ವಿಶ್ವರಂಗಭೂಮಿ ದಿನಾಚರಣೆ

World Theatre Day

ವಿಶ್ವರಂಗಭೂಮಿ ದಿನಾಚರಣೆ 

  

ಧಾರವಾಡ 2 :  ಸ್ನೇಹಿತರು ಕಲಾ ಸಂಘ (ರಿ) ಧಾರವಾಡ ಈಗಾಗಲೇ 1985ರಿಂದ ಸಕ್ರೀಯವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುತ್ತಾ ಪ್ರಚಲಿತಗೊಂಡಿದ್ದು ಹಲವಾರು ಎಲೆಮರೆಯ ಕಾಯಿಯಂತೆ ಇದ್ದ ಹಲವಾರು ಕಲಾವಿದರಿಗೆ ವಿಶ್ವರಂಗಭೂಮಿ ದಿನಾಚರಣೆಯ ದಿನದಂದು ರಂಗಸ್ನೇಹಿತ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ ಈ ಬಾರಿಯ ದಿ. ಅನಂತಮೂರ್ತಿ ಅರ್ಚಕ ಸ್ಮರಣಾರ್ಥ ನೀಡುವ 2025ರ ರಂಗಸ್ನೇಹಿತ ಪ್ರಶಸ್ತಿಯನ್ನು ಮೈಸೂರಿನ ಹಿರಿಯ ರಂಗಭೂಮಿ ಕಲಾವಿದ ನಟ ನಿರ್ದೇಶಕ ಸಂಘಟಕರಾದ ಹುಲಗಪ್ಪ ಕಟ್ಟಿಮನಿ ರವರಿಗೆ ಹಾಗೂ ದಿ.  ಅಶೋಕ ಬೆಣ್ಣೂರ ಸ್ಮರಣಾರ್ಥವಾಗಿ ನೀಡುವ ಪ್ರಶಸ್ತಿಯನ್ನು ಬಾಗಲಕೋಟೆಯ ಹಿರಿಯ ಲೇಖಕರು ನಾಟಕಕಾರರಾದ ಆನಂದ ಝಂಜರವಾಡ ಇವರಿಗೆ ಇದೇ ಬರುವ ದಿನಾಂಕ 04.04.2025 ಶುಕ್ರವಾರ ರಂದು ರಂಗಾಯಣದ ಸಾಂಸ್ಕೃತಿಕ ಸಮುಚ್ಛಯ ಭವನ ಧಾರವಾಡದಲ್ಲಿ ಸಂಜೆ 5.30 ಘಂಟೆಗೆ ನೀಡಿ ಗೌರವಿಸಲಾಗುತ್ತಿದೆ.  


ಅಂದು ಕಾರ್ಯಕ್ರಮದ ಉದ್ಘಾಟನೆಯನ್ನು ಡಾ.ಪಿ.ಎಲ್ ಪಾಟೀಲ ಕುಲಪತಿಗಳು, ಕೃಷಿ ವಿಶ್ವವಿದ್ಯಾಲಯ ಧಾರವಾಡ ನೇರೆವೆರಿಸಲಿದ್ದು ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯ ನಿರ್ದೇಶಕರಾದ ಕುಮಾರ ಬೆಕ್ಕೇರಿ ಡಾ. ರಾಜು ತಾಳಿಕೋಟಿ ನಿರ್ದೇಶಕರು ರಂಗಾಯಣ, ಧಾರವಾಡ. ಹರ್ಷ ಡಂಬಳ ರಂಗ ಚಿಂತಕರು ಧಾರವಾಡ ಕೆ.ಎಚ್‌.ಚನ್ನೂರ ಜಂಟಿ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ ಶಶಿಕಲಾ ಹುಡೇದ ಆಡಳಿತಾಧಿಕಾರಿಗಳು ರಂಗಾಯಣ ಧಾರವಾಡ. ಅಧ್ಯಕ್ಷತೆಯನ್ನು ಚಂದ್ರಶೇಖರ ರೊಟ್ಟಿಗವಾಡ ನಿರ್ದೇಶಕರು ಪ್ರಸಾರಂಗ ಕವಿವಿ,ಧಾರವಾಡ ವೇದಿಕೆಯ ಮೇಲೆ ಉಪಸ್ಥಿತರಿರುವರು. ಪ್ರಾಸ್ತಾವಿಕ ಸಂಘದ ಅಧ್ಯಕ್ಷರಾದ ವಿಜಯೀಂದ್ರ ಅರ್ಚಕ ಮಾಡಲಿದ್ದಾರೆ.  


ನಂತರ ಡಾ.ನಿಂಗು ಸೊಲಿಗಿಯವರ ಪ್ರೇಮ ಪತ್ರಗಳ ಕೃತಿಯ ರಂಗ ಪ್ರಯೋಗ “ದಾಂಪತ್ಯ ಗೀತ” ನಾಟಕ ಪ್ರದರ್ಶನಗೊಳ್ಳಲಿದ್ದು ರಂಗರೂಪ ಮತ್ತು ನಿರ್ದೇಶನ  ಮಹಾಂತೇಶ ರಾಮದುರ್ಗ ಸಂಗೀತ ರಾಘವ ಕಮ್ಮಾರ ರಂಗದ ಮೇಲೆ ಶ್ರೀಕಾಂತ ಮತ್ತು ಅಕ್ಕುಶ್ರಿ ನವಲಗೇರಿ ಅಭಿನಯಿಸಲಿದ್ದಾರೆ. ಪ್ರವೇಶವು ಉಚಿತವಾಗಿರುವುದರಿಂದ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವಿಶ್ವರಂಗಭೂಮಿ ದಿನಾಚರಣೆಯನ್ನು ಯಶಸ್ವಿಗೊಳಿಸಬೇಕಾಗಿ ಎಂದು ಸ್ನೇಹಿತರು ಕಲಾಸಂಘದ ಅಧ್ಯಕ್ಷರಾದ ವಿಜಯೀಂದ್ರ ಅರ್ಚಕ ಹಾಗೂ ಸಂತೋಷ ಮಹಾಲೆ ಪತ್ರಿಕಾ ಪ್ರಕಟನೆಯಲ್ಲಿ ಈ ಮೂಲಕ ತಿಳಿಸಿದ್ದಾರೆ.