ನಗರದ 27 ನೇ ವಾರ್ಡಿನ ಚೀಕ್ಕಲಗೇರ ಕಾಲನಿಯಲ್ಲಿ ಹೈ ಮಾಸ್ಕ್‌ ವಿದ್ಯುತ್ ದೀಪ ಲೋಕಾರೆ​‍್ಣ

ನಗರದ 27 ನೇ ವಾರ್ಡಿನ ಚೀಕ್ಕಲಗೇರ ಕಾಲನಿಯಲ್ಲಿ ಹೈ ಮಾಸ್ಕ್‌ ವಿದ್ಯುತ್ ದೀಪ ಲೋಕಾರೆ​‍್ಣ High-mast electric lamp goes public in Chikkalagera Colony of Ward 27 of the city

ಲೋಕದರ್ಶನ ವರದಿ 

ಗದಗ 14: ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯ 27 ನೇ ವಾರ್ಡಿನ ವ್ಯಾಪ್ತಿಯಲ್ಲಿ ಬರುವ ಸಂಭಾಪೂರ ರಸ್ತೆಯ ಸಿದ್ದಾರ್ಥ ನಗರ ( ಚೀಕ್ಕಲಗೇರ ಕಾಲನಿ) ಬಡಾವಣೆಯಲ್ಲಿ ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಷ್ಠಾನಗೊಂಡ  ಮಿನಿ ಹೈ ಮಾಸ್ಕ್‌ ವಿದ್ಯುತ್ ದೀಪದ ಅನಾವರಣವನ್ನು ಇದೇ ದಿನಾಂಕ 12/03/2026 ರಂದು ಬೆಳಿಗ್ಗೆ 10 ಘಂಟೆಗೆ ಗದಗ ಶಹರ ಯುವ ಕಾಂಗ್ರೇಸ್ ಸಮಿತಿಯ ಅಧ್ಯಕ್ಷರಾದ ಕೃಷ್ಣಗೌಡ ಪಾಟೀಲ್, ಹಾಗೂ ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಅಕ್ಬರ್ ಸಾಬ್ ಬಬರ್ಚಿಯವರಿಂದ ವಾರ್ಡಿನ ಜನಪ್ರಿಯ ನಗರಸಭಾ ಸದಸ್ಯಣಿಯರಾದ ಶ್ರೀಮತಿ ಲಲಿತಾ ಬಿ ಅಸೂಟಿ ಯವರ ನೇತೃತ್ವದಲ್ಲಿ ಮಿನಿ ಹೈ ಮಾಸ್ಕ್‌ ವಿದ್ಯುತ್ ದೀಪದ ಉದ್ಘಾಟನೆಗೊಳಿಸಿ ಲೋಕಾರೆ​‍್ಣಗೊಳಿಸಲಾಯಿತು. ಈ ಸಂಧರ್ಭದಲ್ಲಿ ಗದಗ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಶ್ರೀ ಬಿ ಬಿ ಅಸೂಟಿ, ಎಸ್ ಏನ್ ಬಳ್ಳಾರಿ, ಸಿದ್ದಾರ್ಥ ನಗರದ ಬಡಾವಣೆಯ ಅಧ್ಯಕ್ಷರಾದ ಧರ್ಮಣ್ಣ ಹೊಸಮನಿ, ಬಸವರಾಜ ಹೊಸಮನಿ, ಗಣೇಶ ಹೊಸಮನಿ, ಹರೀಶ ಹೊಸಮನಿ, ಶಂಕರ ಹೊಸಮನಿ, ಪರಶುರಾಮ್ ಹಾಗೂ ಬಡಾವಣೆಯ ಸಮಸ್ತ ಬಂಧು ಭಾಂದವರು ಉಪಸ್ಥಿತರಿದ್ದರು.