ಯರಗಟ್ಟಿ: ಸ್ವಚ್ಚತೆ ಇಲ್ಲದೆ ನಾರುತ್ತಿರುವ ಬಸ್ ನಿಲ್ದಾಣ

Yaragati: The bus stop is smelling and unsanitary.

ಯರಗಟ್ಟಿ: ಸ್ವಚ್ಚತೆ ಇಲ್ಲದೆ ನಾರುತ್ತಿರುವ ಬಸ್ ನಿಲ್ದಾಣ

ಯರಗಟ್ಟಿ, 07:  ಇಲ್ಲಿನ ಬಸ್ ನಿಲ್ದಾಣವು ಮೂಲ ಸೌಕರ್ಯ ಇಲ್ಲದೆ ಅವ್ಯವಸ್ಥೆಯ ಆಗರವಾಗಿದ್ದು, ನಿತ್ಯವೂ ನೂರಾರು ವಾಹನಗಳು ನಿಲ್ದಾಣಕ್ಕೆ ಬಂದರೂ ಅಗತ್ಯ ಸೌಲಭ್ಯಗಳಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ. ಸದಾ ಬೀಗ ಹಾಕಿರುವ ಗಬ್ಬುನಾರುವ ಶೌಚಾಲಯ, ಎಲ್ಲೆಂದರಲ್ಲಿ ಬಂದು ನಿಲ್ಲುವ ಖಾಸಗಿ ದ್ವಿಚಕ್ರ ವಾಹನಗಳಿಂದಾಗಿ ರೋಸಿ ಹೋಗಿರುವ ನಿಲ್ದಾಣಾಧಿಕಾರಿ ಮೇಲಾಧಿಕಾರಿಗಳಿಗೆ ಕಣ್ಣು ಮುಚ್ಚಿ ಕುಳಿತಿದ್ದಾರೆ ಸಮಸ್ಯೆಯ ಗಂಭೀರತೆ ಕುರಿತು ತಿಳಿಸಿದಾಗ್ಯೂ ಯಾವುದೇ ಕ್ರಮ ಕೈಗೊಂಡಿಲ್ಲ.  

ನಿಲ್ದಾಣವು ಕಸದ ರಾಶಿಯಿಂದ ತುಂಬಿದ್ದು ಮಳೆ ಬಂದಾಗ ಪ್ರಯಾಣಿಕರು ನಿತ್ಯವೂ ಮೂಗು ಮುಚ್ಚಿಕೊಂಡು ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಾರ್ವಜನಿಕ ಶೌಚಾಲಯವು ಗಬ್ಬು ನಾರುತ್ತಿದ್ದು, ಮಹಿಳೆಯರು ಮತ್ತು ಮಕ್ಕಳು ನಿತ್ಯಕರ್ಮಕ್ಕೆ ಪರದಾಡುವಂತಾಗಿದೆ. ಮಳೆಯ ನೀರು ಸರಾಗವಾಗಿ ಹರಿಯದೆ ತಗ್ಗು ಪ್ರದೇಶದಲ್ಲಿ ನಿಂತು ಗಬ್ಬು ನಾರುತ್ತಿದೆ. ಅಲ್ಲದೆ ಬಸ್ ನಿಲ್ದಾಣವು ಬಯಲು ಶೌಚಾಲಯವಾಗಿ ಮಾರ​‍್ಪಟಟಿದೆ. ರಾತ್ರಿಯಾಗುತ್ತಿದ್ದಂತೆಯೇ ಬಸ್ ನಿಲ್ದಾಣದಲ್ಲಿ ಕುಡುಕರದ್ದೇ ದರ್ಬಾರು ಎಂಬಂತಾಗಿದೆ.  

ನಿಲ್ದಾಣದಲ್ಲಿ ಸಾರ್ವಜನಿಕರು ಬಸ್ ನಿಲುಗಡೆ ಜಾಗದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾರೆ. ಇದರಿಂದಾಗಿ ಹೊಲಸು ವಾಸನೆ ಹರಡಿ ಪ್ರಯಾಣಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ.ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಶೌಚಾಲಯದಲ್ಲಿ ವಿದ್ಯುತ್ ಸಂಪರ್ಕ ಇಲ್ಲ. ಸಿಸಿ ಕ್ಯಾಮೆರಾ ಇಲ್ಲದಿರುವುದರಿಂದ ಕುಡುಕರ ತಾಣವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ಮಹಿಳೆಯರ ವಿಶ್ರಾಂತಿ ಗೃಹ ಅಧಿಕಾರಿಗಳ ದ್ವಿಚಕ್ರ ವಾಹನ ನಿಲುಗಡೆಯಾಗಿದೆ.ಪಟ್ಟಣ ಪಂಚಾಯಿತಿ ಹಾಗೂ ರಸ್ತೆ ಸಾರಿಗೆ ಸಂಸ್ಥೆಗೆ ಹಲವಾರು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಮಹಿಳಾ ಪ್ರಯಾಣಿಕರ ಹಿತದೃಷ್ಟಿಯಿಂದ ಶೌಚಾಲಯದ ಸ್ವಚ್ಛತೆಗೆ ಹಾಗೂ ನಿರ್ವಹಣೆಗೆ ಶೀಘ್ರವೆ ಕ್ರಮ ಕೈಗೊಳ್ಳಬೇಕುಸೋಮು ರೈನಾಪೂರ, ರೈತ ಸಂಘದ ಜಿಲ್ಲಾಧ್ಯಕ್ಷ, ಯರಗಟ್ಟಿಹೇಳಿಕೆ: ಯರಗಟ್ಟಿ ಬಸ್ ನಿಲ್ದಾಣ ಕೇಂದ್ರ ಸ್ಥಾನವಾಗಿದೆ ಮತ್ತು ಬಸ್ ನಿಲ್ದಾಣ ಮಳಿಗೆಯಿಂದ ತಿಂಗಳಿಗೆ ಲಕ್ಷಾಂತರೂಗಳ ಬಾಡಿಗೆ ಹಣ ಪಡೆದರೂ ಅಭಿವೃದ್ಧಿ ಮರಿಚಿಕೆಯಾಗಿದೆ ಸ್ಥಳೀಯ ಸಾರಿಗೆ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದರೂ ಪ್ರಯೋಜನವಿಲ್ಲ-ಚಿದಂಬರ ಕಟ್ಟಿಮನಿ, ದಲಿತ ಮುಖಂಡರು, ಯರಗಟ್ಟಿ