ಅಧಿಕಾರ ಹಾಗೂ ಜವಾಬ್ದಾರಿ ಜನರ ಶ್ರೇಯೋಭಿವೃದ್ಧಿಗೆ ಬಳಸುತ್ತೇನೆ : ಶಾಸಕ ಪಠಾಣ

I will use my power and responsibility for the betterment of the people: MLA Pathana

ಅಧಿಕಾರ ಹಾಗೂ ಜವಾಬ್ದಾರಿ ಜನರ ಶ್ರೇಯೋಭಿವೃದ್ಧಿಗೆ ಬಳಸುತ್ತೇನೆ : ಶಾಸಕ ಪಠಾಣ  

   ಶಿಗ್ಗಾವಿ  14: ಕ್ಷೇತ್ರದ ಅಭಿವೃದ್ಧಿಗೆ ಹಿಂದೆ ದಾಖಲೆಯಲ್ಲಿ ನೂರಾರು ಕೋಟಿ ಅನುದಾನ ನೀಡಿದ್ದರೂ ಇಲ್ಲಿ ಕೆಲಸಗಳು ನಡೆದಿದ್ದು ಅಷ್ಟಕಷ್ಟೇ. ಉಪ ಚುನಾವಣೆಯಲ್ಲಿ 1 ಸಾವಿರ ಕೋಟಿ ಅನುದಾನ ನೀಡಿದ ಭರವಸೆಯಂತೆ 350 ಕೋಟಿ ನೀಡಿದ್ದು,ಕ್ಷೇತ್ರದ ಜನರು ನೀಡಿರುವ ಶಾಸಕ ಸ್ಥಾನದ ಅಧಿಕಾರ ಜವಾಬ್ದಾರಿಯನ್ನು ಜನರ ಶ್ರೇಯೋಭಿವೃದ್ಧಿಗೆ ಬಳಸುತ್ತೇನೆ. ಗುಲಗಂಜಿಯಷ್ಟು ವೈಯಕ್ತಿಕ ಲಾಭಕ್ಕೆ ಬಳಿಸಲ್ಲ ಎಂದು ಶಾಸಕ ಯಾಸೀರಖಾನ್ ಪಠಾಣ ಹೇಳಿದರು.   ತಾಲೂಕಿನ ಬಸವನಕಟ್ಟಿ, ಭದ್ರಾಪುರ ಗ್ರಾಮಗಳಲ್ಲಿ ಭಾನುವಾರ ವಿವಿಧ ಯೋಜನೆಯಡಿ 11 ಕೋಟಿ ವೆಚ್ಚದಲ್ಲಿ ಕಾರವಾರ-ಇಳಕಲ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ಜನರ ಬೇಕುಗಳಿಗೆ ಸ್ಪಂದಿಸಿ ಸರಕಾರ ಅನುದಾನ ನೀಡಿದೆ. ಎರಡು ತಿಂಗಳದಲ್ಲಿ ಗುಣಮಟ್ಟದ ರಸ್ತೆ ಕಾಮಗಾರಿ ಪೂರ್ಣಗೊಳಿಸಿ ಈ ಭಾಗದ ಜನರಿಗೆ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಅಧಿಕಾರಿ, ಗುತ್ತೆಗೆದಾರರಿಗೆ ಸೂಚಿಸಿದರು.  ಗ್ರಾಮದ ಸಾರ್ವಜನಿಕರ ಮನೆಗೆ ತೊಂದರೆಯಾಗದಂತೆ ಸಿಸಿ ರಸ್ತೆ ನಿರ್ಮಿಸಬೇಕು. ಸರಕಾರ ಈಗಾಗಲೇ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ವಿವಿಧ ಯೋಜನೆಯಡಿ 1 ಸಾವಿರ ಕೋಟಿ ಅನುದಾನ ನೀಡುತ್ತಿದ್ದು, 100 ಕೋಟಿ ನೀರಾವರಿಗೆ ವಿಶೇಷ ಅನುದಾನ ನೀಡಿದೆ. 100 ಕೋಟಿ ಅನುದಾನ ವಿವಿಧ ಕೆಲಸಗಳಿಗೆ ನೀಡುತ್ತಿದೆ ಎಂದರು.ಮುಖ್ಯಮಂತ್ರಿಗಳು ಸವಣೂರು-ಬಂಕಾಪುರ ಕುಡಿಯವ ನೀರಿನ ಯೋಜನೆಗೆ 2 ನೂರು ಕೋಟಿ ನೀಡಿದ್ದಾರೆ. ಸಂಪುಟಕ್ಕೆ ಬಂದು ಟೆಂಡರ್ ಆಗಬೇಕಿದೆ. ಸರಕಾರ ಗ್ಯಾರೆಂಟಿಗಳ ಯೋಜನೆ ಜತೆಗೆ ಶಿಗ್ಗಾವಿ ಕ್ಷೇತ್ರಕ್ಕೆ ಅಗತ್ಯ ಅನುದಾನ ನೀಡುತ್ತಿದೆ. ಕೋಣನಕೇರಿ ಗ್ರಾಪಂ.ವ್ಯಾಪ್ತಿಯ ವಿವಿಧ ಕಾಮಗಾರಿಗೆ ಸುಮಾರು 16 ಕೋಟಿ ಅನುದಾನ ನೀಡಿದ್ದಾಗಿ ಶಾಸಕರು ತಿಳಿಸಿದರು .ಬಾಕ್ಸ್‌ ಸುದ್ದಿ :ಹಕ್ಕುಪತ್ರ ಇಲ್ಲದೆ ವಾಸವಾದ ಭದ್ರಾಪುರ, ಬಸವನಕಟ್ಟಿ, ಗೌಳೇರದಡ್ಡಿ, ಶಿವಪುರ, ಜಕ್ಕನಕಟ್ಟಿ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತಹಸೀಲ್ದಾರ್‌ರಿಗೆ ಸೂಚಿಸಲಾಗಿದೆ ಶಾಸಕ ಯಾಸೀರಖಾನ ಪಠಾಣ  ಈ ಸಂದರ್ಭದಲ್ಲಿ ಶೇಖಪ್ಪ ಮಣಕಟ್ಟಿ, ಗುಡ್ಡಪ್ಪ ಜಲದಿ, ಮಹಾಂತೇಶ ಸಾಲಿ, ಸುಧೀರ ಲಮಾಣಿ, ಮಂಜುನಾಥ ಹಿರೂರು, ಮಂಜುನಾಥ ತಿಮ್ಮಾಪುರ, ನಾಗರಾಜ ಶಿಂದೆ, ಗೌಸಖಾನ ಮುನಸಿ, ಮುನ್ನಾ ಲಕ್ಷ್ಮೇಶ್ವರ, ಸೇರಿದಂತೆ ಗ್ರಾಪಂ.ಅಧ್ಯಕ್ಷರು,ಸದಸ್ಯರು ಉಪಸ್ಥಿತರಿದ್ದರು.