ರೋಟರಿ ಕ್ಲಬ್ನಿಂದ ಯೋಗ ಗುರು ಉದ್ದಂಡಿಯವರಿಗೆ ಸನ್ಮಾನ

ಲೋಕದರ್ಶನ ವರದಿ

ದಾಂಡೇಲಿ 30: ಜಿಲ್ಲೆಯ ಖ್ಯಾತ ಯೋಗಗುರು ಹಾಗೂ ಸ್ಥಳೀಯ ಹಲೆದಾಂಡೇಲಿ ಸರಕಾರಿ ಉದರ್ು ಪ್ರೌಢ ಶಾಲೆಯ ದೈಹಿಕ ಶಿಕ್ಷಕ ಎಚ್.ಎಸ್. ಉದ್ದಂಡಿಯವರನ್ನು  ನಗರದ ರೋಟರಿ ಕ್ಲಬ್ವತಿಯಿಂದ  ಶನಿವಾರ  ರೋಟರಿ ಸಭಾಭವನದಲ್ಲಿ ಸನ್ಮಾನಿಸಲಾಯಿತು.

ರೋಟರಿ ಕ್ಲಬ್ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಯೋಗ ತರಬೇತಿಯನ್ನು ಯಶಸ್ವಿಯಾಗಿ ನಡೆಸಿಕೊಟ್ಟಿರುವುದು ಮತ್ತು ಜಿಲ್ಲೆಯಾದ್ಯಂತ ಯೋಗ ತರಬೇತಿಗಳನ್ನು ನೀಡಿ ಆರೋಗ್ಯವಂತ ಸಮಾಜ ನಿಮರ್ಾಣಕ್ಕೆ ಶ್ರಮಿಸುತ್ತಿರುವುದನ್ನು ಗುರುತಿಸಿ ಎಚ್.ಎಸ್. ಉದ್ದಂಡಿಯವರನ್ನು ರೋಟರಿ ಕ್ಲಬ್ ಪರವಾಗಿ ಸನ್ಮಾನಿಸಲಾಯಿತು.

ರೋಟರಿ ಕ್ಬಿನ ಅಧ್ಯಕ್ಷ ಎಸ್.ಪ್ರಕಾಶ ಶೆಟ್ಟಿಯವರು ಎಚ್.ಎಸ್.ಉದ್ದಂಡಿಯವರು ನಿಸ್ವಾರ್ಥವಾಗಿ ಯೋಗ ತರಬೇತಿಗಳನ್ನು ನೀಡುವುದರ ಮೂಲಕ ಆರೋಗ್ಯವಂತ ಸಮಾಜ ನಿಮರ್ಾಣಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದ್ದಾರೆ. ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಗಳಾಗಿರುವ ಎಚ್.ಎಸ್,.ಉದ್ದಂಡಿಯವರ ಈ ಮಹತ್ಕಾರ್ಯ ನಿರಂತರವಾಗಿ ನಡೆಯಲೆಂದರು.

ಸನ್ಮಾನಕ್ಕೆ ಕೃತಜ್ಷತೆ ಸಲ್ಲಿಸಿ ಮಾತನಾಡಿದ ಎಚ್.ಎಸ್. ಉದ್ದಂಡಿಯವರು ನಮಗೆ ಗೊತ್ತಿರುವ ಜ್ಞಾನವನ್ನು ಇನ್ನೊಬ್ಬರಿಗೆ ತಿಳಿಸುವ ಸಣ್ಣ ಪ್ರಯತ್ನ ಮಾಡುತ್ತಿರುವ ನನ್ನ ಕಾರ್ಯವನ್ನು ಗುರುತಿಸಿ ಸನ್ಮಾನಿಸಿದ ರೋಟರಿ ಕ್ಲಬಿಗೆ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ರೋಟರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ರೋಟರಿ ಶಿಕ್ಷಣ ಸಂಸ್ಥೆಯ ಸಮನ್ವಯಾಧಿಕಾರಿ ಅರುಣ್ ನಾಯ್ಕ, ರೋಟರಿ  ಕಾರ್ಯದಶರ್ಿ ಎಸ್.ಸೋಮಕುಮಾರ್, ಮುಖ್ಯೋಪಾಧ್ಯಯಿನಿ ಕಲ್ಪನಾ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರೋಟರಿ ಪದಾಧಿಕಾರಿಗಳಾದ  ಸುಧಾಕರ ಶೆಟ್ಟಿ, ಮಿಥುನ್ ನಾಯಕ, ಆರ್.ಪಿ.ನಾಯ್ಕ, ರೋಟರಿ ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.