ಲೋಕದರ್ಶನ ವರದಿ
ಯಲ್ಲಾಪುರ 31: ನನ್ನ ಕ್ಷೇತ್ರದ ಅಭಿವೃದ್ಧಿಯ ಕುರಿತಾಗಿ ನನಗೆ ಸ್ಪಷ್ಟ ಕಲ್ಪನೆಯಿದೆ. ಕಳೆದ 25 ವರ್ಷಗಳ ಇತಿಹಾಸದಲ್ಲಿ ಈ ಪ್ರದೇಶದ ಜನಪ್ರತಿನಿಧಿಗಳು ಮಾಡದೇ ಇರುವಂತಹ ಅನೇಕ ಕೆಲಸಗಳನ್ನು ಮಾಡಿದ್ದೇನೆ. ಆದರೆ ಕೆಲವು ರಸ್ತೆಗಳು ಮಾತ್ರ ಉಳಿದಿವೆ. ಅದು ಕೇವಲ ಶಾಸಕ ಒಬ್ಬನೇ ಮಾಡಬೇಕೆನ್ನುವದರ ಬದಲಿಗೆ ಉಳಿದ ಜನಪ್ರತಿನಿಧಿಗಳೂ ಮಾಡಬಹುದಿತ್ತಲ್ಲ. ಆ ಕುರಿತು ಯಾರು ಏಕೆ ಮಾತನಾಡುವುದಿಲ್ಲ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಅವರು ಸೋಮವಾರ ತಾಲೂಕಿನ ನಂದೋಳ್ಳಿ ಗ್ರಾ.ಪಂ ವ್ಯಾಪ್ತಿಯ ಹುಲಗಾನಿನ ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನದ ಆವಾರದಲ್ಲಿ 25 ಲಕ್ಷ ರೂ ವೆಚ್ಚದಲ್ಲಿ ನಿಮರ್ಾಣಗೊಳ್ಳಲಿರುವ ಪ್ರವಾಸೋದ್ಯಮ ಇಲಾಖೆಯ ಅನುದಾನದಡಿಯಲ್ಲಿ ಯಾತ್ರಿ ನಿವಾಸ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿ, ಮಾತನಾಡುತ್ತಿದ್ದರು. ನನ್ನ ಕ್ಷೇತ್ರದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚು ಅವಕಾಶಗಳಿವೆ. ಆ ದೃಷ್ಟಿಯಿಂದ ಶಿರಲೆ ಜಲಪಾತ, ಸಾತೊಡ್ಡಿ ಜಲಪಾತ ರಸ್ತೆಗಳಿಗೆ ಶಾಶ್ವತ ಕಾಂಕ್ರೇಟಕರಣ ರಸ್ತೆಯನ್ನು ಮಾಡಲಾಗಿದೆ. ಇನ್ನುಳಿದ ಮಾಗೋಡ, ಜೇನಕಲ್ಲುಗುಡ್ಡದ ರಸ್ತೆಯ ಅಭಿವೃದ್ಧಿಗೆ 1 ಕೋಟಿ ರೂದ ಅನುದಾನದಲ್ಲಿ ಕಾಮಗಾರಿ ನಡೆಯಲಿದೆ. ಕೇಂದ್ರ ರಸ್ತೆ ಅಭಿವೃದ್ಧಿ ನಿಧಿಯಿಂದ ಸಾಕಷ್ಟು ಹಣ ಅನೇಕ ಜಿಲ್ಲೆಗಳಿಗೆ ಬಂದಿದೆ. ಅಂತೆಯೇ ನಮ್ಮ ಜಿಲ್ಲೆಗೂ ಹಣ ತರುವುದಕ್ಕೆ ನಮ್ಮ ಅನಂತಕುಮಾರ ಹೆಗಡೆಯವರಿಗೆ ವಿನಂತಿಸಿದ್ದೇನೆ. ಜಿಲ್ಲಾ ಪಂಚಾಯತ, ಗ್ರಾಮ ಪಂಚಾಯತ ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು ಕೂಡಿ ಕೆಲಸ ಮಾಡಿದಾಗ ಮಾತ್ರ ಆ ಪ್ರದೇಶದ ಅಭಿವೃದ್ಧಿ ಸಾದ್ಯ. ಆ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ಮಂಜುನಾಥ ಭಟ್ಟರ ಹೆಚ್ಚಿನ ಪ್ರಯತ್ನದಿಂದ ಈ ಅನುದಾನ ದೊರೆಯಲು ಸುಲಭವಾಗಿದೆ. ಇದನ್ನು ಸರಿಯಾಗಿ ಬಳಸಿಕೊಳ್ಳಬೇಕು. ನನ್ನ ಕ್ಷೇತ್ರ ವಿಶಾಲವಾದ ಪ್ರದೇಶ ಆಗಿರುವುದರಿಂದ ಎಲ್ಲಾ ಪ್ರದೇಶದ ರಸ್ತೆಗಳು ಸುಲಭವಾಗಿ ಸಮರ್ಪಕಗೊಳಿಸುವುದು ಕಷ್ಟದಾಯಕವಾಗಿದೆ ಎಂದರು.
ಪಿ.ಎಲ್.ಡಿ ಬ್ಯಾಂಕಿನ ಅಧ್ಯಕ್ಷ ಆರ್.ಎಸ್.ಭಟ್ಟ ಮಾತನಾಡಿ, ಕಳೆದ 5 ವರ್ಷಗಳಲ್ಲಿ ಶಿವರಾಮ ಹೆಬ್ಬಾರ ಹಿಂದೆ ಯಾರೂ ಮಾಡದಷ್ಟು ಕೆಲಸ ಮಾಡಿ ತೋರಿಸಿದ್ದಾರೆ. ತಾತ್ಕಾಲಿಕವಾಗಿ ಅಣಲಗಾರ ರಸ್ತೆ, ಮಾಗೋಡ ರಸ್ತೆಗೆ ಹಣ ಮಂಜೂರಿಯಾಗಿ ಸದ್ಯದಲ್ಲೇ ಕೆಲಸ ಪ್ರಾರಂಭವಾಗಲಿದೆ. ಜಿಲ್ಲಾ ಪಂಚಾಯತ ಸದಸ್ಯರಿಗೂ ಕೂಡಾ 70 ಲಕ್ಷ ಅನುದಾನ ಬಂದಿದೆ. ಅವರು ಇಂತಹ ರಸ್ತೆಯ ರಿಪೇರಿ ಮಾಡಬಹುದು. ಕೇವಲ ಎಲ್ಲದನ್ನೂ ಶಾಸಕರೇ ಮಾಡಬೇಕೆಂದು ಹೇಳುವುದು ಸರಿಯಲ್ಲ. ಹೆಬ್ಬಾರರು ಶಾಸಕರಾಗುವ ಮೊದಲು ಹಿಂದಿನ ಸ್ಥಿತಿ ಹೇಗಿತ್ತು ಎಂಬುದನ್ನು ನೆನಪು ಮಾಡಿಕೊಳ್ಳಬೇಕು. ಎಂದು ಮಾಮರ್ಿಕವಾಗಿ ಮಾತನಾಡಿದರು.
ಬೆಂಗಳೂರಿನಲ್ಲಿ ನೆಲೆಸಿರುವ ವಿದ್ವಾನ ಮಂಜುನಾಥ ಭಟ್ಟ ಮಾತನಾಡಿ, ಶಾಸಕ ಹೆಬ್ಬಾರರ ಸಹಕಾರದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಸದ್ಯ 25 ಲಕ್ಷ ಅನುದಾನ ಬಂದಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ನೀಡಬಹುದೆಂದು ಸಚಿವರು ಭರವಸೆ ನೀಡಿದ್ದಾರೆ ಎಂದರು. ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಿ.ಎಸ್.ಭಟ್ಟ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪ್ರಮುಖರಾದ ನಾಗೇಶ ಹೆಗಡೆ ಪಣತಗೇರಿ, ನಾರಾಯಣ ಭಟ್ಟ ಕುಂಕಿಪಾಲ, ಶಿವರಾಮ ಭಟ್ಟ, ಎಸ್.ವಿ.ಭಟ್ಟ, ಟಿ.ವಿ.ಭಾಗ್ವತ್, ಟಿ.ಕೆ.ಭಾಗ್ವತ್, ಗಣಪತಿ ಭಟ್ಟ, ಶ್ರೀಪಾದ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.