ಸ್ವಾವಲಂಬಿ ಬದುಕಿಗೆ ಎನ್.ಎಸ್.ಎಸ್. ಮಾರ್ಗದರ್ಶಕ : ಆರ್. ಎಂ. ವಾಲಿ
NSS Guide for Self-reliant Living: R. M. Wali
ಗೋಕಾಕ 14 : ವಿದ್ಯಾರ್ಥಿಗಳು ಸ್ವಾವಲಂಬಿಗಳಾಗಿ ಬದುಕಲು ಎನ್.ಎಸ್.ಎಸ್. ಮಾರ್ಗದರ್ಶಕವಾಗಿದೆ. ಆದ್ದರಿಂದ ಎಲ್ಲ ಶಿಬಿರಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಗೋಕಾಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಆರ್. ಎಂ. ವಾಲಿಯವರು ತಿಳಿಸಿದರು.
ಜೆ. ಎಸ್. ಎಸ್. ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಗೋಕಾಕ ಇವರ ವತಿಯಿಂದ ಬೆಣಚಿನಮರಡಿ(ಕೊ) ಗ್ರಾಮದಲ್ಲಿ ಹಮ್ಮಿಕೊಂಡಿದ್ದ 2025-26ನೇ ಸಾಲಿನ ಎನ್.ಎಸ್.ಎಸ್. ಘಟಕ(1 ್ಘ 2)ಗಳ ಸಂಯುಕ್ತ ಆಶ್ರಯದಲ್ಲಿ ಏರಿ್ಡಸಿದ್ದ ವಾರ್ಷಿಕ ವಿಶೇಷ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ. ಬಿ. ಎಂ. ತುರಡಗಿ ವಹಿಸಿದ್ದರು.
ಉಪ-ಪ್ರಾಂಶುಪಾಲರಾದ ಡಾ. ಆರ್. ಎಸ್. ಬಳಿಗಾರ, ಊರಿನ ಹಿರಿಯರಾದ ಬಾಳೇಶ ಅ. ಗಿಡ್ನವರ, ಶಿಕ್ಷಕಿಯರಾದರತ್ನ ನಾಯಕ, ಗ್ರಾಮ ಪಂಚಾಯಿತಿ ಪಿ.ಡಿ.ಓ. ಅಡಿವೇಶ ಬಂಕಾಪುರ, ಕಾರ್ಯದರ್ಶಿಗಳಾದ ಭೀಮಶೆಪ್ಪ ಬುಳ್ಳಿ, ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿಗಳಾದ ಡಾ. ಸಿ. ಎ. ಮಸರಗುಪ್ಪಿ(ಘಟಕ-1), ಎಂ. ವ್ಹಿ. ಗೊರಗುದ್ದಿ(ಘಟಕ-2) ಉಪಸ್ಥಿತರಿದ್ದರು. ಕುಮಾರಿ ಲಕ್ಷ್ಮೀ ಬಾಗಡಿ ಕಾರ್ಯಕ್ರಮ ನಿರೂಪಣೆ ಮಾಡಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 