ನವದೆಹಲಿ, ಡಿ ೨೫, ಒಲಿಂಪಿಯನ್ ಫೈಲ್ವಾನ್
ಗೀತಾ ಪೋಗಟ್ ಅವರ ಮನೆಗೆ ಕ್ರಿಸ್
ಮಸ್ ಸಂಭ್ರಮ ಒಂದು ದಿನ ಮೊದಲೇ ಆಗಮಿಸಿದೆ. ಪೋಗಟ್ ಗಂಡು ಮಗುವಿಗೆ
ಜನ್ಮ ನೀಡಿದ್ದಾರೆ. ಗೀತಾ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ
ಮಗನೊಂದಿಗೆ ತಾನು ಇರುವ ಫೋಟೋ ಹಂಚಿಕೊಂಡಿದ್ದಾರೆ. ಅವರ ಪತಿ ಪವನ್ ಕುಮಾರ್ ಕೂಡ ಈ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ. ಫೋಟೋ ವಿನಿಮಯ
ಮಾಡಿಕೊಂಡಿರುವ ಆಕೆ, ... ಹಲೋ
ಬಾಯ್ ... ಈ ಪ್ರಪಂಚಕ್ಕೆ ನಿನಗೆ ಸ್ವಾಗತ.
ಎಲ್ಲರೂ ಪ್ರೀತಿಯಿಂದ ಆಶೀರ್ವದಿಸಿ. ಪುಟ್ಟ ಕಂದ
ನನ್ನ ಜೀವನದಲ್ಲಿ ಶಾಂತಿ, ನೆಮ್ಮದಿ ತಂದಿದ್ದಾನೆ
ಎಂದು ಬರೆದುಕೊಂಡಿದ್ದಾರೆ