ಲೋಕದರ್ಶನ ವರದಿ
ಮಾಂಜರಿ 21: ಜೀವನವನ್ನು ಯಶಸ್ವಿಯಾಗಿ ನೀರ್ವಹಿಸಬೇಕಾದರೆ ವಿದ್ಯಾಥರ್ಿ ಜೀವನದಲ್ಲಿ ಕನಿಷ್ಠ ದಿನದ ಒಂದು ಗಂಟೆ ಸಮಯವನ್ನು ಯೋಗ ಹಾಗೂ ಧ್ಯಾನಕ್ಕೆ ಮೀಸಲಿಡಬೇಕು ಎಂದು ಕೋಲ್ಲಾಪೂರದ ಯೋಗ ವಿದ್ಯಾದಾನದ ಯೋಗ ಶಿಕ್ಷಕಿ ಡಾ. ಶ್ವೇತಾ ಪಾಟೀಲ ಹೇಳಿದರು. ತಾಲೂಕಿನ ಅಂಕಲಿ ಗ್ರಾಮದ ಗೋಮಟೇಶ ಶಿಕ್ಷಣ ಸಂಸ್ಥೆಯ ಡಾ. ಎನ್.ಎ . ಮಗದುಮ್ಮ ಅಯುವೇದಿಕ ಕಾಲೇಜ ಹಾಗೂ ವಿವಿಧ ಅಂಗ ಸಂಸ್ಥೆಯ ಸಂಯುಕ್ತ ಅಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂದಿನ ಒತ್ತಡದ ಜೀವನ ಶೈಲಿಯಿಂದ ಮನುಷ್ಯನ ರೋಗದ ಮೇಲೆ ಪರಿಣಾಮ ಬಿರುತ್ತಿದ್ದು ಜೊತೆಗೆ ವಿದ್ಯಾಥರ್ಿಗಳ ಮಾನಸಿಕ ಸ್ಥಿತಿಯಲ್ಲಿ ಏರುಪೇರಾಗುತ್ತಿದ್ದು ಸುಗಮ ಮತ್ತು ನೇಮ್ಮದಿಯ ಜೀವನ ಸಾಗಿಸಲು ಯೋಗ ಅತ್ಯಗತ್ಯ ಯೋಗ ಒಂದು ಚಿಕಿತ್ಸೆ ಅಲೋಪತಿಕ ಔಷಧಿ ರೋಗವನ್ನು ನಿಯಂತ್ರಣದಲ್ಲಿಡುತ್ತದೆ. ಆದರೆ ರೋಗ ನಿಮರ್ೂಲನೆ ಯೋಗದಿಂದ ಮಾತ್ರ ಸಾಧ್ಯ ಎಂದರು.
ನಮ್ಮ ಶರೀರ ಪಂಚಭೂತಗಳಿಂದ ನಿಮರ್ಾಣವಾಗಿದೆ. ಶರೀರದ ಮೇಲೆ ಹತೋಟಿ ಬೇಕಾದರೇ ನೈಸಗರ್ಿಕವಾಗಿ ಬದುಕಬೇಕು ಎಂದರು. ಯೋಗವೆಂದರೆ ದೈಹಿಕ, ಮಾನಸಿಕ, ಅಧ್ಯಾತ್ಮಿಕ ಶಿಸ್ತುಬದ್ಧ ಆಚರಣೆ. ಇದು ವಿಶ್ವಕ್ಕೆ ಭಾರತದ ದೊಡ್ಡ ಕೊಡುಗೆ. ಯೋಗವನ್ನು ಕಲಿತು ಅಭ್ಯಸಿಸಬೇಕು. ಯೋಗವೆಂದರೇ ಕೂಡುವಿಕೆ. ದೇಹ ಮತ್ತು ಮನಸ್ಸು ಒಂದಾಗುವುದು. ಯೋಗದಿಂದ ಮಾಡುವ ಕೆಲಸದಲ್ಲಿ ನಿಷ್ಠೆ ಬರುತ್ತದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಡಾ. ಎನ್.ಎ. ಮಗದುಮ್ಮ ಮಾತನಾಡಿ, ಯೋಗ ನಮ್ಮ ಭಾರತೀಯರ ಕೊಡುಗೆ. ಇಂದು ಜಗತ್ತಿನಾದ್ಯಂತ ಎಲ್ಲ ರಾಷ್ಟ್ರಗಳಲ್ಲಿ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಎಲ್ಲ ಸಂಪತ್ತುಗಳಲ್ಲಿ ಆರೋಗ್ಯ ಸಂಪತ್ತು ಮುಖ್ಯ ಆದ್ದರಿಂದ ಪ್ರಾ. ಬಸವರಾಜ ಘಂಟಿ, ಎನ್.ಎಸ್.ನಿಡಗುಂದೆ, ಲಲಿತಾ ಮಗದುಮ್ಮ, ಬಸವಣ್ಣಿ ಸಂಗಪ್ಪಗೋಳ, ವಿ.ಎ.ಜಾಧವ, ಸಾಮ್ರಾಟ ಪಾಟೀಲ, ರಾಹುಲ ಚ್ಔಗಲೆ, ಚಿಂತಾಮಣಿ ಕಡೋಲೆಕರ, ಪ್ರಮೋಧನಿ ಚೌಗಲಾ, ಕವಿತಾ ಮೇತ್ರಿಯೆ, ಕುಲದೀಪ ಲೋಕರೆ, ವಿದ್ಯಾ ಲೋಕರೆ, ಎಸ್.ಎಸ್.ಮಠಪತಿ, ವಿಶಾಲ ಚ್ಔಗಲಾ, ಶಾಹೀಸ್ತಾ ಜಮಾದಾರ ಮುಂತಾದ ವರು ಉಪಸ್ಥಿತರಿದ್ದರು.