ಲೋಕದರ್ಶನ ವರದಿ
ಯಲುಬುರ್ಗಾ 12: ಹೆಣ್ಣು ಸಂಸಾರದ ಕಣ್ಣು, ಭಾರತದ ಮಾತೃ ಭೂಮಿ, ಎಲ್ಲರ ಹಿತವನ್ನು ಕಾಪಾಡಿಕೊಂಡು ತನ್ನ ಮನೆಯನ್ನು ನಂದಾ ಗೋಕುಲವನ್ನಾಗಿ ಮಾಡುತ್ತಾಳೆ, ಇಂತಹ ಮಹಿಳೆಯ ತ್ಯಾಗ, ಪ್ರೀತಿ, ಸಹನೆ, ತಾಳ್ಮೆ ಗುಣಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಅವಳ ಸೇವೆ ಅಪಾರವಾದದು ಎಂದು ಯಲುಬುರ್ಗಾದ ಈಶ್ವರಿ ವಿದ್ಯಾಲಯದ ಸಂಚಾಲಕಿ ಉಮಾ ಅಕ್ಕನವರು ಹೇಳಿದರು,
ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಮಹಿಳಾ ವಿಕಾಸ ಕೇಂದ್ರ ಸಹಯೋಗದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸೃಜನಶೀಲ ಸಮಾರೋಪ ಕಾರ್ಯಕ್ರಮ ಸ್ತ್ರೀ ಶಕ್ತಿ ಭವನದಲ್ಲಿ ಜರುಗಿದ ದಿನಾಚರಣೆಗೆ ದೀಪ ಬೆಳಗಿಸಿ ಮಾತನಾಡಿದರು.
ಮಹಿಳೆಯರು ಹೈನುಗಾರಿಕೆ, ಕುರಿಸಾಕಣೆ, ಹಣಕಾಸಿನ ನೆರವು ಪಡೆದು ಕೊಂಡು ಆಥರ್ಿಕವಾಗಿ ಸಮಾಜ ಮುಖಿಯಾಗಿ ಮುಖ್ಯ ವಾಹಿನಿಗೆ ಬರುವುದರ ಜೋತೆಗೆ ಮತ್ತು ಧರ್ಮಸ್ಥಳ ಪೂಜ್ಯ ವಿರೇಂದ್ರ ಹೆಗಡೆಯವರು ಮಹಿಳೆಯರಿಗಾಗಿ ಸಾಕಷ್ಟು ಯೋಜನೆಗಳನ್ನ ನಾಡಿಗೆ ಸಮರ್ಪಣೆ ಮಾಡಿದ್ದಾರೆ ಆ ಕಾರ್ಯಕ್ರಮದ ಯೋಜನೆಗಳನ್ನು ಪಡೆದುಕೊಂಡು ಉತ್ತಮ ಸಾಧನೆ ಮಾಡಿರುತ್ತಾರೆ ಎಂದರು.
ಕೊಪ್ಪಳದ ಧರ್ಮಸ್ಥಳದ ಜಿಲ್ಲಾ ನಿದರ್ೇಶಕ ಎಚ್.ಎಲ್.ಮುರಳಿಧರ ಮಾತನಾಡಿ. ಒಬ್ಬ ತಾಯಿ ಹತ್ತು ಮಕ್ಕಳನ್ನು ಸಾಕಿ ಸಲಹುತ್ತಾಳೆ ಆದರೆ ಹತ್ತು ಮಕ್ಕಳು ಸೇರಿ ಒಬ್ಬ ತಾಯಿಯನ್ನು ಜೋಪಾನ ಮಾಡುವದಿಲ್ಲ ಆದ್ದರಿಂದ ಮಹಿಳೆಯರೆ ಹೆಚ್ಚಾಗಿ ತಂದೆ ತಾಯಿಗಳನ್ನು ಪ್ರೀತಿಯಿಂದ ಸಾಕಿ ಸಲಹುತ್ತಿದ್ದಾರೆ, ನಮಗೆ ಗಂಡು ಮಕ್ಕಳು ಬೇಕು ಎಂದವರು ಇಂದು ವೃದ್ಧಾಶ್ರಮದಲ್ಲಿದ್ದಾರೆ ಇದನ್ನು ಅರಿತುಕೊಂಡು ಇನ್ನೂ ಮುಂದಾದರು ನಾವು ನಮಗೆ ಯಾವ ಮಕ್ಕಳು ಬೇಕು ಎಂದು ಅರಿತುಕೊಳ್ಳಬೇಕು ಮತ್ತು ಮಗು ಯಾವುದಾದರೆನು? ಸಮಾನ ದೃಷ್ಠಿಯಿಂದ ಬೆಳೆಸುವ ಮನೋಭಾವನೆಗಳನ್ನು ನಾವೇಲ್ಲರು ಜೀವನದಲ್ಲಿ ಅಳವಡಿಸಿಕೊಂಡಾಗ ಇಂತಹ ದಿನಾಚಾರಣೆಗೆ ಒಳ್ಳೆಯ ಮೆರಗು ಬರುವದಕ್ಕೆ ಸಾಧ್ಯ ಎಂದರು.
ತಾ.ಪಂ.ಅಧ್ಯಕ್ಷೆ ಲಕ್ಮೀ ದ್ಯಾಮಪ್ಪಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಯೋಜನಾಧಿಕಾರಿ ರಾಜೇಶ, ಪಪಂ.ಮಾಜಿ ಅಧ್ಯಕ್ಷೆ ಜಯಶ್ರೀ ಅರಕೇರಿ, ಜ್ಞಾನ ವಿಕಾಶ ಸಮನ್ವಯಾದಿಕಾರಿ ಸುಧಾ ಹೋಸಳ್ಳಿ, ಒಕ್ಕುಟದ ಪ್ರತಿನಿಧಿಗಳಾದ ರತ್ನಮ್ಮ ತಳಕಲ್, ಗೌರಮ್ಮ ಬಡಿಗೇರ, ಶೈಲಾಶ್ರೀ ಬಾ. ಪಾಟೀಲ್, ಅನ್ನಪೂರ್ಣ ಹಿರೇಕುರಬರ ಭಾಗವಹಿಸಿದ್ದರು.