2019-20ನೇ ಸಾಲಿನ ಕಬ್ಬು ಅರೆಯುವ ಯಂತ್ರಕ್ಕೆ ಪೂಜೆ

ಲೋಕದರ್ಶನ ವರದಿ

ಮಾಂಜರಿ 18 : ಸಮೀಪದ ಜೈನಾಪೂರ ಗ್ರಾಮದ ಓಂ ಶುಗರ ಲಿ. ಸಕ್ಕರೆ ಕಾಖರ್ಾನೆಯಲ್ಲಿ 2019-20ನೇ ಸಾಲಿನ ಕಬ್ಬು ಅರೆಯುವ ಕಾರ್ಯಕ್ಕೆ, ತೂಕ ಮಾಡುವಯಂತ್ರ ಮತ್ತು ಕೇನ ಕ್ಯಾರಿಯರಕ್ಕೆ ಪೂಜೆ ಸಲ್ಲಿಸಿ ಕೇನ ಕ್ಯಾರಿಯರದಲ್ಲಿ ಕಬ್ಬು ಹಾಕುವ ಮೂಲಕ ನಿಡಸೋಶಿಯ ಶ್ರೀ ಪಂಚನ ಶಿವಲಿಂಗೇಶ್ವರ ಮಹಾಸ್ವಾಮಿಜಿ ಮತ್ತು ರಾಜನಹಳ್ಳಿ ವಾಲ್ಮೀಕಿ ಪೀಠದ ಶ್ರೀ ಪ್ರಸನ್ನಯ್ಯಾ ಸ್ವಾಮಿಜಿಗಳು ಸೋಮವಾರ ಚಾಲನೆ ನೀಡಿದರು. 

ನಂತರ ಕಾರಖಾನೆಯ ಸಂಸ್ಥಾಪಕ ರಾವಸಾಹೇಬ ಅವರು ಮಾತನಾಡಿಕಳೆದ 2018-19 ನೇಸಾಲಿನಲ್ಲಿ ರೈತರು ಕಳುಹಿಸಿದ ಪ್ರತಿಟನ್ನ ಕಬ್ಬಿಗೆ 2,700 ರೂ ನೀಡಲಾಗಿದೆ. ಪ್ರಸಕ್ತ ಸಾಲನಲ್ಲಿ 3 ಲಕ್ಷ ಮೆ.ಟನ್ನ್ಕಬ್ಬು ನುರಿಸುವಗುರಿಹೊಂದಲಾಗಿದ್ದು, ರೈತರು ಕಳುಹಿಸಿದ ಪ್ರತಿಟನ್ ಕಬ್ಬಿಗೆ 1 ಕಿಲೊ ಸಕ್ಕರೆ ನೀಡುವುದಾಗಿ ಹೇಳಿದರು. 

ಪ್ರಸಕ್ತ ಸಾಲಿನಲ್ಲಿ ಬರಗಾಲ, ಪ್ರವಾಹ, ಅತಿವೃಷ್ಟಿಯಿಂದಾಗಿ ಕಬ್ಬು ಉತ್ಪಾದಕರು ಸಂಕಷ್ಟದಲ್ಲಿದ್ದು, ರೈತರು ನೊಂದಾಯಿಸಿದ ಸಂಪೂರ್ಣಕಬ್ಬನ್ನು ನುರಿಸಿ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು, ಎಲ್ಲ ಕಾರಖಾನೆಗಳ ಜೋತೆಗೆ ನಮ್ಮ ಕಾರಖಾನೆಯೂ ಸಹ ಪ್ರಸಕ್ತ ಸಾಲಿನ ಕಬ್ಬಿಗೆ ವೈಜ್ಞಾನಿಕ ಬೆಲೆ ನೀಡಲಾಗುವುದು, ಬರುವ ದಿನಗಳಲ್ಲಿ ಕಾರಖಾನೆಯು ಡಿಸ್ಟಿಲರಿ ಘಟಕ ಪ್ರಾರಂಭಿಸಲಿದೆಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಕಾಕಾಸಾಹೇಬ ಪಾಟೀಲ ಮತ್ತು ಸುಭಾಷಜೋಷಿ, ಕಾರಖಾನೆಯ ಅಧ್ಯಕ್ಷ ಅಭಿನಂದನ ಪಾಟೀಲ, ಉತ್ತಮ ಪಾಟೀಲ, ಬಿ.ಆರ್.ಸಂಗಪ್ಪಗೋಳ, ಶ್ರೀಣಿಕ ಪಾಟೀಲ, ಇಂದ್ರಜೀತ ಪಾಟೀಲ, ಸುದರ್ಶನ್ಖೋತ, ಭಾಲಚಂದ್ರ ಪಾಟೀಲ, ಆರ್.ಜಿ.ಪಾಟೀಲ, ಅಶೋಕ ಪಡನಾಡ, ಜೀವನ ಪಾಟೀಲ, ಸತೀಶ ಪಾಟೀಲ, ಮೀನಾಕ್ಷಿ ಪಾಟೀಲ, ಕಾರಖಾನೆಯ ಸಿ.ಇ.ಒ ಆರ್.ಕೆ.ಶೇಟ್ಟಿ, ರೈತರು ಪಾಲ್ಗೋಂಡಿದ್ದರು.