಡಿಯಲ್ಲಿ ಮಾನಸಿಕ ಆರೋಗ್ಯದ ಕುರಿತು ಹಮ್ಮಿಕೊಂಡ ಕಾರ್ಯಕ್ರಮವು ನಮ್ಮ ಕಾಲೇಜಿನ ವಿದ್ಯಾಥರ್ಿಗಳಿಗೆ ಅತ್ಯಂತ ಉಪಯೋಗವಾಯಿತು ಎಂದು ತಿಳಿಸಿದರು.

                ಸಮಾರಂಭದಲ್ಲಿ ಡಾ. ಎಸ್.ಎಸ್.ನೀಲಗುಂದ ತಾಲೂಕಾ ಆರೋಗ್ಯಾಧಿಕಾರಿಗಳು ಗದಗ ಡಾ. ವೈಶಾಲಿ ಎನ್. ಹೆಗಡೆ ಮನೋವೈದ್ಯರು, ಸರ್ ಸಿದ್ದಪ್ಪ ಕಂಬಳಿ ಕೈಗಾರಿಕಾ ತರಬೇತಿ ಕೇಂದ್ರದ ತರಬೇತಿ ಅಧಿಕಾರಿಗಳಾದ ಆರ್.ಎನ್ ನೀರಲಗಿ ಮತ್ತು ಕೆ.ಎಚ್. ಅಳವಿ. ಆರೋಗ್ಯ ಇಲಾಖಾ ಸಿಬ್ಬಂದಿಗಳಾದ ಬಸವರಾಜ ಲಾಲಗಟ್ಟಿ, ವೆಂಕಟೇಶ ಮಹಾಜನ, ಪ್ರಭು ಹೊನಗುಡಿ, ದೇವರವರ, ಶ್ರೀಧರ ಎಮ್.ಸಿ , ವಿನಾಯಕ ಕಾಳೆ, ವಿ.ಜಿ.ಲಿಂಬಿಕಾಯಿ, ಸರಸ್ವತಿ ಆಡಿನ್, ವಿನಾಯಕ ವಾಗ್ಮೋರೆ, ಹಾಗೂ ಕಾಲೇಜಿನ ಸಿಬ್ಬಂದಿ ವರ್ಗ ಮತ್ತು  ಇಲಾಖೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು. ಕುಷ್ಠರೋಗ ನಿಯಂತ್ರಣ ಅಧಿಕಾರಿಗಳಾದ ಡಾ. ಆರ್.ಸಿ.ಕೊರವನವರ ಸ್ವಾಗತಿಸಿದರು, ಎಸ್.ಎಸ್.ಕುಬಸದರವರು ಪ್ರಾರ್ಥನಾ ಗೀತೆ ಹಾಡಿದರು. ಸುರೇಶ ಎಚ್. ಇವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.